• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಮೇಲ್ಮನೆ ಚುನಾವಣೆ ಶಾಂತಿಯುತ; ಕೃಷ್ಣಗೆ ಜಯಭೇರಿ ವಿಶ್ವಾಸ

By Staff
|

ಮೇಲ್ಮನೆ ಚುನಾವಣೆ ಶಾಂತಿಯುತ; ಕೃಷ್ಣಗೆ ಜಯಭೇರಿ ವಿಶ್ವಾಸ

ವಿಧಾನ ಪರಿಷತ್‌ನ 25 ಕ್ಷೇತ್ರಗಳ ಚುನಾವಣೆ ಫಲಿತಾಂಶ ಡಿ. 3ಕ್ಕೆ

ಬೆಂಗಳೂರು : ಮುಂದಿನ ವರ್ಷ ನಡೆಯಲಿರುವ ಸಾರ್ವತ್ರಿಕ ಚುನಾವಣೆಯ ಸಾಣೆ ಎಂದೇ ಪರಿಗಣಿತವಾಗಿರುವ ವಿಧಾನ ಪರಿಷತ್ತಿನ 25 ಸ್ಥಾನಗಳಿಗೆ ಸೋಮವಾರ (ಡಿ.01) ಚುನಾವಣೆ ಶಾಂತ ರೀತಿಯಲ್ಲಿ ನಡೆದಿದೆ.

ಸರಾಸರಿ ಸುಮಾರು 60 ಪ್ರತಿಶತ ಮತದಾನ ನಡೆದಿದ್ದು, ಕಾಂಗ್ರೆಸ್‌, ಜಾತ್ಯತೀತ ಜನತಾ ದಳ, ಅಖಿಲ ಭಾರತ ಪ್ರಗತಿಪರ ಜನತಾ ದಳ ಮತ್ತು ಬಿಜೆಪಿ ಮೇಲ್ಮನೆಯಲ್ಲಿ ತಮ್ಮ ಸಂಖ್ಯಾ ಬಲಾಬಲ ಹೆಚ್ಚಿಸಿಕೊಳ್ಳುವ ಉಮೇದಿನಲ್ಲಿವೆ. ಎಲ್ಲಾ ಪಕ್ಷಗಳ ಒಟ್ಟು 94 ಅಭ್ಯರ್ಥಿಗಳು ಚುನಾವಣಾ ಕಣದಲ್ಲಿದ್ದಾರೆ. ಈ ಪೈಕಿ ಕಾಂಗ್ರೆಸ್‌ನ 23, ಜಾತ್ಯತೀತ ಜನತಾ ದಳದ 19, ಅಖಿಲ ಭಾರತ ಪ್ರಗತಿಪರ ಜನತಾ ದಳದ 18 ಹಾಗೂ ಬಿಜೆಪಿಯ 10 ಅಭ್ಯರ್ಥಿಗಳಿದ್ದಾರೆ.

ಮುಖ್ಯಮಂತ್ರಿ ಎಸ್‌.ಎಂ.ಕೃಷ್ಣ ಅವರ ತಮ್ಮ ಎಸ್‌.ಎಂ.ಶಂಕರ್‌, ಸಚಿವರಾದ ಟಿ.ಜಾನ್‌, ಬಸವರಾಜ ಪಾಟೀಲ್‌ ಹುಮ್ನಾಬಾದ್‌, ಮಾಜಿ ಸಚಿವ ಹಿಂಡಸಗೇರಿ ಹಾಗೂ ಜಾತ್ಯತೀತ ಜನತಾ ದಳದ ನಾಯಕ ಬಸವರಾಜ ಬೊಮ್ಮಾಯಿ ಗಾದಿ ಬಯಸಿ, ಚುನಾವಣೆಯಲ್ಲಿ ನಿಂತಿರುವ ಪ್ರಮುಖರು. ಚುನಾವಣೆಯಲ್ಲಿ ಮತ ಗಿಟ್ಟಿಸುವ ಸಲುವಾಗಿ ಸಮುದಾಯ ಊಟದಂಥಹ ಗಿಮಿಕ್ಕುಗಳನ್ನು ಅನೇಕ ಪ್ರಮುಖ ಪಕ್ಷಗಳು ಮಾಡಿದ್ದವು.

