ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೀರಾ ನಯ್ಯರ್‌ ‘ವಿಡಿಯಾ’ ಕೃತಿಗೆ ಏಷ್ಯನ್‌ ಅಮೆರಿಕನ್‌ ಪ್ರಶಸ್ತಿ

By Staff
|
Google Oneindia Kannada News

ಮೀರಾ ನಯ್ಯರ್‌ ‘ವಿಡಿಯಾ’ ಕೃತಿಗೆ ಏಷ್ಯನ್‌ ಅಮೆರಿಕನ್‌ ಪ್ರಶಸ್ತಿ
ವಿಮರ್ಶಕರ ಮೆಚ್ಚುಗೆ ಗಳಿಸಿದ ವಲಸಿಗ ಭಾರತೀಯರ ಅನುಭವಗಳ ಚಿತ್ರಣ

ಹ್ಯೂಸ್ಟನ್‌ : ಭಾರತೀಯ ಮೂಲದ ಲೇಖಕಿ ಮೀರಾ ನಯ್ಯರ್‌ ಅವರ ‘ವಿಡಿಯಾ: ಸ್ಟೋರೀಸ್‌’ ಕೃತಿ ಪ್ರತಿಷ್ಠಿತ ಏಷ್ಯನ್‌ ಅಮೆರಿಕನ್‌ ಸಾಹಿತ್ಯ ಪ್ರಶಸ್ತಿಗೆ ಪಾತ್ರವಾಗಿದೆ.

ವಲಸಿಗರ ಅನುಭವಗಳನ್ನು ಗಾಢನೆಲೆಯಲ್ಲಿ ಚಿತ್ರಿಸಿರುವ ಮೀರಾ ನಯ್ಯರ್‌ ಅವರ ‘ವಿಡಿಯಾ: ಸ್ಟೋರೀಸ್‌’ ಕೃತಿ 2003ನೇ ಸಾಲಿನ ಏಷ್ಯನ್‌ ಅಮೆರಿಕನ್‌ ಸಾಹಿತ್ಯ ಪ್ರಶಸ್ತಿಗೆ ಆಯ್ಕೆಯಾಗಿದೆ. 60ಕ್ಕೂ ಹೆಚ್ಚು ಏಷ್ಯನ್‌ ಅಮೆರಿಕನ್‌ ಲೇಖಕರ ಕೃತಿಗಳು ಸ್ಪರ್ಧೆಯಲ್ಲಿದ್ದು , ಅಂತಿಮವಾಗಿ ಮೀರಾ ಅವರ ಕೃತಿಗೆ ಅದೃಷ್ಟ ಒಲಿಯಿತು.

Meera Nairನ್ಯೂಯಾರ್ಕ್‌ನಲ್ಲಿನ ಏಷ್ಯಾ ಸೊಸೈಟಿಯಲ್ಲಿ ಡಿಸೆಂಬರ್‌ 8ರಂದು ನಡೆಯುವ ಸಮಾರಂಭದಲ್ಲಿ ಮೀರಾ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಹತ್ತು ಸಣ್ಣಕಥೆಗಳ ಸಂಕಲನವಾದ ‘ವಿಡಿಯಾ: ಸ್ಟೋರೀಸ್‌’ ಕೃತಿ, ಭಾರತೀಯ ವಲಸಿಗರ ಅನುಭವಗಳನ್ನು ಪರಿಣಾಮಕಾರಿಯಾಗಿ ಚಿತ್ರಿಸಿದೆ ಎಂದು ವಿಮರ್ಶಕರು ಅಭಿಪ್ರಾಯಪಟ್ಟಿದ್ದಾರೆ.

ಈ ಮುನ್ನ ಮೀರಾ ಅವರ ‘ವಿಡಿಯಾ: ಸ್ಟೋರೀಸ್‌’ ಕೃತಿ 2002ನೇ ಇಸವಿಯ ಅತ್ಯುತ್ತಮ ಕೃತಿಗಳಲ್ಲೊಂದು ಎಂದು ವಾಷಿಂಗ್ಟನ್‌ ಪೋಸ್ಟ್‌ ಪತ್ರಿಕೆ ಗುರ್ತಿಸಿತ್ತು .

(ಪಿಟಿಐ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X