ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ತಿರುಪತಿ ಲಾಡು ಇನ್ನೂ ಸ್ವೀಟು

By Staff
|
Google Oneindia Kannada News

ತಿರುಪತಿ ಲಾಡು ಇನ್ನೂ ಸ್ವೀಟು
‘1980ರಲ್ಲಿ ಸಿಗುತ್ತಿದ್ದ ಲಾಡು ರುಚೀನೇ ಬೇರೆ’

Tirupati Laddu to taste even betterತಿರುಪತಿ : ವಿಶ್ವ ವಿಖ್ಯಾತ ತಿರುಪತಿ ತಿಮ್ಮಪ್ಪನ ಲಾಡು ಪ್ರಸಾದದ ರುಚಿಯನ್ನು ಇನ್ನೂ ಉತ್ತಮಪಡಿಸುವುದಾಗಿ ತಿರುಮಲ ತಿರುಪತಿ ದೇವಸ್ಥಾನಮ್ಸ್‌ ಆಡಳಿತ ಮಂಡಳಿ ಹೇಳಿದೆ.

ತಿರುಪತಿ ಪ್ರೆಸ್‌ ಕ್ಲಬ್‌ ಗುರುವಾರ (ಸೆ.18) ಕರೆದಿದ್ದ ಸುದ್ದಿ ಸಂದರ್ಶನ ಕಾರ್ಯಕ್ರಮದಲ್ಲಿ ಮಂಡಳಿಯ ಅಧಿಕಾರಿ ಅಜೇಯ ಕಲ್ಲಂ ದೇವಸ್ಥಾನ ತೆಗೆದುಕೊಳ್ಳಲಿರುವ ಸುಧಾರಣಾ ಕ್ರಮಗಳ ಬಗ್ಗೆ ಹೇಳಿದರು.

ಎರಡು ದಶಕದ ಹಿಂದೆ ತಿರುಪತಿ ಲಾಡು ಪ್ರಸಾದವನ್ನು ಕೈಯಲ್ಲೇ ಮಾಡಲಾಗುತ್ತಿತ್ತು. ಬೇಡಿಕೆ ಏರಿದ ಕಾರಣ ಯಂತ್ರಗಳನ್ನು ಬಳಸಿ ಲಾಡು ಮಾಡುವುದು ಅನಿವಾರ್ಯವಾಯಿತು. ತುಪ್ಪ- ಸಕ್ಕರೆ ಮೊದಲಾದ ಪರಿಕರಗಳ ಬೆಲೆ ಕೂಡ ಗಗನಕ್ಕೇರುತ್ತಿರುವುದರಿಂದ, ಸಹಜವಾಗಿಯೇ ಹಾಕುವ ಪದಾರ್ಥಗಳ ಪ್ರಮಾಣವನ್ನು ತಗ್ಗಿಸಲಾಯಿತು. ಹೀಗಾಗಿ ತಿರುಪತಿ ಲಾಡು 1980ನೇ ಇಸವಿಯಲ್ಲಿ ಸಿಗುತ್ತಿದ್ದ ಲಾಡುವಿನಂತೆ ಇಲ್ಲ. ಬೆಲೆ ಕೊಂಚ ಏರಿಸಿದರೂ ಚಿಂತಿಲ್ಲ, ಲಾಡು ಪ್ರಸಾದದ ರುಚಿ ಇನ್ನೂ ಹಸನಾಗಬೇಕು ಅಂತ ಅನೇಕರು ಮನವಿ ಮಾಡಿಕೊಂಡಿದ್ದಾರೆ. ಲಾಡು ಪ್ರಸಾದದ ರುಚಿ ಹೆಚ್ಚಿಸುವ ಕುರಿತು ಯೋಚಿಸುತ್ತಿದ್ದೇವೆ ಎಂದು ಕಲ್ಲಂ ತಿಳಿಸಿದರು.

ತಿರುಪತಿ ದರ್ಶನಕ್ಕೆ ಆನ್‌ಲೈನ್‌ ಮೂಲಕ ಟಿಕೇಟು ಕಾದಿರಿಸುವ ವ್ಯವಸ್ಥೆಗೆ ಉತ್ತಮ ಪ್ರತಿಕ್ರಿಯೆ ಬಂದಿದೆ. ಲಾಡು ಪ್ರಸಾದ ಪಡೆಯಲೂ ಈ ರೀತಿಯ ವ್ಯವಸ್ಥೆಯನ್ನು ಜಾರಿಗೆ ತರಲಾಗುವುದು ಎಂದರು.

(ಇನ್ಫೋ ವಾರ್ತೆ)

ಇದನ್ನೂ ಓದಿ-
ತಿರುಪತಿ ಲಾಡು ರುಚಿ ಗುಲಗಂಜಿಯಷ್ಟು ಕೆಟ್ಟಾಗ...!

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X