ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

‘ನಾಲ್ಕೋ’ದಿಂದ ಚೀನಾಕ್ಕೆ 2000 ಕೋಟಿ ರು.ಅಲ್ಯುಮಿನಿಯಂ ರಫ್ತು

By Staff
|
Google Oneindia Kannada News

‘ನಾಲ್ಕೋ’ದಿಂದ ಚೀನಾಕ್ಕೆ 2000 ಕೋಟಿ ರು.ಅಲ್ಯುಮಿನಿಯಂ ರಫ್ತು
ದೇಶೀಯ ಮಾರುಕಟ್ಟೆಯಲ್ಲಿ ಅಲ್ಯುಮಿನಿಯಂಗೆ ಹೆಚ್ಚುತ್ತಿರುವ ಬೇಡಿಕೆ

ಬೆಂಗಳೂರು : ಪ್ರಸಕ್ತ ವಿತ್ತವರ್ಷದಲ್ಲಿ 2 ಸಾವಿರ ಕೋಟಿ ರುಪಾಯಿ ಮೌಲ್ಯದ ಅಲ್ಯುಮಿನಿಯಂನ್ನು ಚೀನಾದೇಶಕ್ಕೆ ರಫ್ತು ಮಾಡಲು ಸಾರ್ವಜನಿಕ ವಲಯದ ಬಹುದೊಡ್ಡ ಅಲ್ಯುಮಿನಿಯಂ ಕಂಪೆನಿ ನಾಲ್ಕೋ ಮುಂದಾಗಿದೆ.

ದೇಶೀಯ ಮಾರುಕಟ್ಟೆಯಲ್ಲಿ ಅಲ್ಯುಮಿನಿಯಂಗೆ ಭಾರೀ ಬೇಡಿಕೆ ಇರುವ ಸಂದರ್ಭದಲ್ಲಿ ನಾಲ್ಕೋ ಚೀನಾಕ್ಕೆ ರಫ್ತು ಮಾಡಲು ಹೊರಟಿದೆ. ಪ್ರಸಕ್ತ ವಿತ್ತವರ್ಷದಲ್ಲಿ 3500 ಕೋಟಿ ರುಪಾಯಿ ವಹಿವಾಟಿನ ಗುರಿಯನ್ನು ನಾಲ್ಕೋ ಹೊಂದಿದೆ. ಕಳೆದ ವಿತ್ತ ವರ್ಷಕ್ಕಿಂತ ಪ್ರತಿಶತ 8ರ ಬೆಳವಣಿಗೆ ಸಾಧಿಸಲು ಪ್ರಯತ್ನಿಸಲಾಗುತ್ತಿದೆ ಎಂದು ನಾಲ್ಕೋ ಅಧ್ಯಕ್ಷ ಹಾಗೂ ಕಾರ್ಯಕಾರಿ ನಿರ್ದೇಶಕ ಸಿ.ವೆಂಕಟರಮಣ ಮಂಗಳವಾರ (ಸೆ.29) ಹೇಳಿದರು.

ಮೈಸೂರು ವಾಣಿಜ್ಯ ಮತ್ತು ಕೈಗಾರಿಕಾ ಒಕ್ಕೂಟ ಹಾಗೂ ಅಲ್ಯೂಮಿನಿಯಂ ಅಸೋಸಿಯೇಷನ್‌ ಆಫ್‌ ಇಂಡಿಯಾ ಜಂಟಿಯಾಗಿ ಏರ್ಪಡಿಸಿದ್ದ ಇಂಜಿನಿಯರ್‌ಗಳ ದಿನ ಕಾರ್ಯಕ್ರಮದಲ್ಲಿ ವೆಂಕಟರಮಣ ಮಾತನಾಡುತ್ತಿದ್ದರು.

ದೇಶೀಯ ಮಾರುಕಟ್ಟೆಯಲ್ಲಿ ಅಲ್ಯೂಮಿನಿಯಂ ಬಳಕೆ ಹೆಚ್ಚಿಸಲು ನಾಲ್ಕೋ ಪ್ರಯತ್ನಿಸುತ್ತಿದೆ. ಪ್ರಸಕ್ತ ವಿತ್ತವರ್ಷದ ಮೊದಲ ತ್ರೆೃಮಾಸಿಕದಲ್ಲಿ ನಾಲ್ಕೋ 650 ಕೋಟಿ ರುಪಾಯಿ ಆದಾಯ ಗಳಿಸಿದೆ ಎಂದು ವೆಂಕಟರಮಣ ತಿಳಿಸಿದರು.

ಭಾರತದಲ್ಲಿ ಕಾರುಗಳ ಉತ್ಪಾದನೆಗೆ 25 ಕೇಜಿ ಅಲ್ಯೂಮಿನಿಯಂ ಬಳಸಿದರೆ, ಅಮೆರಿಕಾ ಹಾಗೂ ಜಪಾನಿನಲ್ಲಿ ಈ ಪ್ರಮಾಣ 150 ಕೇಜಿಯಷ್ಟಿದೆ ಎಂದು ವೆಂಕಟರಮಣ ಹೇಳಿದರು.

(ಪಿಟಿಐ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X