ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಂಗಳವಾರ ಕರ್ನಾಟಕಕ್ಕೆ ಸೋನಿಯಾ ‘ಸರ್‌ಪ್ರೆೃಸ್‌ ವಿಸಿಟ್‌’!

By Staff
|
Google Oneindia Kannada News

ಮಂಗಳವಾರ ಕರ್ನಾಟಕಕ್ಕೆ ಸೋನಿಯಾ ‘ಸರ್‌ಪ್ರೆೃಸ್‌ ವಿಸಿಟ್‌’!
ವೇಮಗಲ್‌ನಲ್ಲಿ ನಾವು ಸೋತೂ ಗೆದ್ದಿದ್ದೇವೆ- ಪೂಜಾರಿ

ಬೆಂಗಳೂರು : ಮಂಗಳವಾರ (ಸೆ.30) ಅಖಿಲ ಭಾರತ ಕಾಂಗ್ರೆಸ್‌ ಸಮಿತಿ ಅಧ್ಯಕ್ಷೆ ಸೋನಿಯಾಗಾಂಧಿ ರಾಜ್ಯದ ಆತ್ಮಹತ್ಯೆ ಮಾಡಿಕೊಂಡಿರುವ ಕೆಲವು ರೈತರ ಕುಟುಂಬಗಳಿಗೆ ಹಠಾತ್‌ ಭೇಟಿ ನೀಡಲಿದ್ದಾರೆ. ಅವರು ಯಾವ ಊರಿಗೆ ಕಾಲಿರಿಸುತ್ತಾರೆ ಎಂಬುದು ಬಲು ಗುಟ್ಟು.

ಕರ್ನಾಟಕ ಪ್ರದೇಶ ಕಾಂಗ್ರೆಸ್‌ ಸಮಿತಿ ಅಧ್ಯಕ್ಷ ಬಿ.ಜನಾರ್ದನ ಪೂಪಜಾರಿ ಸೋಮವಾರ (ಸೆ.29) ಸುದ್ದಿಗಾರರಿಗೆ ಸೋನಿಯಾ ಭೇಟಿಯ ವಿಷಯ ತಿಳಿಸಿದರು. ಮಂಗಳವಾರ ಬೆಳಗ್ಗೆ 10 ಗಂಟೆಗೆ ಇಂದೂರಿನಿಂದ ಬೆಂಗಳೂರಿಗೆ ಬಂದಿಳಿಯಲಿರುವ ಸೋನಿಯಾ, ಅಲ್ಲಿಂದ ಎಲ್ಲಿಗೆ ಹೋಗುತ್ತಾರೆ ಅನ್ನೋದು ಇನ್ನೂ ನಿರ್ಧರಿತವಾಗಿಲ್ಲ ಎಂದು ಪೂಜಾರಿ ಹೇಳಿದರು. ಒಂದು ವಾರದಿಂದ ಸೋನಿಯಾ ‘ಸರ್‌ಪ್ರೆೃಸ್‌ ವಿಸಿಟ್‌’ನ ಅಬ್ಬರ ಕೇಳಿ ಬರುತ್ತಲೇ ಇದ್ದು, ಆ ಗಳಿಗೆ ಈಗ ಕೂಡಿ ಬಂದಂತಾಗಿದೆ.

ಹನಗುಂದ ಹಾಗೂ ವೇಮಗಲ್‌ ಉಪ ಚುನಾವಣೆಯಲ್ಲಿ ತಮ್ಮ ಪಕ್ಷ ಕಾಂಗ್ರೆಸ್ಸನ್ನು ಬೆಂಬಲಿಸಿದ ಮತದಾರರಿಗೆ ಪೂಜಾರಿ ಧನ್ಯವಾದ ಹೇಳಿದರು. ವೇಮಗಲ್‌ ಕ್ಷೇತ್ರದಲ್ಲಿ ಕಾಂಗ್ರೆಸ್‌ ಸೋತಿದ್ದರೂ ಸಹ ಮತ ಗಿಟ್ಟಿಸುವಿಕೆಯಲ್ಲಿ ಶೇಕಡಾವಾರು ಏರಿಕೆ ಕಂಡು ಬಂದಿರುವುದು ಮುಂದಿನ ಚುನಾವಣೆಗೆ ಅನುಕೂಲಕರವಾಗುವ ಸಂಗತಿ ಎಂದರು.

ಎಐಪಿಜೆಡಿ ಅಕ್ರಮ ನಡೆ : ವೇಮಗಲ್‌ ಕ್ಷೇತ್ರದ ಅಖಿಲ ಭಾರತ ಪ್ರಗತಿಪರ ಜನತಾ ದಳ (ಎಐಪಿಜೆಡಿ) ದ ಅಭ್ಯರ್ಥಿಗೆ ಬಿಜೆಪಿ ಸೇರಿದಂತೆ ಎಲ್ಲಾ ವಿರೋಧ ಪಕ್ಷಗಳು ಬೆಂಬಲ ಕೊಟ್ಟವು. ಚುನಾವಣೆಯಲ್ಲಿ ಎಐಪಿಜೆಡಿ ಅಕ್ರಮ ರೀತಿಯಲ್ಲಿ ಮತಗಳನ್ನು ಪಡೆದದ್ದೂ ಉಂಟು ಎಂದು ಪೂಜಾರಿ ಆರೋಪಿಸಿದರು.

ನಾವೇ ಗೆಲ್ಲೋದು : ಜನತಾ ಪರಿವಾರದವರು ಒಂದಾಗಿ, ಬಿಜೆಪಿ ಕೂಡ ತೊಡೆ ತಟ್ಟಿದರೂ ಮುಂದಿನ ವರ್ಷದ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ಸನ್ನು ಅಲ್ಲಾಡಿಸಲು ಸಾಧ್ಯವಿಲ್ಲ. ಎಸ್‌.ಎಂ.ಕೃಷ್ಣ ಜನಪರ ಕಾರ್ಯಕ್ರಮಗಳನ್ನು ಮಾಡುತ್ತಿರುವುದರಿಂದ ಯಾವುದೇ ಹುನ್ನಾರಕ್ಕೂ ಮತದಾರರು ಸಿಲುಕುವುದಿಲ್ಲ. ಕಾಂಗ್ರೆಸ್‌ ಗೆದ್ದು, ಮತ್ತೆ ಗದ್ದುಗೆ ಮೇಲೆ ಕೂರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

(ಪಿಟಿಐ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X