• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ವೇಮಗಲ್‌- ಹುನಗುಂದ ಉಪಚುನಾವಣೆ, ಶೇ.65 ಮತದಾನ

By Staff
|

ವೇಮಗಲ್‌- ಹುನಗುಂದ ಉಪಚುನಾವಣೆ, ಶೇ.65 ಮತದಾನ

ಬಿಗಿ ಭದ್ರತೆ, ಮಳೆಯ ನಡುವೆ ಮತದಾನ, ವಿದ್ಯುನ್ಮಾನ ಮತಯಂತ್ರ ಬಳಕೆ.

ಬೆಂಗಳೂರು : ರಾಜ್ಯದ ವೇಮಗಲ್‌ ಹಾಗೂ ಹುನಗುಂದ ವಿಧಾನಸಭಾ ಕ್ಷೇತ್ರಗಳಿಗೆ ಶುಕ್ರವಾರ (ಸೆ.26) ನಡೆದ ಉಪ ಚುನಾವಣೆಯಲ್ಲಿ ಬಿರುಸಿನ ಮತದಾನವಾಗಿದ್ದು , ಮತದಾನದ ಪ್ರಮಾಣ ಶೇ.62ರಿಂದ ಶೇ.65ರಷ್ಟಿದೆ.

ಹುನಗುಂದ ಹಾಗೂ ವೇಮಗಲ್‌ ಕ್ಷೇತ್ರದ ಚುನಾವಣೆಗೆ ಬಿಗಿ ಭದ್ರತೆ ಒದಗಿಸಲಾಗಿದ್ದು , ಚುನಾವಣೆಯ ಸಂದರ್ಭದಲ್ಲಿ ಯಾವುದೇ ಅಹಿತಕರ ಘಟನೆಗಳು ವರದಿಯಾಗಿಲ್ಲ . ಎರಡೂ ಕ್ಷೇತ್ರಗಳಲ್ಲೂ ಇದೇ ಮೊದಲ ಬಾರಿಗೆ ಚುನಾವಣಾ ಆಯೋಗ ಎಲೆಕ್ಟ್ರಾನಿಕ್‌ ಮತ ಯಂತ್ರಗಳನ್ನು ಬಳಸಿತು.

ಹುನಗುಂದ ಕ್ಷೇತ್ರದಲ್ಲಿ ಐವರು ಚುನಾವಣಾ ಕಣದಲ್ಲಿದ್ದರೆ, ವೇಮಗಲ್‌ ಕ್ಷೇತ್ರದಲ್ಲಿ ನಾಲ್ವರು ಚುನಾವಣಾ ಸ್ಪರ್ಧೆಯಲ್ಲಿದ್ದಾರೆ. ಮಾಜಿ ಸಚಿವ ಎಸ್‌.ಆರ್‌.ಕಾಶಪ್ಪನವರ್‌ ಅವರ ನಿಧನದಿಂದ ಹುನಗುಂದ ವಿಧಾನಸಭಾ ಕ್ಷೇತ್ರ ತೆರವಾಗಿತ್ತು . ಅದೇರೀತಿ ಪ್ರಗತಿಪರ ಜನತಾದಳ ಮುಖಂಡ ಭೈರೇಗೌಡರ ನಿಧನದಿಂದ ವೇಮಗಲ್‌ ವಿಧಾನಸಭಾ ಕ್ಷೇತ್ರ ತೆರವಾಗಿತ್ತು .

ಸೆಪ್ಟಂಬರ್‌ 29ರಂದು ಮತ ಎಣಿಕೆ ನಡೆಯಲಿದ್ದು , ಫಲಿತಾಂಶ ಅಂದೇ ಹೊರಬೀಳಲಿದೆ.

(ಪಿಟಿಐ)

ಮುಖಪುಟ / ವಾರ್ತೆಗಳು

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more