ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೈಸೂರಿನ ಪಾರಂಪರಿಕ ಕಟ್ಟಡಗಳ ವೀಕ್ಷಣೆಗೆ ಜಟಕಾ ಬಂಡಿ

By Staff
|
Google Oneindia Kannada News

ಮೈಸೂರಿನ ಪಾರಂಪರಿಕ ಕಟ್ಟಡಗಳ ವೀಕ್ಷಣೆಗೆ ಜಟಕಾ ಬಂಡಿ
ಹಿಂದೊಂದು ಕಾಲದಲ್ಲಿ ಜಟಕಾ ಬಂಡಿಯೇ ಮೈಸೂರಿನ ಸಂಪರ್ಕ ಸಾಧನ. ಕಾಲಾನಂತರದಲ್ಲಿ , ಆಧುನಿಕತೆಯ ಮುಸುಕಿನೊಳಗೆ ಟಾಂಗಾ ಸವಾರಿ ಮಸುಕಾಗಿ ಹೋಯಿತು. ಈ ಬಾರಿ ದಸರೆಯಲ್ಲಿ ಪ್ರವಾಸಿಗರಿಗಾಗಿ ಟಾಂಗಾದಲ್ಲಿ ಪ್ರಯಾಣಕ್ಕೆ ವ್ಯವಸ್ಥೆ ಮಾಡಲಾಗಿದೆ.

*ಚೀ.ಜ.ರಾಜೀವ

ಮೈಸೂರು : ‘ಮನ್‌ ಪಸಂದ್‌ ಟಾಂಗಾ ಗಾಡಿಯಲ್ಲಿ ಸವಾರಿ’ ಈ ಬಾರಿಯ ಮೈಸೂರು ದಸರೆಯ ಮತ್ತೊಂದು ವಿಶೇಷ !

ಇದು ಅರಮನೆಗಳ ನಗರಿ. ಇಲ್ಲಿ ಇನ್ನೂ ಅರಸೊತ್ತಿಗೆಯ ಛಾಪು ಇದೆ. ಅವುಗಳನ್ನು ಗುರುತಿಸುವ ಮನಸ್ಸು , ಇತಿಹಾಸ ಪ್ರಜ್ಞೆ ಬಗ್ಗೆ ಅಭಿಮಾನ, ರಾಜ ಠೀವಿ- ದೊರೆಯ ಗತ್ತಿನಲ್ಲಿ ಮೈಸೂರಿನ ರಾಜಬೀದಿಯಲ್ಲಿ ಕೆಲಕಾಲ ಸಂಚರಿಸುವ ಬಯಕೆ ಹಾಗೂ ಆಸೆಯಿದ್ದರೆ ಜಟಕಾ ಗಾಡಿಯಲ್ಲಿ ಸವಾರಿ ಮಾಡಬೇಕು! ರಸ್ತೆಯಲ್ಲಿ ಟಕ್‌ ಟಕ್‌ ಟಕ್‌ ಎಂದು ಸದ್ದು ಮಾಡುತ್ತಾ ಹೋಗುವ ಟಾಂಗಾದ ಸೊಗಸು ಮಜವೇ ಬೇರೆ.

ವೆಲ್ಲಿಂಗ್ಟನ್‌ ಹೌಸ್‌, ಜಗನ್ಮೋಹನ ಅರಮನೆ, ಟೌನ್‌ಹಾಲ್‌ ಸೇರಿದಂತೆ ಆಯ್ದ 15 ಪಾರಂಪರಿಕ ಕಟ್ಟಡಗಳ ವೀಕ್ಷಣೆಗಾಗಿ ಜಿಲ್ಲಾಡಳಿತವೇ ಈ ಬಾರಿ ವಿಶೇಷ ‘ಟಾಂಗಾ ಸಂಚಾರ’ ವ್ಯವಸ್ಥೆ ಏರ್ಪಡಿಸಿದೆ.

Jataka Bandiಅರಸೊತ್ತಿಗೆ ವೀಕ್ಷಣೆ : ಸಂಸದ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್‌ ಅವರನ್ನು ಯದುವಂಶದ ಯುವರಾಜನೆಂದು ಭಾವಿಸಿ ‘ಬುದ್ಧಿ’ ಎನ್ನುವ ಮೈಸೂರಿನ ಕೆಲ ಮಂದಿಯಷ್ಟೆ ಅರಸೊತ್ತಿಗೆಯ ಛಾಪನ್ನು ಇಲ್ಲಿ ಜೀವಂತವಾಗಿಟ್ಟಿಲ್ಲ . ಪಟ್ಟಿ ಮಾಡುತ್ತಾ ಹೋದರೆ, ಇಲ್ಲಿನ ರಸ್ತೆ- ವೃತ್ತ ಸಹಿತ ಅನೇಕ ನಿರ್ಜೀವ ಸಂಗತಿಗಳು ಕೂಡ ಅರಸರಾಳಿದ ಊರಿನ ವೈಭವವನ್ನು ಸಾರಿ ಹೇಳುತ್ತವೆ.

