ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಿ.ಎಂ.ಟಿ.ಸಿ. ಬಸ್ಸಲ್ಲಿ ಟೆರರಿಸ್ಟು !

By Staff
|
Google Oneindia Kannada News

ಬಿ.ಎಂ.ಟಿ.ಸಿ. ಬಸ್ಸಲ್ಲಿ ಟೆರರಿಸ್ಟು !
ಪ್ರಯಾಣಿಕರಿಗೆಲ್ಲ ಗಾಬರಿಯಾ ಗಾಬರಿ. ಟೆರರಿಸ್ಟು ಅದ್ಯಾವಾಗ ಎದುರಾಗುತ್ತಾನೋ, ಅದ್ಯಾರ ಮೈಮೇಲೆ ಎರಗುತ್ತಾನೊ ಎನ್ನುವ ಭಯ. ಅಂದಹಾಗೆ, ಬಸ್ಸಲ್ಲಿ ಬಂದ ಟೆರರಿಸ್ಟು ಯಾರು ಅಂತೀರಿ ?

ಮೊನ್ನೆ ಬೆಂಗಳೂರು ಮಹಾನಗರ ಸಾರಿಗೆ (ಬಿಎಂಟಿಸಿ) ಬಸ್‌ನಲ್ಲಿ ಪ್ರಯಾಣಿಸುತ್ತಿದ್ದೆ. ಇಂದಿರಾನಗರದಲ್ಲಿ ನಗರದ ಸಾರ್ವಜನಿಕ ಬಸ್ಸಲ್ಲಿ ಹತ್ತಿದ ನಾನು ಚೀಟಿ ಪಡೆಯಲು ನಿರ್ವಾಹಕರಿಗೆ ಹಣ ಕೊಡಲು ಪರ್ಸ್‌ ತೆಗೆಯುತ್ತಿದ್ದೆ . ಅಷ್ಟರಲ್ಲಿ ನನ್ನ ಪಕ್ಕದಲ್ಲಿ ಕುಳಿತ ಹುಡುಗಿ ಜೋರಾಗಿ ಕೂಗಿದಳು. ಹುಡುಗಿ ಭಯಗೊಂಡಂತಿತ್ತು !

‘ಹುಡುಗಿ ಕೂಗಿದ್ದೇಕೆ ?’, ‘ಏನಾಯಿತಪ್ಪಾ ಈಕೆಗೆ ?’ ಎಂದು ಎಲ್ಲರಿಗೂ ಆಶ್ಚರ್ಯ, ಕುತೂಹಲ. ಎಲ್ಲ ಕುತೂಹಲಿ ಕಣ್ಣುಗಳು ಆ ಹುಡುಗಿಯತ್ತಲೇ ! ಆ ಹುಡುಗಿ ಇನ್ನೂ ದಿಗ್ಭ್ರಮೆಯಲ್ಲೇ ಇದ್ದಳು. ಅದೇ ಗಾಬರಿಯಲ್ಲಿ , ‘ಅಯ್ಯಾ! ಎಷ್ಟು ದೊಡ್ಡ ಹಲ್ಲಿ’ ಎಂದಳು. ಈಗ ಕಕ್ಕಾಬಿಕ್ಕಿಯಾಗುವ ಸರದಿ ಇತರರದು.

Reptile terrorist in BMTC bus !ಬಸ್ಸಲ್ಲಿ ಗುಜುಗುಜು ಶುರುವಾಯಿತು. ಯಾರ ಜೊತೆಯಾ ಬಂದ ಹಲ್ಲಿಯ ಜಾತಿಗೆ ಸೇರಿದ ಒಂದು ಪ್ರಾಣಿ ಮಹಾನಗರಿ ಬೆಂಗಳೂರಿನ ಬಸ್ಸಿನಲ್ಲಿ ವಿಹಾರಕ್ಕೆ ಹೊರಟಿದೆ !

ಜನರೆಲ್ಲ ಗಾಬರಿಯಿಂದಿರುವಾಗ ಒಬ್ಬ ಹೆಂಗಸು, ‘ಇದಕ್ಕಾ ್ಯಕೆ ಇಷ್ಟೊಂದು ರಂಪ. ಬಸ್ಸಲ್ಲಿ ಇದೆಲ್ಲಾ ಮಾಮೂಲು’ ಅನ್ನುವುದೇ ! ಘಾಟಿ ಹೆಂಗಸಪ್ಪ ! ಮುಂದಿನ ಸ್ಟಾಪ್‌ನಲ್ಲಿ ಬಸ್‌ ಹತ್ತಿದವರಿಗೆ, ‘ರೀ ಜೋಪಾನ ದೊಡ್ಡ ಹಲ್ಲಿ ಇದೆ’ ಎಂದು ಹಳಬರಿಂದ ಎಚ್ಚರಿಕೆಯ ಸ್ವಾಗತ.

‘ಯಾರ ಕಾಲ ಕೆಳಗೆ ಬರತ್ತೊ ಏನೋ? ಕಾಲ ಕೆಳಗೆ ಬಂದಾಗ ಹಲ್ಲಿಯನ್ನು ತುಳಿದುಬಿಡಿ’ ಎಂಬ ಸೂಚನೆ ಕೆಲವರಿಂದ. ಕಂಡಕ್ಟರ್‌ ಪ್ರಾಣಿಪ್ರೇಮಿ ಅನ್ನಿಸುತ್ತೆ : ‘ಹಂಗೆಲ್ಲ ಸಾಯಿಸ್ಬಾರ್ದು’ ಎಂದು ಕರುಣೆ ತೋರಿದ. ಆ ಕಂಡಕ್ಟರ್‌ ಗಾಂಧಿಯ ಆತ್ಮಕಥೆ ಓದಿದ್ದಾನಾ ?

ಡ್ರೆೃವರ್‌ಗೆ ಏನನ್ನಿಸಿತೊ ಏನೋ, ಕಡೆಗೊಂದು ಕಡೆ ಬಸ್‌ ನಿಲ್ಲಿಸಿದ. ಆ ಓತಿಕ್ಯಾತ/ಹಲ್ಲಿ/ಹಾವ್ರಾಣಿ ಕಣ್ಣಿಗೆ ಬಿದ್ದ ತಕ್ಷಣ ಡ್ರೈವರ್‌ ಕೈಗೆ ಸಿಕ್ಕ ರಟ್ಟು ತೆಗೆದುಕೊಂಡು ಅದಕ್ಕೆರಡು ಧರ್ಮದೇಟು ಹಾಕಿದ. ಪಾಪ, ಏಟು ತಿಂದ ಆ ಸರೀಸೃಪ ಅದ್ಯಾವ ಯಾವ ಮೂಲೆಯಲ್ಲಿ ಹೋಗಿ ಸೇರಿಕೊಂಡಿತೊ, ಮತ್ತೆ ದರ್ಶನ ನೀಡಲೇ ಇಲ್ಲ. ಆದರೆ ಬಸ್ಸಿಳಿಯುವವರೆಗೂ ಹಲ್ಲಿಯ ಭಯ ಕಾಡುತ್ತಿದ್ದುದು ಮಾತ್ರ ಸುಳ್ಳಲ್ಲ .

ಬಿಎಂಟಿಸಿ ಬಸ್‌ ಪ್ರಯಾಣದಲ್ಲಿ ನಿಮ್ಮ ಅನುಭವಗಳ ಕುರಿತು ಬರೆಯಿರಿ.


ಮುಖಪುಟ / ಬೆಂಗಳೂರು ಡೈರಿ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X