ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊಡಗಿನಲ್ಲಿ ಸಾಂಸ್ಕೃತಿಕ ನಾಡಹಬ್ಬ ; ಇದು ಮಡಿಕೇರಿ ದಸರಾ !

By Staff
|
Google Oneindia Kannada News

ಕೊಡಗಿನಲ್ಲಿ ಸಾಂಸ್ಕೃತಿಕ ನಾಡಹಬ್ಬ ; ಇದು ಮಡಿಕೇರಿ ದಸರಾ !
ನಾಲ್ವರು ಶಕ್ತಿದೇವತೆಗಳಿಗೆ ಪೂಜೆಯಾಂದಿಗೆ ದಸರಾಗೆ ಚಾಲನೆ

ಮಡಿಕೇರಿಯಲ್ಲಿ ಶುಕ್ರವಾರದಿಂದ ದಸರಾ ಸಂಭ್ರಮ ಶುರು. ಇಲ್ಲಿನ ಪಂಪಿನ ಕೆರೆಯ ಬಳಿ ನಾಲ್ಕು ಶಕ್ತಿ ದೇವತೆಗಳ ಪೂಜೆ ನಂತರ ಈ ದೇವತೆಗಳ ಕರಗ ಉತ್ಸವದೊಂದಿಗೆ ಸಾಂಸ್ಕೃತಿಕ ನಾಡಹಬ್ಬ ದಸರಾ ಆರಂಭ. ಕುಂದೂರುಮೊಟ್ಟೆ ಚೌಟಿ ಮಾರಿಯಮ್ಮ, ದಂಡಿನ ಮಾರಿಯಮ್ಮ ಮತ್ತು ಕಂಚಿ ಕಾಮಾಕ್ಷಿ ದೇವಸ್ಥಾನ, ಕೋಟೆ ಮಾರಿಯಮ್ಮ ದೇವಸ್ಥಾನ ಗಳ ಕರಗ ಉತ್ಸವ ನಡೆಯಲಿದ್ದು ಅಕ್ಟೋಬರ್‌ 5ರ ವಿಜಯ ದಶಮಿಯವರೆಗೆ ಈ ಉತ್ಸವವು ನಗರದಲ್ಲಿ ಸಂಚರಿಸಿ, ಸಾರ್ವಜನಿಕರಿಂದ ಪೂಜೆ ಸ್ವೀಕರಿಸಲಿದೆ.

ನಗರದಲ್ಲಿರುವ ಈ ನಾಲ್ಕು ಶಕ್ತಿದೇವತೆಗಳು ಸೋದರಿಯರು ಎಂಬ ನಂಬಿಕೆ ಜನರಲ್ಲಿದೆ. ಕೊಡಗನ್ನು ಅರಸರು ಆಳುತ್ತಿದ್ದ ಕಾಲದಿಂದಲೂ ಈ ಶಕ್ತಿ ದೇವತೆಗಳ ದಸರಾ ಉತ್ಸವ ನಡೆದುಕೊಂಡು ಬರುತ್ತಿತ್ತು . ಕಳೆದ 35 ವರ್ಷಗಳಿಂದ ಉತ್ಸವದ ನೇತೃತ್ವವವನ್ನು ಪುರಸಭೆ ವಹಿಸಿಕೊಂಡಿದೆ.

ಸೆ. 27ರಂದು ಕಾವೇರಿ ಕಲಾ ಕ್ಷೇತ್ರದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ಆರಂಭವಾಗಲಿದ್ದು , ನಾಗರಿಕ ವಿಮಾನಯಾನ ಸಚಿವ ಟಿ. ಜಾನ್‌ ಕಾರ್ಯಕ್ರಮವನ್ನು ಉದ್ಘಾಟಿಸುವರು. ಸೆ. 28ರಂದು ಬೆಳಗ್ಗೆ 10. 30ಕ್ಕೆ ಜಿಲ್ಲಾ ಮಟ್ಟದ ದಸರಾ ಬಹುಭಾಷಾ ಕವಿಗೋಷ್ಠಿ ನಡೆಯಲಿದೆ. ಜಿ. ಪಿ. ಬಸವರಾಜ್‌ ಕವಿಗೋಷ್ಠಿಯ ಅಧ್ಯಕ್ಷತೆ ವಹಿಸಲಿದ್ದು - ಕೊಡವ, ಕನ್ನಡ, ಹಿಂದಿ, ಇಂಗ್ಲಿಷ್‌, ಮಲಯಾಳಂ, ತೆಲುಗು, ಬ್ಯಾರಿ, ತುಳು, ತಮಿಳು ಭಾಷೆಯ ಕವನಗಳ ವಾಚನ ನಡೆಯಲಿದೆ.

ಅಕ್ಟೋಬರ್‌ 1 ಮತ್ತು 2ರಂದು ದಸರಾ ಕ್ರೀಡಾಕೂಟ. ವಿಜಯ ದಶಮಿಯ ದಿನ ರಾತ್ರಿ ನಗರದಲ್ಲಿ ದಸರಾ ಹಬ್ಬದ ಪ್ರಮುಖ ಆಕರ್ಷಣೆ ದಶಮಂಟಪಗಳ ಮೆರವಣಿಗೆ ನಡೆಯಲಿದೆ.

(ಇನ್ಫೋ ವಾರ್ತೆ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X