ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೆಂಗಳೂರು ವಿಮಾನ ನಿಲ್ದಾಣದಲ್ಲಿ ತಿಂಡಿ-ಊಟೋಪಚಾರ!

By Staff
|
Google Oneindia Kannada News

ಬೆಂಗಳೂರು ವಿಮಾನ ನಿಲ್ದಾಣದಲ್ಲಿ ತಿಂಡಿ-ಊಟೋಪಚಾರ!
ಇದು ಇಂಡಿಯನ್‌ ಏರ್‌ಲೈನ್ಸ್‌ ‘ಮೆನು’ ಬದಲಿಸಲು ಸಂಗ್ರಹಿಸುವ ಜನಾಭಿಪ್ರಾಯ ರೀತಿ

ಬೆಂಗಳೂರು : ವಿಮಾನಗಳಲ್ಲಿ ತಿಂಡಿ- ಊಟೋಪಚಾರ ಸುದಾರಿಸುವ ಸಲುವಾಗಿ ಗುರುವಾರ (ಸೆ.25) ಇಂಡಿಯನ್‌ ಏರ್‌ಲೈನ್ಸ್‌ ಪ್ರಯಾಣಿಕರಿಗೆ ಹೊಸ ರೀತಿಯ ಖಾದ್ಯಗಳನ್ನು ಬಡಿಸಿ, ಹೇಗಿದೆ ಎಂದು ವಿಚಾರಿಸಿಕೊಂಡಿತು.

ತರಹೇವಾರಿ ಪ್ರಕಾರದ ಖಾದ್ಯಗಳು, ಭಾರೀ ಬೆಲೆಯ ಟೀ, ಮಧ್ಯಾಹ್ನದ ಊಟ, ರಾತ್ರಿ ಊಟ- ಎಲ್ಲವುಗಳನ್ನೂ ಪ್ರಯಾಣಿಕರು ನೋಡುವಂತೆ ಇಡಲಾಗಿತ್ತು. ಊಟದ ರುಚಿ ನೋಡಿದ ಪ್ರಯಾಣಿಕರಿಂದ ಪ್ರತಿಕ್ರಿಯೆಗಳನ್ನು ಅಧಿಕಾರಿಗಳು ಸಂಗ್ರಹಿಸುತ್ತಿದ್ದರು. 3 ತಿಂಗಳಿಗೊಮ್ಮೆ ಊಟದ ‘ಮೆನು’ ಬದಲಿಸುವುದು ಇಂಡಿಯನ್‌ ಏರ್‌ಲೈನ್ಸ್‌ನ ಪರಿಪಾಠ.

ಸುದ್ದಿಗಾರರ ಜೊತೆ ಮಾತಾಡಿದ ಇಂಡಿಯನ್‌ ಏರ್‌ಲೈನ್ಸ್‌ನ ದಕ್ಷಿಣ ವಿಬಾಗದ ಪ್ರಾದೇಶಿಕ ನಿರ್ದೇಶಕ ಯಶ್‌ವೀರ್‌ ಕುಮಾರ್‌ ಪ್ರಕಾರ- ದಿನನಿತ್ಯ ದಕ್ಷಿಣ ವಿಭಾಗದ ವಿಮಾನಗಳಲ್ಲಿ 6,700 ಊಟಗಳು ಖರ್ಚಾಗುತ್ತವೆ. ತಿಂಗಳಿಗೆ 2 ಕೋಟಿ ರುಪಾಯಿ ಬೆಲೆಯ ಊಟ- ತಿಂಡಿಗಳು ಪ್ರಯಾಣಿಕರ ಹೊಟ್ಟೆ ಸೇರುತ್ತವೆ. ಪ್ರಯಾಣಿಕರಿಗೆ ಬೋರ್‌ ಆಗದಿರಲೆಂದು ಪ್ರತಿ ಮೂರು ತಿಂಗಳಿಗೊಮ್ಮೆ ಊಟದ ‘ಮೆನು’ವನ್ನು ಬದಲಾಯಿಸುತ್ತೇವೆ. ಕಳೆದ ಸಲ ಚೆನ್ನೈನಲ್ಲಿ ಈ ರೀತಿ ಪ್ರಯಾಣಿಕರಿಗೆ ಊಟ ಬಡಿಸಿ, ಪ್ರತಿಕ್ರಿಯೆ ಸ್ವೀಕರಿಸಲಾಗಿತ್ತು. ಹೈದರಾಬಾದ್‌ನಲ್ಲಿ ಶುಕ್ರವಾರ ಇದೇ ರೀತಿ ವಿಮಾನ ಪ್ರಯಾಣಿಕರಿಗೆ ಊಟ ಬಡಿಸಿ, ಪ್ರತಿಕ್ರಿಯೆ ಪಡೆಯಲಾಗುವುದು.

ಇನ್ನೊಂದು ಸಂಗತಿ- ದಸರಾ ಪ್ರಯುಕ್ತ ಬೆಂಗಳೂರಿನ ವಿಮಾನಗಳಲ್ಲಿ ಹಬ್ಬದೂಟ ಕೊಡುವ ಪದ್ಧತಿಯೂ ಉಂಟು.

(ಪಿಟಿಐ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X