ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಲಕ್ಷ್ಮಿಚಂದ್ರಶೇಖರ್‌ರ ‘ಹೆಣ್ಣಲ್ಲವೇ?’ ಶತಕ

By Staff
|
Google Oneindia Kannada News

ಲಕ್ಷ್ಮಿಚಂದ್ರಶೇಖರ್‌ರ ‘ಹೆಣ್ಣಲ್ಲವೇ?’ ಶತಕ
ಹೆಣ್ಣಲ್ಲವೇ? 101ನೇ ಪ್ರದರ್ಶನದ ಸಂಭ್ರಮದಲ್ಲಿ ಲಕ್ಷ್ಮಿಚಂದ್ರಶೇಖರ್‌

ಲಕ್ಷ್ಮೀ ಚಂದ್ರಶೇಖರ್‌ ಗೊತ್ತಲ್ಲ ; ರಂಗದಮೇಲೆ ಪಾತ್ರದೊಳಗೆ ಲೀನವಾಗುವ ಕಲಾವಿದೆಯಾಕೆ. ಗಿರೀಶ್‌ ಕಾಸರವಳ್ಳಿಯವರ ‘ಗೃಹಭಂಗ’ ಧಾರಾವಾಹಿಯಲ್ಲಿ ‘ಗಂಗವ್ವ’ ಪಾತ್ರದ ಮೂಲಕ ಮನೆ ಮಾತಾದವರು. ಬೆಂಗಳೂರಿನ ಎನ್‌ಎಂಕೆಆರ್‌ವಿ ಕಾಲೇಜಿನಲ್ಲಿ ಅವರು ಪ್ರೀತಿಯ ಎಲ್‌ಸಿ ಮಿಸ್‌. ‘ಜಸ್ಟ್‌ ಎ ವುಮನ್‌’ನಂತಹ ಏಕಪಾತ್ರಾಭಿನಯದ ಮೂಲಕ ರಂಗಭೂಮಿ ಕ್ಷೇತ್ರದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ.

ಲಕ್ಷ್ಮೀ ಅವರ ಏಕ ಪಾತ್ರಾಭಿನಯದಲ್ಲಿ ಪುರುಷ ಪ್ರಧಾನ ಸಮಾಜದ ವಿವಿಧ ಕ್ಷೇತ್ರಗಳಲ್ಲಿ ದುಡಿಯುವ ಮಹಿಳೆಯ ಬದುಕುಗಳು ರೂಪಕಗಳಂತೆ ಗೋಚರಿಸುತ್ತವೆ. ಅವರ ಇತ್ತೀಚಿನ ಏಕಪಾತ್ರಾಭಿನಯ ‘ಹೆಣ್ಣಲ್ಲವೇ?’ ಕೂಡ ಅಪಾರ ಜನಪ್ರಿಯತೆ ಗಳಿಸಿದೆ.

ಲಕ್ಷ್ಮೀ ಚಂದ್ರಶೇಖರ್‌ರ ಮಹತ್ವಾಕಾಂಕ್ಷೆಯ ‘ಹೆಣ್ಣಲ್ಲವೇ?’ ಸೆಂಚುರಿ ಬಾರಿಸಿದ್ದು , ಈಗ 101ನೇ ಪ್ರದರ್ಶನಕ್ಕೆ ಸಜ್ಜಾಗಿದೆ. ಏಕಪಾತ್ರಾಭಿನಯವೊಂದು ಶತಕ ಬಾರಿಸುವುದು ಕಲಾವಿದೆಗೆ ಹೆಮ್ಮೆ ತರುವ ವಿಷಯವಲ್ಲವೆ ?

ವಿವಿಧ ಪ್ರಸಿದ್ಧ ಸಾಹಿತ್ಯಿಕ ಕೃತಿಗಳಲ್ಲಿ ಕಾಣ ಸಿಗುವ ಹೆಣ್ಣಿನ ಸ್ವಗತಗಳು, ಮನದ ಮಾತುಗಳನ್ನು ಆಯ್ದು ಲಕ್ಷ್ಮೀ, ‘ಹೆಣ್ಣಲ್ಲವೇ’ ಏಕಪಾತ್ರಾಭಿನಯದಲ್ಲಿ ಕೊಲಾಜ್‌ ಮಾಡಿದ್ದಾರೆ. ಅಕ್ಟೋಬರ್‌ 1ರ ಸಂಜೆ 6. 30ಕ್ಕೆ ಬೆಂಗಳೂರಿನ ರವೀಂದ್ರಕಲಾಕ್ಷೇತ್ರದಲ್ಲಿ ‘ಹೆಣ್ಣಲ್ಲವೇ’ ಏಕಪಾತ್ರಾಭಿನಯದ 101ನೇ ಪ್ರದರ್ಶನ ನಡೆಯಲಿದೆ.

ಲಕ್ಷ್ಮೀ ಚಂದ್ರಶೇಖರ್‌ ಅವರಿಗೆ ಅಭಿನಂದನೆಗಳು.

(ಇನ್ಫೋ ವಾರ್ತೆ)

ಪೂರಕ ಓದಿಗೆ-
ಲಕ್ಷ್ಮೀ ಚಂದ್ರಶೇಖರ್‌ ಸಂದರ್ಶನ
Solo play ಸೋಲಲಿಲ್ಲ, ಗೆದ್ದಿತು !

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X