ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಿಜೆಪಿಗೆ ಭಾರೀ ಮುಖಭಂಗ, ನೆಲೆ ಕಾಣದ ಜಾತ್ಯತೀತರು

By Staff
|
Google Oneindia Kannada News

ಬಿಜೆಪಿಗೆ ಭಾರೀ ಮುಖಭಂಗ, ನೆಲೆ ಕಾಣದ ಜಾತ್ಯತೀತರು
ಉಪ ಚುನಾವಣೆಯಲ್ಲಿ ಬಿಜೆಪಿಗೆ ಭಾರೀ ಮುಖಭಂಗ ಬೇರುಬಿಡದ ಜಾತ್ಯತೀತರು

ಬೆಂಗಳೂರು : ಹುನಗುಂದ ಹಾಗೂ ವೇಮಗಲ್‌ ಉಪ ಚುನಾವಣೆಗಳ ಫಲಿತಾಂಶ ಪ್ರಕಟವಾಗಿದ್ದು , ಆಡಳಿತಾರೂಢ ಕಾಂಗ್ರೆಸ್‌ ಮತ್ತು ಪ್ರಗತಿಪರ ಜನತಾದಳಗಳು ತಮ್ಮ ಸ್ಥಾನಗಳನ್ನು ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿವೆ.

ಸೆಪ್ಟಂಬರ್‌ 26ರ ಶುಕ್ರವಾರ ವೇಮಗಲ್‌ ಹಾಗೂ ಹುನಗುಂದ ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆ ನಡೆದಿತ್ತು . ಸೋಮವಾರ ಬೆಳಗ್ಗೆ (ಸೆ.29) 8ಕ್ಕೆ ಬಿಗಿ ಭದ್ರತೆಯಾಂದಿಗೆ ಈ ಉಪಚುನಾವಣೆಗಳ ಮತ ಎಣಿಕೆ ನಡೆದು, ಫಲಿತಾಂಶ ಹೊರಬಿದ್ದಿದೆ. ಎರಡೂ ಕ್ಷೇತ್ರಗಳಲ್ಲಿ ವಿದ್ಯುನ್ಮಾನ ಮತಯಂತ್ರಗಳನ್ನು ಬಳಸಿದ್ದರಿಂದ ಫಲಿತಾಂಶ ತ್ವರಿತವಾಗಿ ಹೊರಬಿದ್ದಿದೆ.

Congress loses again in Vemagal byelectionsಹುನಗುಂದದಲ್ಲಿ ಕಾಂಗೆಸ್‌ ಜಯ : ಕಾಂಗ್ರೆಸ್‌ನ ಅಭ್ಯರ್ಥಿ ಗೌರಮ್ಮನವರು ಹುನಗುಂದ ಕ್ಷೇತ್ರದಲ್ಲಿ ಜಯಗಳಿಸುವುದರೊಂದಿಗೆ, ಕಾಂಗ್ರೆಸ್‌ ಹುನಗುಂದ ವಿಧಾನಸಭಾ ಕ್ಷೇತ್ರದಲ್ಲಿ ತನ್ನ ಪ್ರಾಬಲ್ಯವನ್ನು ಮತ್ತೆ ಸಾಬೀತುಪಡಿಸಿದೆ. ಗೌರಮ್ಮ ಅವರು ತಮ್ಮ ಸಮೀಪದ ಪ್ರತಿಸ್ಪರ್ಧಿ ಭಾರತೀಯ ಜನತಾಪಕ್ಷದ ಎಂ.ಎಸ್‌.ಪಾಟೀಲ್‌ ಅವರನ್ನು 10,299 ಮತಗಳಿಂದ ಪರಾಭವಗೊಳಿಸಿದ್ದಾರೆ.

ಮಾಜಿ ಸಚಿವ ಎಸ್‌.ಆರ್‌.ಕಾಶಪ್ಪನವರ್‌ ಅವರ ನಿಧನದಿಂದ ಹುನಗುಂದ ವಿಧಾನಸಭಾ ಕ್ಷೇತ್ರ ತೆರವುಗೊಂಡಿತ್ತು . ಕಾಶಪ್ಪನವರ್‌ ಅವರ ಪತ್ನಿ ಗೌರಮ್ಮನವರನ್ನು ಕಣಕ್ಕಿಳಿಸುವ ಮೂಲಕ ಮತದಾರರ ಅನುಕಂಪ ಗಿಟ್ಟಿಸುವಲ್ಲಿ ಕಾಂಗ್ರೆಸ್‌ ಯಶಸ್ಸು ಗಳಿಸಿದೆ.

ವೇಮಗಲ್‌ನಲ್ಲಿ ಪ್ರಗತಿಪರರಿಗೆ ಮಣೆ : ಜಿದ್ದಾಜಿದ್ದಿನ ಸ್ಪರ್ಧೆಯಿಂದಾಗಿ ಭಾರೀ ಕುತೂಹಲ ಉಂಟುಮಾಡಿದ್ದ ವೇಮಗಲ್‌ ಕ್ಷೇತ್ರದಲ್ಲಿ ಕೃಷ್ಣ ಭೈರೇಗೌಡರು ಜಯ ಗಳಿಸುವುದರೊಂದಿಗೆ , ಪ್ರಗತಿಪರ ಜನತಾದಳ ತನ್ನ ಸ್ಥಾನ ಉಳಿಸಿಕೊಂಡಿದೆ.

ಕೃಷ್ಣ ಭೈರೇಗೌಡ ಅವರು ಕಾಂಗ್ರೆಸ್‌ನ ಸ್ಪರ್ಧಿ ವೆಂಕಟಮುನಿಯಪ್ಪ ಅವರನ್ನು 11, 283 ಓಟುಗಳ ಅಂತರದಿಂದ ಸೋಲಿಸಿದ್ದಾರೆ. ಮಾಜಿ ಸಚಿವ ಸಿ.ಭೈರೇಗೌಡ ಅವರ ನಿಧನದಿಂದ ವೇಮಗಲ್‌ ಕ್ಷೇತ್ರ ತೆರವಾಗಿತ್ತು . ವೇಮಗಲ್‌ ಕ್ಷೇತ್ರವನ್ನು ಭೈರೇಗೌಡರು ಸತತವಾಗಿ ಆರು ಬಾರಿ ಪ್ರತಿನಿಧಿಸಿದ್ದು , ಈ ಕ್ಷೇತ್ರವನ್ನು ಗೆದ್ದುಕೊಳ್ಳಲು ಕಾಂಗ್ರೆಸ್‌ ಭಾರೀ ಪ್ರಯತ್ನ ನಡೆಸಿತ್ತು .

(ಪಿಟಿಐ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X