• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ವಿಶ್ವದಾಖಲೆಯ ಯಶಸ್ವಿ ಹೆಜ್ಜೆ , ಅಹೋರಾತ್ರಿಯಕ್ಷಗಾನಕ್ಕೆ ಮಂಗಳ

By Staff
|

ವಿಶ್ವದಾಖಲೆಯ ಯಶಸ್ವಿ ಹೆಜ್ಜೆ , ಅಹೋರಾತ್ರಿಯಕ್ಷಗಾನಕ್ಕೆ ಮಂಗಳ

ಕುಂದಾಪುರ ಯಕ್ಷಗಾನ ತಂಡದ ಕೋಡಿ ವಿಶ್ವನಾಥ ಗಾಣಿಗರಿಂದ ಕೇದಿಗೆ ಮುಂಡಾಸು ದಾಖಲೆ !

ಶಿವಮೊಗ್ಗ: ವಿಶ್ವದಾಖಲೆಗಾಗಿ ಹಮ್ಮಿಕೊಂಡಿದ್ದ ಅಹೋರಾತ್ರಿ ಯಕ್ಷಗಾನ ಪ್ರದರ್ಶನ ಯಶಸ್ವಿಯಾಗಿ ನಡೆದಿದ್ದು , ಆಯೋಜಕರಾದ ಡಾ. ರತ್ನಾಕರ್‌ ಮತ್ತು ಲಕ್ಷ್ಮೀನಾರಾಯಣ ಕಾಶಿ ನೇತೃತ್ವದಲ್ಲಿ ನಡೆದ ಈ ಕಾರ್ಯಕ್ರಮ ವಿಶ್ವದಾಖಲೆಯತ್ತ ಹೆಜ್ಜೆ ಹಾಕಿದೆ.

ಸೆ. 27ರ ಸಂಜೆ 5. 20ಕ್ಕೆ ಯಕ್ಷಗಾನ ಕಾರ್ಯಕ್ರಮ ಶಿವಮೊಗ್ಗದ ಕುವೆಂಪು ಸಭಾಂಗಣದಲ್ಲಿ ಉದ್ಘಾಟನೆಗೊಂಡಿತು. 6 ಗಂಟೆಗೆ ಸರಿಯಾಗಿ ಯಕ್ಷಗಾನ ಪ್ರಸಂಗ ಆರಂಭವಾಯಿತು. ಎಂಟು ತಂಡಗಳು ಈ ಅಹೋರಾತ್ರಿ ಪ್ರದರ್ಶನದಲ್ಲಿ ಭಾಗವಹಿಸಿದ್ದವು. ಎಂಟೂ ಪ್ರಸಂಗಗಳು ಒಂದೆರಡು ನಿಮಿಷವನ್ನೂ ವ್ಯರ್ಥ ಮಾಡದೆ ಸರಿಯಾದ ಸಮಯಕ್ಕೆ ಪ್ರಸಂಗವನ್ನು ಆರಂಭಿಸಿ ಕ್ಲುಪ್ತ ಸಮಯಕ್ಕೆ ಮಂಗಳ ಹಾಡಿದವು.

Ahorathri Yakshagana concluded800 ಜನ ಕುಳಿತುಕೊಳ್ಳಬಹುದಾಗಿ ರಂಗ ಮಂದಿರದಲ್ಲಿ ಸದಾ ಜನ ತುಂಬಿರುತ್ತಿದ್ದರು. ರಂಗ ಮಂದಿರದ ಹೊರಗೆ ಮೆಗಾ ಸ್ಕಿೃೕನ್‌ ಹಾಕಿ 1000 ಜನರು ಕೂರಲು ವ್ಯವಸ್ಥೆ ಮಾಡಲಾಗಿತ್ತು. ಅಲ್ಲದೆ ಕಾಲ ಕಾಲಕ್ಕೆ ಊಟ, ಉಪಹಾರ, ಪಾನೀಯ ವ್ಯವಸ್ಥೆಗಳನ್ನೂ ಅಲ್ಲಿಯೇ ಒದಗಿಸಲಾಗುತ್ತಿತ್ತು.

ಕಾರ್ಯಕ್ರಮದಲ್ಲಿ ಕುಂದಾಪುರದ ಮಹಾಗಣಪತಿ ಪ್ರವಾಸಿ ಯಕ್ಷಗಾನ ತಂಡದಿಂದ ಪ್ರದರ್ಶಿತವಾದ ರತಿ ಕಲ್ಯಾಣ ಪ್ರಸಂಗದಲ್ಲಿ ಕೋಡಿ ವಿಶ್ವನಾಥ ಗಾಣಿಗ ಅವರು 3. 2 ಅಡಿ ಅಗಲ ಹಾಗೂ 3. 5 ಅಡಿ ಉದ್ದದ ಕೇದಿಗೆ ಮುಂಡಾಸು ಧರಿಸಿ ಪ್ರತ್ಯೇಕ ದಾಖಲೆ ಮಾಡಿದರು. ಮಂಟಪ ಉಪಾಧ್ಯಾಯರ ಸ್ತ್ರೀ ವೇಷ ಹಾಗೂ ಚಿಟ್ಟಾಣಿ ರಾಮಚಂದ್ರ ಹೆಗಡೆ ಅವರ ಕುಣಿತ ಆಕರ್ಷಕವಾಗಿತ್ತು.

(ಇನ್ಫೋ ವಾರ್ತೆ)

ಮುಖಪುಟ / ವಾರ್ತೆಗಳು

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more