ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಟರ್ಕಿ ರಸ್ತೆಗೆ ಟಾಗೂರರ ಹೆಸರ ನಾಮಕರಣ ಮಾಡಿದ ವಾಜಪೇಯಿ

By Staff
|
Google Oneindia Kannada News

ಟರ್ಕಿ ರಸ್ತೆಗೆ ಟಾಗೂರರ ಹೆಸರ ನಾಮಕರಣ ಮಾಡಿದ ವಾಜಪೇಯಿ
ಅಂಕಾರದಲ್ಲಿ ಟಾಗೂರರ ಪುತ್ಥಳಿ ಅನಾವರಣ

ಅಂಕಾರ : ಟರ್ಕಿ ರಾಜಧಾನಿಯಾದ ಅಂಕಾರದಲ್ಲಿ ಪ್ರಧಾನಿ ಅಟಲ್‌ ಬಿಹಾರಿ ವಾಜಪೇಯಿ ರಬೀಂದ್ರನಾಥ ಟಾಗೂರರ ತಲೆ- ಭುಜ ಮತ್ತು ಎದೆ ಭಾಗವನ್ನೊಳಗೊಂಡ ಪುತ್ಥಳಿಯನ್ನು ಅನಾವರಣಗೊಳಿಸಿ, ಭಾರತೀಯ ರಾಯಭಾರಿ ಕಚೇರಿಯ ಹತ್ತಿರದ ರಸ್ತೆಗೆ ಟಾಗೂರರ ಹೆಸರನ್ನಿಟ್ಟರು.

ಇಸ್ತಾನ್‌ಬುಲ್‌ ವಿಮಾನ ಹತ್ತುವ ಮುನ್ನ ಗುರುವಾರ (ಸೆ.18) ನಡೆದ ಸಮಾರಂಭದಲ್ಲಿ ಪ್ರಧಾನಿ ಟಾಗೂರರ ಪುತ್ಥಳಿ ಅನಾವರಣ ಮಾಡಿದರು. ದಶಕಗಳ ಹಿಂದೆ ಟಾಗೂರರು ಟರ್ಕಿಗೆ ಭೇಟಿ ಕೊಟ್ಟಿದ್ದನ್ನು ವಾಜಪೇಯಿ ನೆನಪಿಸಿಕೊಂಡರು. ಆಧುನೀಕರಣ ಮತ್ತು ಜಾಗತೀಕರಣ ಕುರಿತಂತೆ ಕೆಮಲ್‌ ಅಟಾಟರ್ಕ್‌ ಅವರ ದೃಷ್ಟಿಕೋನವನ್ನು ಟಾಗೂರರು ಬಹುವಾಗಿ ಮೆಚ್ಚಿಕೊಂಡಿದ್ದರು ಎಂದ ವಾಜಪೇಯಿ, ಟಾಗೂರರಿಗೆ ಅಟಾಟರ್ಕ್‌ ಕಳಿಸಿಕೊಟ್ಟಿದ್ದ 41 ಪುಸ್ತಕಗಳನ್ನು ಶಾಂತಿ ನಿಕೇತನದಲ್ಲಿ ಜತನವಾಗಿ ಇಡಲಾಗಿದೆ ಎಂದರು. ಟಾಗೂರರ ಗೀತಾಂಜಲಿ ಕೃತಿ ಟರ್ಕಿ ಭಾಷೆಗೆ ಅನುವಾದವಾಗಿರುವುದನ್ನು ಸಮಾರಂಭದಲ್ಲಿ ತಿಳಿಸಿದರು.

ಇಸ್ತಾನ್‌ಬುಲ್‌ನಲ್ಲಿ ಟರ್ಕಿ ಅಧ್ಯಕ್ಷ ಅಹ್ಮತ್‌ ನಾಕ್ಡೆಟ್‌ ಸೆಜರ್‌ ಅವರೊಟ್ಟಿಗೆ ಮಾತಾಡಿ, ನಂತರ ಮೇಡ್‌ ಇನ್‌ ಇಂಡಿಯಾ ಪ್ರದರ್ಶನದಲ್ಲಿ 250 ಭಾರತೀಯರನ್ನು ಉದ್ದೇಶಿಸಿ ಭಾಷಣ ಮಾಡಲಿದ್ದಾರೆ.

(ಏಜೆನ್ಸೀಸ್‌)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X