ಕೃಷ್ಣರಾಜ ವೃತ್ತ , ವಾಣಿವಿಲಾಸ ಮಾರುಕಟ್ಟೆ , ಸಯ್ಯಾಜಿರಾವ್‌ ರಸ್ತೆ , ಚೆಲುವಾಂಬ ಆಸ್ಪತ್ರೆ, ಮಹಾರಾಜ- ಯುವರಾಜ ಕಾಲೇಜು, ಮಹಾರಾಣಿ ಮಹಿಳೆಯರ ಹಾಸ್ಟೆಲ್‌, ಕ್ರಾಫರ್ಡ್‌ ಹಾಲ್‌, ದೇವರಾಜ ಮಾರುಕಟ್ಟೆ , ಸಾರ್ವಜನಿಕರ ಬಳಕೆಗಾಗಿ ಸರಕಾರಿ ಕಚೇರಿಗಳಾಗಿರುವ ಕಟ್ಟಡಗಳಿವೆ. ಅರಮನೆ ಸದೃಶವಾದ ಈ ಎಲ್ಲ ಪಾರಂಪರಿಕ ಕಟ್ಟಡಗಳ ಹೆಸರೇ ಸೂಚಿಸುವಂತೆ ಎಲ್ಲವೂ ಅರಮನೆಗೆ ಸಂಬಂಧಿಸಿದ ಛಾಪನ್ನೇ ಹೊತ್ತಿವೆ.

ನವರಾತ್ರಿ ಸಂದರ್ಭದಲ್ಲಿ ವಿಶಷ ಅಲಂಕಾರದಿಂದ ಕಂಗೊಳಿಸುವ ಈ ಎಲ್ಲ ಪುಟ್ಟ ಅರಮನೆಗಳು ಕೂಡ ಒಂದೊಂದು ವಿಶಿಷ್ಟ ಕಥೆಯನ್ನು ಹೇಳುತ್ತವೆ. ಇದನ್ನು ಅರಿಯಬೇಕೆಂದರೆ, ಟಾಂಗಾವಾಲಗಳು ಹೇಳುವ ಇತಿಹಾಸದ ಕಥೆ ಕೇಳಬೇಕು.

ನಮ್ಮವರೇ ಟಾಂಗಾ ಹತ್ತುವುದಿಲ್ಲ !

ಅಗ್ರಹಾರ, ನಂಜುಮಾಳಿಗೆ, ಟೌನ್‌ಹಾಲ್‌ ಸಮೀಪದಲ್ಲಿ ಟಾಂಗಾ ನಿಲ್ದಾಣಗಳಿವೆ. ಆಟೋ ರಿಕ್ಷಾ ಪ್ರವೇಶಿಸಿದ ಬಳಿಕ ಟಾಂಗಾಗಳ ಸಂಖ್ಯೆ ಕ್ಷೀಣಿಸಿದೆ. 25 ವರ್ಷಗಳಿಂದ ಟಾಂಗಾವಾಲ ಆಗಿ ಬದುಕು ಸಾಗಿಸುತ್ತಿರುವ ನಂಜುಮಾಳಿಗೆಯ ಮುಷೀರ್‌, ‘ಈ ಕಾಲದಲ್ಲಿ ಪ್ರಯಾಣಿಕರು ಟಾಂಗಾ ಬಯಸುವುದಿಲ್ಲ . ಮನೆತನದ ಕಸುಬೆಂದು ನಾನು ಟಾಂಗಾ ಓಡಿಸುತ್ತಿದ್ದೇನೆ. ನನ್ನೊಂದಿಗೆ ಇದು ಮುಗಿಯಲಿದೆ’ ಎಂದು ಹೇಳುತ್ತಾರೆ. ಸದ್ಯ ಮೈಸೂರಿನಲ್ಲಿ 50 ರಿಂದ 60 ಟಾಂಗಾ ಇವೆ. ದಸರಾಕ್ಕೆ ಬರುವ ಹೊರರಾಜ್ಯದ ಹಾಗೂ ವಿದೇಶಿ ಪ್ರವಾಸಿಗರು ನಮ್ಮನ್ನು ಪ್ರೋತ್ಸಾಹಿಸುತ್ತಾರೆ. ನಮ್ಮವರೇ ಟಾಂಗಾ ಹತ್ತುವುದಿಲ್ಲ ಎಂದು ಹೇಳುತ್ತಾರೆ.

ಇತಿಹಾಸದ ಪುಟ ಸೇರುತ್ತಿರುವ ಟಾಂಗಾ ಗಾಡಿ ಮರೆಯಾಗುವ ಮುನ್ನ ಅದರ ಪ್ರಯಾಣವನ್ನು ಅನುಭವಿಸಬೇಕು. ಮುಂದೊಂದು ದಿನ ಟಾಂಗಾಗಳು ಇರುವುದಿಲ್ಲ . ಅಪರಿಚಿತ ಬಂಧುವಾಗಿ ಮೈಸೂರಿನ ಕಥೆ ಹೇಳಲು ಹಳೆ ತಲೆಮಾರಿನ ಟಾಂಗಾವಾಲಗಳು ಕೂಡ ಕಾಣಸಿಗರು.

(ಸ್ನೇಹಸೇತು : ವಿಜಯ ಕರ್ನಾಟಕ)

Post your views

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X