ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆಯ್ದ ರೈಲುಗಳಲ್ಲಿ ಪ್ರಸಕ್ತ ವಿತ್ತ ವರ್ಷದಲ್ಲೇ ಇಂಟರ್ನೆಟ್‌ ಸೌಲಭ್ಯ

By Staff
|
Google Oneindia Kannada News

ಆಯ್ದ ರೈಲುಗಳಲ್ಲಿ ಪ್ರಸಕ್ತ ವಿತ್ತ ವರ್ಷದಲ್ಲೇ ಇಂಟರ್ನೆಟ್‌ ಸೌಲಭ್ಯ
ರೈಲುಗಳನ್ನು ಆಧುನಿಕಗೊಳಿಸಲು ರೈಲ್ವೆ ಇಲಾಖೆಯು ಹಲವು ಕ್ರಮ

ಲಖನೌ: ಆಯ್ದ ರೈಲುಗಳಲ್ಲಿ ಸದ್ಯದಲ್ಲೇ ಇಂಟರ್‌ನೆಟ್‌ ಸೌಲಭ್ಯ ಒದಗಿಸಲು ರೈಲ್ವೇ ಇಲಾಖೆ ಮುಂದಾಗಿದೆ.

ಇದೇ ಹಣಕಾಸು ವರ್ಷದಲ್ಲಿ ಕೆಲವು ಹವಾ ನಿಯಂತ್ರಿತ ರೈಲುಗಳಲ್ಲಿ ಇಂಟರ್‌ನೆಟ್‌ ವ್ಯವಸ್ಥೆ ಇರುವ ಕಂಪ್ಯೂಟರ್‌ಗಳನ್ನು ಅಳವಡಿಸಲಾಗುವುದು ಎಂದು ರೈಲ್ವೇ ಮಂಡಳಿಯ ಅಧ್ಯಕ್ಷ ಆರ್‌. ಕೆ. ಸಿಂಗ್‌ ಮಂಗಳವಾರ ತಿಳಿಸಿದರು.

ಇಂಟರ್ನೆಟ್‌ ಸವಲತ್ತು ಒದಗಿಸುವುದರಿಂದ ದೀರ್ಘ ಪ್ರಯಾಣ ಮಾಡುವ ಪ್ರಯಾಣಿಕರಿಗೆ ಈ- ಮೈಯ್ಲ್‌ ನೋಡುವುದಕ್ಕೆ, ವೆಬ್‌ಸೈಟ್‌ಗಳನ್ನು ಓದುವುದಕ್ಕೆ ಅನುಕೂಲವಾಗಲಿದೆ ಎಂದು ಆರ್‌. ಕೆ. ಸಿಂಗ್‌ ಅಭಿಪ್ರಾಯಪಟ್ಟಿದ್ದಾರೆ.

ರೈಲುಗಳನ್ನು ಆಧುನಿಕಗೊಳಿಸಲು ಇಲಾಖೆಯು ಹಲವು ಕ್ರಮಗಳನ್ನು ಕೈಗೊಂಡಿದ್ದು, ಫಿಷ್‌ ಪ್ಲೇಟ್‌ಗಳ ಅಳವಡಿಕೆ, ಅಗ್ನಿ ನಿರೋಧಕ ಬೋಗಿಗಳನ್ನು ಪ್ರಯೋಗಾತ್ಮಕವಾಗಿ ಬಳಸಲು ನಿರ್ಧರಿಸಲಾಗಿದೆ ಎಂದು ಸಿಂಗ್‌ ಹೇಳಿದರು.

(ಇನ್ಫೋ ವಾರ್ತೆ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X