• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಕೃಷ್ಣ ಶಂಖ : ಅ.8 ರಿಂದ 11 ರವರೆಗೆ ಸಿಎಂ ಜನ ಸ್ಪಂದನ ಯಾತ್ರೆ

By Staff
|

ಕೃಷ್ಣ ಶಂಖ : ಅ.8 ರಿಂದ 11 ರವರೆಗೆ ಸಿಎಂ ಜನ ಸ್ಪಂದನ ಯಾತ್ರೆ

ಶುರುವಾಗ್ತಿದೆ ಸ್ವಾಮಿ ಕೃಷ್ಣ ಚುನಾವಣಾ ಪ್ರಚಾರ

ಬೆಂಗಳೂರು : ನಾಲ್ಕು ವರ್ಷ ಕಾಲ ತಮ್ಮ ಸರ್ಕಾರ ಮಾಡಿರುವ ಕೆಲಸದ ಬಗ್ಗೆ ಜನ ಏನಂತಾರೆ ಅನ್ನುವುದನ್ನು ತಿಳಿಯಲು ಮುಖ್ಯಮಂತ್ರಿ ಎಸ್ಸೆಂ ಕೃಷ್ಣ ಅಕ್ಟೋಬರ್‌ 8 ರಿಂದ 11ರವರೆಗೆ ‘ಜನ ಸ್ಪಂದನ’ ಯಾತ್ರೆ ಹೊರಡಲಿದ್ದಾರೆ.

ಬೆಂಗಳೂರಿನಿಂದ ಬಿಜಾಪುರದವರೆಗೆ 600 ಕಿ.ಮೀ. ರಸ್ತೆ ಪ್ರಯಾಣ ಮಾಡಲಿರುವ ಕೃಷ್ಣ , ಹಾದಿಬದಿಯ ಊರುಗಳ ತರಾವರಿ ಜನರಲ್ಲಿ ತಮ್ಮ ಬಗ್ಗೆ ಯಾವ ಅಭಿಪ್ರಾಯ ಇದೆ ಅಂತ ತಿಳಿದುಕೊಳ್ಳುವರು. 2004ನೇ ಇಸವಿಯಲ್ಲಿ ನಡೆಯಲಿರುವ ಲೋಕಸಭಾ ಚುನಾವಣೆಗೆ ಇದು ಕೃಷ್ಣ ಪ್ರಾರಂಭಿಸುತ್ತಿರುವ ಅನಧಿಕೃತ ಪ್ರಚಾರ ಕಾರ್ಯ ಎಂಬ ಸೊಲ್ಲು ರಾಜಕೀಯ ವಲಯದಲ್ಲಿ ಎದ್ದಿದೆ.

ಕರ್ನಾಟಕದ ಮುಖ್ಯಮಂತ್ರಿಯಾಗಿ ಕೃಷ್ಣ ಅಧಿಕಾರ ವಹಿಸಿಕೊಂಡು ಅಕ್ಟೋಬರ್‌ 11ಕ್ಕೆ ಸರಿಯಾಗಿ ನಾಲ್ಕು ವರ್ಷ ಪೂರೈಸಲಿದೆ. ಅವತ್ತು ಬಿಜಾಪುರದಲ್ಲಿ ಜನತೆಯನ್ನು ಉದ್ದೇಶಿಸಿ ಕೃಷ್ಣ ಮಾತಾಡುವರು. 1994ರಲ್ಲಿ ತಾವು ಪ್ರಾರಂಭಿಸಿದ 15 ಅಂಶಗಳ ಅಭಿವೃದ್ಧಿ ಯೋಜನೆಗಳ ಬಗ್ಗೆ ಜನಾಭಿಪ್ರಾಯ ಸಂಗ್ರಹಿಸುವರು.

ಕೃಷ್ಣ ಅವರ ಬೌದ್ಧಿಕ ಕೂಸುಗಳಾದ ಭೂದಾಖಲೆ ಕಂಪ್ಯೂಟರೀಕರಣದ ಯೋಜನೆ ‘ಭೂಮಿ’, ಶಾಲೆಗಳಲ್ಲಿ ಮಧ್ಯಾಹ್ನದ ಬಿಸಿ ಊಟದ ಕಾರ್ಯಕ್ರಮ ‘ಅಕ್ಷರ ದಾಸೋಹ’, ಮಹಿಳಾ ಅಭಿವೃದ್ಧಿ ಯೋಜನೆ ‘ಸ್ತ್ರೀ ಶಕ್ತಿ’, ಮನೆಗಳನ್ನು ಕಟ್ಟುವ ಯೋಜನೆ ಮತ್ತು ರೈತಮಿತ್ರ ಯೋಜನೆ- ಇವುಗಳ ಬಗ್ಗೆ ಜನರ ಪ್ರತಿಕ್ರಿಯೆ ಏನು ಎಂಬುದನ್ನು ಖುದ್ದು ಕೃಷ್ಣ ಕೇಳಿ, ತಿಳಿಯಲಿದ್ದಾರೆ.

