ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೆಂಗಳೂರಲ್ಲಿ ಬಿಹಾರಿ ಬಾಬು ಲಾಲೂ ಪ್ರಸಾದ್‌ ಯಾದವ್‌

By Staff
|
Google Oneindia Kannada News

ಬೆಂಗಳೂರಲ್ಲಿ ಬಿಹಾರಿ ಬಾಬು ಲಾಲೂ ಪ್ರಸಾದ್‌ ಯಾದವ್‌
‘ಎಲ್‌.ಕೆ.ಅಡ್ವಾಣಿಯವರನ್ನು ಸುಮ್ಮನೆ ಬಿಡಬಾರದು’

ಬೆಂಗಳೂರು : ಕೇಂದ್ರ ಬೇಹುಗಾರಿಕಾ ದಳ (ಸಿಬಿಐ) ಮತ್ತು ಉತ್ತರ ಪ್ರದೇಶ ಸರ್ಕಾರ ಉಪ ಪ್ರಧಾನಿ ಎಲ್‌.ಕೆ.ಅಡ್ವಾಣಿ ವಿರುದ್ಧ ಹೈಕೋರ್ಟಿನ ಮೆಟ್ಟಿಲು ಹತ್ತಬೇಕು ಎಂದು ರಾಷ್ಟ್ರೀಯ ಜನತಾ ದಳದ ಅಧ್ಯಕ್ಷ ಲಾಲೂ ಪ್ರಸಾದ್‌ ಯಾದವ್‌ ಆಗ್ರಹಿಸಿದರು.

ಸೋಮವಾರ (ಸೆ.22) ನಗರಕ್ಕೆ ಭೇಟಿ ನೀಡಿದ ಲಾಲೂ ಸುದ್ದಿಗಾರರ ಜೊತೆ ಮಾತಾಡಿದರು. ಬಾಬ್ರಿ ಮಸೀದಿ ಕೆಡವಿದ ಯೋಜನೆಯ ರೂವಾರಿ ಅಡ್ವಾಣಿ ಎಂಬುದು ಜನರಿಗೆ ಗೊತ್ತಿಲ್ಲದ ವಿಷಯವೇನಲ್ಲ. ಬಾಬ್ರಿ ಮಸೀದಿ ಉರುಳಿಸಿದ ಹುನ್ನಾರದ ಕೇಸಿನಲ್ಲಿ ಅಡ್ವಾಣಿಯವರನ್ನು ವಿಶೇಷ ನ್ಯಾಯಾಲಯ ಖುಲಾಸೆಗೊಳಿಸಿದೆ ಎಂದು ಸುಮ್ಮನಾಗಬಾರದು. ತಕ್ಷಣವೇ ಉತ್ತರ ಪ್ರದೇಶ ಸರ್ಕಾರ ಮತ್ತು ಸಿಬಿಐ ಹೈಕೋರ್ಟಿಗೆ ಅಡ್ವಾಣಿ ಅಪೀಲು ಸಲ್ಲಿಸಬೇಕು ಎಂಬುದು ತಮ್ಮ ಆಗ್ರಹ ಎಂದರು.

ಬಿಜಿಪಿಯವರು ಅಧಿಕಾರಕ್ಕೆ ಬಂದಿದ್ದು ರಾಮನ ಹೆಸರು ಹೇಳಿಕೊಂಡೇ. ಈಗ ಅದನ್ನು ಕಳಕೊಳ್ಳುವುದು ರಾಮ ನಾಮದಿಂದಲೇ ಎಂದು ಲೇವಡಿಯಾಡಿದ ಲಾಲೂ, ಪದೇಪದೇ ಬಾಬ್ರಿ ಮಸೀದಿ ಕೆಡಹಿದ ಐಡಿಯಾ ಅಡ್ವಾಣಿ ಹೊಸೆದಿದ್ದು ಖರೆ ಎಂದು ಹೇಳಿದರು.

ಇದಕ್ಕೂ ಮುಂಚೆ ಇಸ್ಕಾನ್‌ ದೇವಸ್ಥಾನಕ್ಕೆ ಭೇಟಿ ಕೊಟ್ಟು, ‘ಅಕ್ಷಯ ಪಾತ್ರೆ’ ಯೋಜನೆಯನ್ನು ವೀಕ್ಷಿಸಿದ ಲಾಲೂ ದೇಶ ಒಡೆಯಲು ರಾಜಕೀಯ ಪಕ್ಷಗಳು ಜಾತಿ ಮತ್ತು ಧರ್ಮವನ್ನು ಬಳಸಬಾರದು ಎಂದರು. ಸಮಾಜದಲ್ಲಿ ಭ್ರಷ್ಟಾಚಾರ, ಶೋಷಣೆ ಹಾಗೂ ದ್ವೇಷ ತೊಡೆದು ಹಾಕಲು ಭಗವಾನ್‌ ಕೃಷ್ಣನೇ ನಮಗೆ ಸ್ಫೂರ್ತಿಯಾಗಬೇಕು ಎಂದು ಹಿತೋಪದೇಶ ಮಾಡಿದರು.

ಇಸ್ಕಾನ್‌ ದೇಗುಲದ ಮಧ್ಯಾಹ್ನದ ಊಟ ಯೋಜನೆಯನ್ನು ಬಾಯಿತುಂಬಾ ಹೊಗಳಿದ ಲಾಲೂ, ಯೋಜನೆಗೆ ತಮ್ಮ ಸರ್ಕಾರದ ಬೆಂಬಲ ಕೊಡುವುದಾಗಿ ಭರವಸೆ ಇತ್ತರು. ದೇಶದೆಲ್ಲೆಡೆ ಈ ಯೋಜನೆಯನ್ನು ಜಾರಿಗೆ ತರಬೇಕು ಎಂದು ಅವರು ಕರೆ ಕೊಟ್ಟರು.

(ಪಿಟಿಐ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X