13 ಕಾಂಗ್ರೆಸ್‌ ಸದಸ್ಯರು, ಜಾತ್ಯತೀತ ದಳದ 6, ಅಖಿಲ ಭಾರತ ಪ್ರಗತಿಪರ ಜನತಾದಳದ 3, ಬಿಜೆಪಿಯ ಇಬ್ಬರು ಹಾಗೂ ತಟಸ್ಥ ಜನತಾ ದಳದ ಒಬ್ಬ ಸದಸ್ಯರು ಬರುವ ಜನವರಿಯಲ್ಲಿ ವಿಧಾನ ಪರಿಷತ್ತಿನ ಸದಸ್ಯತ್ವದಿಂದ ನಿವೃತ್ತರಾಗಲಿರುವ ಕಾರಣಕ್ಕೆ ಈ ಚುನಾವಣೆ ನಡೆಯಿತು. ಮೇಲ್ಮನೆಯಲ್ಲಿ ಸಂಖ್ಯಾ ಬಲ ಹೆಚ್ಚಳ ಎಲ್ಲ ಪಕ್ಷಗಳ ಗುರಿಯಾಗಿದೆ. ಡಿಸೆಂಬರ್‌ 3ನೇ ತಾರೀಕು ಮತ ಎಣಿಕೆ ನಡೆಯಲಿದ್ದು, ಜನಮತ ಯಾರ ಪರ ಎಂಬುದು ಗೊತ್ತಾಗಲಿದೆ.

ವೋಟು ಹಾಕಲು ಕೃಷ್ಣ ಮದ್ದೂರಿಗೆ ಹೋದರು

ತಮ್ಮ ಏಳು ಸೋದರಿಯರ ಜೊತೆ ಐರಾವತ ಬಸ್‌ ಹತ್ತಿ ಮದ್ದೂರಿಗೆ ವೋಟು ಹಾಕಲು ಕೃಷ್ಣ ಹೋದರು. ಬಸ್‌ ಹತ್ತುವ ಮುನ್ನ ಸುದ್ದಿಗಾರರ ಜೊತೆ ಮಾತಾಡಿದ ಅವರು ತಮ್ಮ ಪಕ್ಷದ ಇಪ್ಪತ್ಮೂರೂ ಅಭ್ಯರ್ಥಿಗಳಿಗೆ ಜಯ ಕಟ್ಟಿಟ್ಟ ಬುತ್ತಿ ಎಂದು ವಿಶ್ವಾಸದಿಂದ ಹೇಳಿದರು. ಅದು ಹೇಗೆ ಹೇಳುತ್ತೀರಿ ಎಂಬ ಕೆಣಕಿಗೆ, ಡಿಸೆಂಬರ್‌ 3ನೇ ತಾರೀಕಿನ ಫಲಿತಾಂಶ ನೋಡಿ ಎಂದು ಸೆಡ್ಡು ಹೊಡೆದರು. ಇತರ ಸಮಸ್ಯೆಗಳ ಬಗ್ಗೆ ಕೇಳಲಾದ ಪ್ರಶ್ನೆಗೆ, ‘ನಾನೀಗ ಚುನಾವಣೆಯಲ್ಲಿ ಬ್ಯುಸಿ. ಏನೂ ಹೇಳೋದಿಲ್ಲ’ ಎಂದು ನುಣುಚಿಕೊಂಡರು.

(ಇನ್ಫೋ ವಾರ್ತೆ)

ಮುಖಪುಟ / ಕೃಷ್ಣಗಾರುಡಿ

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more