ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹಿರಿಯ ಸಾಹಿತಿ ಎನ್‌.ಕುಲಕರ್ಣಿಗೆ ಶಿವರಾಮ ಕಾರಂತ ಪ್ರಶಸ್ತಿ

By Staff
|
Google Oneindia Kannada News

ಹಿರಿಯ ಸಾಹಿತಿ ಎನ್‌.ಕುಲಕರ್ಣಿಗೆ ಶಿವರಾಮ ಕಾರಂತ ಪ್ರಶಸ್ತಿ
91 ವರ್ಷ ವಯಸ್ಸಿನ ಎನ್ಕೆ 64ಕ್ಕೂ ಹೆಚ್ಚು ಕೃತಿಗಳನ್ನು ಬರೆದಿದ್ದಾರೆ

ಮೂಡಬಿದರೆ : ವಿವಿಧ ಸಾಹಿತ್ಯ ಪ್ರಕಾರಗಳಲ್ಲಿ ಕೃತಿಗಳನ್ನು ಹೊಮ್ಮಿಸಿರುವ ಹಿರಿಯ ಲೇಖಕ ಎನ್‌.ಕುಲಕರ್ಣಿ ಅವರನ್ನು 2003ನೇ ಇಸವಿಯ ಶಿವರಾಮ ಕಾರಂತ ಪ್ರಶಸ್ತಿಗೆ ಆರಿಸಲಾಗಿದೆ.

ಮೂಡಬಿದಿರೆಯ ಶಿವರಾಮ ಕಾರಂತ ಪ್ರತಿಷ್ಠಾನ ಶುಕ್ರವಾರ (ಸೆ.19) ಆಯ್ಕೆಯನ್ನು ಪ್ರಕಟಿಸಿತು. 7 ಸಾವಿರ ರುಪಾಯಿ ನಗದನ್ನು ಪ್ರಶಸ್ತಿ ಒಳಗೊಂಡಿದೆ. ಕಳೆದ 12 ವರ್ಷಗಳಿಂದ ಸಾಹಿತ್ಯ ಸಾಧಕರನ್ನು ಪ್ರತಿಷ್ಠಾನ ಪ್ರತಿವರ್ಷ ಗೌರವಿಸುತ್ತ ಬಂದಿದೆ.

ಎನ್ಕೆ ಎಂದೇ ಹೆಸರುವಾಸಿಯಾಗಿರುವ 91 ವರ್ಷ ವಯಸ್ಸಿನ ಕುಲಕರ್ಣಿ ಕಳೆದ 63 ವರ್ಷಗಳಲ್ಲಿ 15 ಏಕಾಂಕ ನಾಟಕಗಳು, 10 ಕಾದಂಬರಿಗಳು, 8 ಸಾಹಿತ್ಯ ವಿಮರ್ಶೆಗಳು, 4 ದೊಡ್ಡ ನಾಟಕಗಳು, 5 ಹರಟೆ ಕೃತಿಗಳನ್ನು ಬರೆದಿದ್ದಾರೆ. ಒಟ್ಟು 64ಕ್ಕೂ ಹೆಚ್ಚು ಕೃತಿಗಳನ್ನು ಬರೆದಿರುವ ಎನ್ಕೆ ಸಜ್ಜನಿಕೆಗೆ ಹೆಸರಾದವರು. ಈ ಬಾರಿ ಅವರಿಗೆ ಕೊಡಮಾಡುವ ಕಾರಂತ ಪ್ರಶಸ್ತಿಯ ನಗದನ್ನು ದಿವಂಗತ ಜಸ್ಟಿಸ್‌ ಕೆ.ಎಸ್‌. ಹೆಗ್ಡೆ ಸ್ಮರಣಾರ್ಥ ಮಂಗಳೂರಿನ ಲ್ಯಾಮಿನಾ ಸಂಸ್ಥೆ ನೀಡಲಿದೆ.

(ಇನ್ಫೋ ವಾರ್ತೆ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X