• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

‘ಕನ್ನಡ ಕಣ್ಮಣಿಗಳ್‌ ಎಳುವರ್‌’: ತಮಿಳಿನಲ್ಲಿ ಕನ್ನಡದ ಸಪ್ತರ್ಷಿಗಳು

By Staff
|

‘ಕನ್ನಡ ಕಣ್ಮಣಿಗಳ್‌ ಎಳುವರ್‌’: ತಮಿಳಿನಲ್ಲಿ ಕನ್ನಡದ ಸಪ್ತರ್ಷಿಗಳು

ತಮಿಳಿನ ಆಂಡಾಳ ವಿರಚಿತ ಭಕ್ತಿ ಸಾಹಿತ್ಯ ಗೀತೆಗಳ ಕೃತಿ ತಿರುಪ್ಪಾಲೈ ಕನ್ನಡಕ್ಕೆ

ಜ್ಞಾನಪೀಠ ಪ್ರಶಸ್ತಿ ವಿಜೇತ ಕನ್ನಡದ ಏಳು ಮೇರು ಸಾಹಿತಿಗಳ ಬದುಕು, ಬರಹಗಳನ್ನು ತಮಿಳು ಸಾಹಿತ್ಯವಲಯಕ್ಕೆ ಪರಿಚಯಿಸುವ ಪುಸ್ತಕವನ್ನು ತಮಿಳು ಲೇಖಕ ಮು.ಪಸುಮಲೈ ಅರಸು ಅವರು ಬರೆದಿದ್ದಾರೆ.

‘ಕನ್ನಡ ಕಣ್ಮಣಿಗಳ್‌ ಎಳುವರ್‌’ ಎಂಬ ಈ ಕೃತಿಯಲ್ಲಿ ಕನ್ನಡ ಸಾಹಿತ್ಯಲೋಕಕ್ಕೆ ಕೀರ್ತಿ ತಂದಿಟ್ಟ ಜ್ಞಾನ ಪೀಠ ಲೇಖಕರ ಬರಹದ ವೈಶಿಷ್ಟ್ಯಗಳನ್ನು ಪಸುಮಲೈ ಗುರುತಿಸಿ ಪುಸ್ತಕ ಬರೆದಿದ್ದಾರೆ. ಇದೇವೇಳೆ- ತಮಿಳು ಸಾಹಿತ್ಯ ವಲಯದಲ್ಲಿ ಪ್ರಸಿದ್ಧವಾಗಿರುವ ಭಕ್ತಿ ಸಾಹಿತ್ಯ ರಚಿಸಿರುವ ಆಂಡಾಳ ವಿರಚಿತ ಭಕ್ತಿ ಸಾಹಿತ್ಯ ಗೀತೆಗಳ ಕೃತಿ ತಿರುಪ್ಪಾಲೈಯನ್ನು ಪ್ರೊ. ನಾ.ಗೀತಾಚಾರ್ಯ ಅವರು ಕನ್ನಡಕ್ಕೆ ಅನುವಾದಿಸಿದ್ದಾರೆ.

ನೆರೆಹೊರೆ ರಾಜ್ಯಗಳ ನಡುವೆ ಭಾಷಾ ಬಿರುಕುಗಳು ಸುಧಾರಿಸುವ ಹಿನ್ನೆಲೆಯಲ್ಲಿ ಈ ಎರಡು ಕೃತಿಗಳ ಪ್ರಕಟಣೆ ಮಹತ್ವ ಪಡೆದಿದ್ದು - ಕನ್ನಡ ಗೆಳೆಯರ ಬಳಗ ಪುಸ್ತಕಗಳನ್ನು ಬಿಡುಗಡೆ ಮಾಡಲಿದೆ. ಸೆ. 23ರಂದು ಬೆಂಗಳೂರಿನ ಬಿಎಂಶ್ರೀ ಸ್ಮಾರಕ ಪ್ರತಿಷ್ಠಾನದಲ್ಲಿ ಪುಸ್ತಕ ಅನಾವರಣ ಸಮಾರಂಭ ನಡೆಯಲಿದೆ.

ಬೆಂಗಳೂರು ವಿವಿಯ ಸಮಾಜ ಕಾರ್ಯ ವಿಭಾಗ ಮುಖ್ಯಸ್ಥ ಡಾ. ಎಸ್‌.ಆರ್‌.ಕೃಷ್ಣನ್‌ ‘ಕನ್ನಡ ಕಣ್ಮಣಿಗಳು ಎಳುವರ್‌’ ಕೃತಿಯನ್ನು ಅನಾವರಣಗೊಳಿಸಿದರೆ, ಪ್ರೊ. ನಾ. ಗೀತಾಚಾರ್ಯ ಅವರು ಕನ್ನಡೀಕರಿಸಿದ ತಿರುಪ್ಪಾವೈ ಕೃತಿಯನ್ನು ಹಿರಿಯ ವಿದ್ವಾಂಸ ಡಾ. ಎಸ್‌.ವಿದ್ಯಾಶಂಕರ್‌ ಬಿಡುಗಡೆ ಮಾಡಲಿದ್ದಾರೆ.

ಖ್ಯಾತ ಸಂಶೋಧಕ, ಕನ್ನಡ ಶಕ್ತಿ ಕೇಂದ್ರದ ಅಧ್ಯಕ್ಷರಾದ ಡಾ. ಚಿದಾನಂದ ಮೂರ್ತಿ, ಲೇಖಕಿ ಎಚ್‌. ಎಸ್‌. ಪಾರ್ವತಿ, ವಿಮರ್ಶಕಿ ಡಾ. ವಿಜಯಾ ಸುಬ್ಬರಾಜು ಮತ್ತಿತರರು ಸಮಾರಂಭದಲ್ಲಿ ಭಾಗವಹಿಸುವರು.

(ಇನ್ಫೋ ವಾರ್ತೆ)

ಪೂರಕ ಓದಿಗೆ-

ಇವರು, ಜ್ಞಾನಪೀಠ ಪ್ರಶಸ್ತಿ ವಿಜೇತರು

ಮುಖಪುಟ / ವಾರ್ತೆಗಳು

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more