ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸ್ವಯಂ ನಿವೃತ್ತಿಗೆ ಐಟಿ ಕಾರ್ಯದರ್ಶಿ ವಿವೇಕ್‌ ಕುಲಕರ್ಣಿ ಅರ್ಜಿ

By Staff
|
Google Oneindia Kannada News

ಸ್ವಯಂ ನಿವೃತ್ತಿಗೆ ಐಟಿ ಕಾರ್ಯದರ್ಶಿ ವಿವೇಕ್‌ ಕುಲಕರ್ಣಿ ಅರ್ಜಿ
ಸೆ. 29ರಿಂದ ಮೂರು ತಿಂಗಳ ರಜೆಯ ಮೇಲೆ ಐಟಿ ಇಲಾಖೆಯಿಂದ ನಿರ್ಗಮನ

ಬೆಂಗಳೂರು: ರಾಜ್ಯ ಐಟಿ ಕಾರ್ಯದರ್ಶಿ ವಿವೇಕ್‌ ಕುಲಕರ್ಣಿ ತಮ್ಮ ಹುದ್ದೆಯಿಂದ ಬಿಡುಗಡೆಗೊಳ್ಳಲು ಸ್ವಯಂ ನಿವೃತ್ತಿ ಯಾಗಲು ನಿರ್ಧರಿಸಿದ್ದಾರೆ. ಅವರ ಈ ನಿರ್ಧಾರಕ್ಕೆ ಖಾಸಗಿ ವಲಯದಲ್ಲಿ ದುಡಿಡುವ ಅವರ ಆಸಕ್ತಿಯೇ ಕಾರಣವೆನ್ನಲಾಗಿದೆ.

ಕಳೆದ ನಾಲ್ಕು ವರ್ಷಗಳಿಂದ ರಾಜ್ಯ ಐಟಿ ವಿಭಾಗದಲ್ಲಿ ಕೆಲಸ ನಿರ್ವಹಿಸುತ್ತಿದ್ದ ವಿವೇಕ್‌ ಕುಲಕರ್ಣಿ ಗಟ್ಟಿ ಕುಳ ಎನಿಸಿಕೊಂಡಿದ್ದರು. ಸೋಮವಾರ ಕಾರ್ಯದರ್ಶಿ ಹುದ್ದೆಯಿಂದ ಸ್ವಯಂ ನಿವೃತ್ತಿ ಕೋರಿ ರಾಜ್ಯ ಮುಖ್ಯ ಕಾರ್ಯದರ್ಶಿ ಬಿ. ಎಸ್‌. ಪಾಟೀಲ್‌ ಅವರಿಗೆ ವಿವೇಕ್‌ ಕುಲಕರ್ಣಿ ಅರ್ಜಿ ಸಲ್ಲಿಸಿದರು.

ಸೆ. 29ರಿಂದ ಮೂರು ತಿಂಗಳ ಕಾಲ ರಜೆ ತೆಗೆದುಕೊಂಡಿರುವ ಕುಲಕರ್ಣಿಯವರು ವೈಯಕ್ತಿಕ ಕಾರಣಗಳಿಗಾಗಿ ತಾವು ಸ್ವಯಂ ನಿವೃತ್ತಿ ತೆಗೆದುಕೊಳ್ಳುತ್ತಿರುವುದಾಗಿ ಹೇಳಿದ್ದಾರೆ. 46ರ ಹರೆಯದ ವಿವೇಕ್‌ ಕುಲಕರ್ಣಿ ಅಮೆರಿಕಾ ಮೂಲದ, ಬಹುರಾಷ್ಟ್ರೀಯ ಐಟಿ ಕಂಪೆನಿ ಸೇರಿಕೊಳ್ಳುವ ವದಂತಿ ಕೇಳಿಬರುತ್ತಿದೆ.

ವಿವೇಕ್‌ ಅವರು ರಜೆ ಮೇಲೆ ತೆರಳಿರುವುದರಿಂದ, ಪ್ರಸ್ತುತ ಐಟಿ ವಿಭಾಗದ ನಿರ್ದೇಶಕರಾಗಿರುವ ಜಾವೇದ್‌ ಅಖ್ತರ್‌ ಅವರಿಗೆ ಐಟಿ ಕಾರ್ಯದರ್ಶಿ ಹುದ್ದೆಯನ್ನು ಹೆಚ್ಚುವರಿ ಜವಾಬ್ದಾರಿಯನ್ನಾಗಿ ನೀಡಲಾಗಿದೆ.

(ಇನ್ಫೋ ವಾರ್ತೆ)

ಮುಖಪುಟ / ಐಟಿ - ಬಿಟಿ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X