ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

‘ನೂರ್‌’ಳಿಂದ ಹೃದಯ ಪರಿವರ್ತನೆ, ಮೆದುವಾದ ಭಯೋತ್ಪಾದಕ

By Staff
|
Google Oneindia Kannada News

‘ನೂರ್‌’ಳಿಂದ ಹೃದಯ ಪರಿವರ್ತನೆ, ಮೆದುವಾದ ಭಯೋತ್ಪಾದಕ
ಭಾರತೀಯರ ಹೃದಯವಂತಿಕೆಗೆ ಮಾರುಹೋದ ಪಾಕ್‌ ಉಗ್ರ

ನವದೆಹಲಿ : ಪಾಕಿಸ್ತಾನದ ಬಾಲಕಿ ನೂರ್‌ಳಿಗೆ ಬೆಂಗಳೂರಿನಲ್ಲಿ ದೊರೆತ ಮಾನವೀಯ ಉಪಚಾರ-ಸ್ವಾಗತದಿಂದ ಪಾಕ್‌ ಉಗ್ರಗಾಮಿಯಾಬ್ಬ ತನ್ನ ನಡವಳಿಕೆಗಳನ್ನು ತಿದ್ದಿಕೊಂಡು ವಿಧ್ವಂಸಕ ಕೃತ್ಯಗಳಿಗೆ ವಿದಾಯ ಹೇಳಲು ಮುಂದಾಗಿದ್ದಾನೆ.

ಬೆಂಗಳೂರಿನ ನಾರಾಯಣ ಹೃದಯಾಲಯಕ್ಕೆ ಶಸ್ತ್ರಚಿಕಿತ್ಸೆಗೆಂದು ದೆಹಲಿ-ಲಾಹೋರ್‌ ಬಸ್ಸಿನಲ್ಲಿ ಬಂದ ಪಾಕ್‌ ಬಾಲಕಿ ನೂರ್‌ಳಿಗೆ ಭಾರತೀಯರು ತೋರಿದ ಆತ್ಮೀಯತೆ ಹಾಗೂ ಪ್ರೀತಿ ನನ್ನ ಭಾವನೆಗಳನ್ನು ಬದಲಿಸಿದೆ. ಇನ್ನುಮುಂದೆ ಭಯೋತ್ಪಾದಕ ಚಟುವಟಿಕೆಗಳಿಂದ ದೂರವಿರುವುದಾಗಿ ನಿಶ್ಚಯಿಸಿದ್ದೇನೆ ಎಂದು ಮೊಹಮ್ಮದ್‌ ಶಕೀಲ್‌ ಎನ್ನುವ ವ್ಯಕ್ತಿ ದೆಹಲಿಯ ನ್ಯಾಯಾಲಯದಲ್ಲಿ ಗುರುವಾರ (ಸೆ.18) ತಿಳಿಸಿದ್ದಾನೆ.

ಪಾಕಿಸ್ತಾನದ ಹರ್ಕತ್‌-ಉಲ್‌-ಜೆಹಾದಿ-ಎ-ಇಸ್ಲಾಮಿ ಸಂಘಟನೆಯಿಂದ ತರಪೇತು ಹೊಂದಿದ್ದ ಶಕೀಲ್‌ನನ್ನು ರಾಷ್ಟ್ರಪತಿ ಕಲಾಂ ಅವರ ಹತ್ಯೆಯ ಸಂಚು ಹಾಗೂ ಕ್ರಿಕೆಟಿಗರಾದ ಗಂಗೂಲಿ ಮತ್ತು ಸಚಿನ್‌ ಅಪಹರಣಕ್ಕೆ ಪಿತೂರಿ ರೂಪಿಸಿದ್ದಾನೆ ಎನ್ನುವ ಆರೋಪದ ಮೇಲೆ ಬಂಧಿಸಲಾಗಿತ್ತು . ಶಕೀಲ್‌ ವಿರುದ್ಧ ಪೋಟ ಕಾಯ್ದೆ ಹೇರಲಾಗಿದೆ.

ಪಾಕಿಸ್ತಾನದ ಜನರಲ್ಲಿ ಭಾರತೀಯರ ಬಗೆಗೆ ಸದ್ಭಾವನೆ ಬೆಳೆಸುವ ಕೆಲಸದಲ್ಲಿ ಇನ್ನು ಮುಂದೆ ತೊಡಗಲು ಇಚ್ಛಿಸಿದ್ದೇನೆ. ನ್ಯಾಯಾಲಯದ ತನ್ನ ಮೇಲೆ ಕರುಣೆ ತೋರಬೇಕು ಎಂದು ನ್ಯಾಯಪೀಠಕ್ಕೆ ಮನವಿ ಮಾಡಿಕೊಂಡಿರುವ ಶಕೀಲ್‌, ತನ್ನ ಈವರೆಗಿನ ಕೃತ್ಯಗಳಿಗೆ ಪಶ್ಚಾತ್ತಾಪ ವ್ಯಕ್ತಪಡಿಸಿದ್ದಾನೆ.

(ಪಿಟಿಐ)

ನೂರೆಂಟು ನೆನಪು
ಸ್ನೇಹ ರೂಪಕದ ಹೃದಯದೊಂದಿಗೆ ನೂರ್‌ಫಾತಿಮಾ ಪಾಕ್‌ನತ್ತ

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X