ಕಾಂಗ್ರೆಸ್‌ ಸರ್ಕಾರ ಏಳು ಲಕ್ಷ ಮನೆಗಳನ್ನು ಕಟ್ಟಿ ದಾಖಲೆ ಮಾಡಿದ್ದು, ತಾನು ಇಟ್ಟುಕೊಂಡಿರುವ 11 ಲಕ್ಷ ಮನೆಗಳ ಕಟ್ಟುವ ಗುರಿಯತ್ತ ದಾಪುಗಾಲಿಟ್ಟಿದೆ. ರೈತರು ಮತ್ತು ಅವರ ಕುಟುಂಬಕ್ಕೆ ಇರುವ ‘ಯಶಸ್ವಿನಿ’ ಆರೋಗ್ಯ ವಿಮಾ ಯೋಜನೆಯನ್ನು ಸಾಕಷ್ಟು ಮಂದಿ ಹೊಗಳಿದ್ದಾರೆ. ಹೆಣ್ಣು ಮಕ್ಕಳಿಗೆ ಪದವಿ ಪೂರ್ವ ತರಗತಿವರೆಗೆ ಉಚಿತ ಶಿಕ್ಷಣ ಕಾರ್ಯಕ್ರಮವನ್ನೂ ಅನೇಕರು ಮೆಚ್ಚಿಕೊಂಡಿದ್ದಾರೆ. ಆದರೂ ಹಳ್ಳಿಗರ ಬಾಯಿಂದಲೇ ಅವರ ಅಭಿಪ್ರಾಯ ತಿಳಿಯುವುದು ನನ್ನ ಇರಾದೆ ಎನ್ನುತ್ತಾರೆ ಕೃಷ್ಣ .

1999ರಲ್ಲಿ ಬಸ್ಸಿನಲ್ಲಿ ‘ಪಾಂಚಜನ್ಯ’ ಯಾತ್ರೆ ಕೈಗೊಂಡು ಕಾಂಗ್ರೆಸ್‌ ಪಕ್ಷ ಚುನಾವಣೆಯಲ್ಲಿ ಜನ ಬೆಂಬಲ ಉಳಿಸಿಕೊಳ್ಳುವಂತೆ ನೋಡಿಕೊಂಡಿದ್ದ ಕೃಷ್ಣ ಈಗ ಇನ್ನೊಂದು ಯಾತ್ರೆ ಕೈಗೊಳ್ಳುತ್ತಿರುವ ಉದ್ದೇಶ ಕೂಡ ಚುನಾವಣೆಯ ಪ್ರಚಾರ ಎಂಬುದು ಸ್ಪಷ್ಟ.

ಕರ್ನಾಟಕ ಮತ್ತು ತಮಿಳುನಾಡಿನ ನಡುವೆ ಕಾವೇರಿ ವಿವಾದ ಭುಗಿಲೆದ್ದಿದ್ದಾಗ ಬೆಂಗಳೂರಿನಿಂದ ಮಂಡ್ಯವರೆಗೆ 108 ಕಿಲೋ ಮೀಟರು ಪಾದಯಾತ್ರೆ ಮಾಡಿ ಸಾಕಷ್ಟು ವಿವಾದಕ್ಕೂ ಸಿಕ್ಕಿದ್ದ ಕೃಷ್ಣ ಈಗ ಹಳ್ಳಿಗರ ಮನೆ ಬಾಗಿಲಿಗೇ ಹೊರಟು ನಿಂತಿದ್ದಾರೆ. ರೈತರ ಸಾಲು ಸಾಲು ಆತ್ಮಹತ್ಯೆ, ಆಂಧ್ರದ ಕ್ಯಾತೆ, ಇತರೆ ಪಕ್ಷಗಳ ಚುನಾವಣೆಯ ಪ್ರಚಾರ ತಂತ್ರದ ಧೂಳು- ಹಾದಿಗುಂಟ ಎದುರಾಗಲಿರುವ ಇವೆಲ್ಲ ತ್ರಾಸುಗಳ ನಡುವೆಯೇ ಕೃಷ್ಣ ರಥ ಸಾಗಲಿದೆ. ಅವತ್ತು ಪಾಂಚಜನ್ಯ, ಇವತ್ತು ಶಂಖ !

(ಪಿಟಿಐ)

ಮುಖಪುಟ / ಕೃಷ್ಣಗಾರುಡಿ

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more