ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕ್ರೆೃಸ್ತ ಪಾದ್ರಿ ಗ್ರಹಾಂ ಸ್ಟೇನ್ಸ್‌ ಹಂತಕ ದಾರಾಸಿಂಗ್‌ಗೆ ಮರಣದಂಡನೆ

By Staff
|
Google Oneindia Kannada News

ಕ್ರೆೃಸ್ತ ಪಾದ್ರಿ ಗ್ರಹಾಂ ಸ್ಟೇನ್ಸ್‌ ಹಂತಕ ದಾರಾಸಿಂಗ್‌ಗೆ ಮರಣದಂಡನೆ
ಇತರ 12 ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ

ಭುವನೇಶ್ವರ: ಆಸ್ಟ್ರೇಲಿಯಾ ಮೂಲದ ಕ್ರೆೃಸ್ತ ಪಾದ್ರಿ ಗ್ರಹಾಂ ಸ್ಟುವರ್ಟ್‌ ಸ್ಟೇನ್ಸ್‌ ಹಾಗೂ ಅವರ ಇಬ್ಬರು ಮಕ್ಕಳ ಕೊಲೆ ಪ್ರಕರಣದ ಪ್ರಮುಖ ಆರೋಪಿ ದಾರಾ ಸಿಂಗ್‌ ಅಲಿಯಾಸ್‌ ರವೀಂದ್ರಕುಮಾರ್‌ ಪಾಲ್‌ಗೆ ಇಲ್ಲಿನ ವಿಚಾರಣಾ ನ್ಯಾಯಾಲಯ ಮರಣದಂಡನೆ ವಿಧಿಸಿದೆ. ಇತರ 12 ಮಂದಿ ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಿದೆ.

ಸ್ಟೇನ್ಸ್‌ ಹತ್ಯೆ ಮಾತ್ರವಲ್ಲದೆ, 1999ರ ಆಗಸ್ಟ್‌ 26ರಂದು ಪದಿಯಾಬೇಡ ಎಂಬಲ್ಲಿ ಶೇಖ್‌ ರೆಹ್ಮಾನ್‌ ಎಂಬ ಮುಸ್ಲಿಂ ವ್ಯಾಪಾರಿ ಹತ್ಯೆ, ಅದೇ ವರ್ಷ ಸೆ. 1ರಂದು ಜಮುಬನಿ ಹಳ್ಳಿಯಲ್ಲಿ ಫಾದರ್‌ ಅರುಳ್‌ ದಾಸ್‌ ಅವರನ್ನು ಹತ್ಯೆ ಮಾಡಿದ ಆರೋಪ ದಾರಾ ಸಿಂಗ್‌ ಮೇಲಿತ್ತು.

ಜೀವಾವಧಿ ಶಿಕ್ಷೆ ಪಡೆದ ಇತರ ಆರೋಪಿಗಳು-

ರಜತ್‌ ಕುಮಾರ್‌ ದಾಸ್‌ ಅಲಿಯಾಸ್‌ ದೀಪು ದಾಸ್‌, ಮಹೇಂದ್ರ ಹೆಂಬ್ರಂ, ಓಜೆನ್‌ ಹೆಂಬ್ರಂ, ಉಮಾಕಾಂತ ಭೋಯಿ, ಕಾರ್ತೀಕ್‌ ಲೋಹಾರ್‌. ರಬಿ ಸೋರೆನ್‌, ಥುರಮ್‌ ಹೊ, ದಯಾನಿಧಿ ಪಾತ್ರ, ಮಹಾದೇವ್‌ ಮಹಾಂತ, ಹರೀಶ್‌ ಮಹಾಂತ ಮತ್ತು ಸುರಥ್‌ ನಾಯಕ್‌.

(ಇನ್ಫೋ ವಾರ್ತೆ)

ಪೂರಕ ಓದಿಗೆ-
ಮತ ಪ್ರಚಾರಕ ಪಾಪಿಯನ್ನಾರು ಕ್ಷಮಿಸಬೇಕು ?

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X