ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೆಂಗಳೂರಿನ ಸೆಂಟ್ರಲ್‌ ಜೈಲ್‌ ಪ್ರದೇಶದಲ್ಲಿ ಸುಸಜ್ಜಿತ ಉದ್ಯಾನವನ

By Staff
|
Google Oneindia Kannada News

ಬೆಂಗಳೂರಿನ ಸೆಂಟ್ರಲ್‌ ಜೈಲ್‌ ಪ್ರದೇಶದಲ್ಲಿ ಸುಸಜ್ಜಿತ ಉದ್ಯಾನವನ
ಉದ್ಯಾನ ನಿರ್ಮಾಣದ ಉಸ್ತುವಾರಿ ಬೆಂಗಳೂರು ಕಾರ್ಯನಿರತ ಪಡೆಗೆ

ಬೆಂಗಳೂರು: ನಗರದ ಹೃದಯ ಭಾಗದಲ್ಲಿರುವ ಸೆಂಟ್ರಲ್‌ ಜೈಲ್‌ ಪ್ರದೇಶನ್ನು ಸುಂದರ ಉದ್ಯಾನವನವನ್ನಾಗಿ ಪರಿವರ್ತಿಸಲು ಸರಕಾರ ನಿರ್ಧರಿಸಿದೆ.

ಪಾರ್ಕ್‌ ಜೊತೆಗೆ ಕೆಫೆ, ಆ್ಯಂಫೀ ಥಿಯೇಟರ್‌, ಗಾಳಿ ವಿಹಾರಕ್ಕಾಗಿ ವಾಕಿಂಗ್‌ ವ್ಯವಸ್ಥೆ, ಮಕ್ಕಳಿಗಾಗಿ ಆಟದ ಬಯಲು, ವಿವಿಧ ಪ್ರದರ್ಶನಗಳಿಗಾಗಿ ಪ್ರತ್ಯೇಕ ವ್ಯವಸ್ಥೆಯನ್ನು ರೂಪಿಸಲಾಗುವುದು. ಕಳೆದ ವರ್ಷವಷ್ಟೇ ಕಾರಾಗೃಹವನ್ನು ಪರಪ್ಪನ ಅಗ್ರಹಾರಕ್ಕೆ ಸ್ಥಳಾಂತರಿಸಿರುವುದರಿಂದ ನಗರದ ಮಹಾರಾಣಿ ಕಾಲೇಜಿನ ಪಕ್ಕ ಇರುವ ಸೆಂಟ್ರಲ್‌ ಜೈಲ್‌ ಪ್ರದೇಶ ಖಾಲಿಯಾಗಿಯೇ ಉಳಿದುಕೊಂಡಿದೆ.

ಜೈಲಿನ 20 ಎಕರೆ ಆವರಣದಲ್ಲಿ ಉದ್ಯಾನ ಮತ್ತು ಇತರ ಹೊಸ ವ್ಯವಸ್ಥೆಗಳನ್ನು ಸಾರ್ವಜನಿಕರಿಗಾಗಿ ನಿರ್ಮಿಸುವ ಜವಾಬ್ದಾರಿಯನ್ನು ಸರಕಾರ ಬೆಂಗಳೂರು ಕಾರ್ಯನಿರತ ಪಡೆ(BATF) ಗೆ ವಹಿಸಿದೆ. ಈ ಯೋಜನೆಯನ್ನು ಕೈಗೆತ್ತಿಕೊಳ್ಳಲು ಆಸಕ್ತಿ ಹೊಂದಿರುವ ಆರ್ಕಿಟೆಕ್ಟ್‌ಗಳು ಬೆಂಗಳೂರು ಕಾರ್ಯನಿರತ ಪಡೆಯನ್ನು ಸಂಪರ್ಕಿಸಲು ಕೋರಲಾಗಿದೆ.

ಜೈಲಿನ ಅತೀ ಎತ್ತರ ಗೋಡೆಗಳ ಬದಲಾಗಿ ಪಾರದರ್ಶಕ ಗೋಡೆಗಳನ್ನು ನಿರ್ಮಿಸುವ ಮೂಲಕ ಜೈಲು ಎಂಬ ಕಲ್ಪನೆಯನ್ನು ನಗರದಲ್ಲಿ ಲೀನಗೊಳಿಸುವ, ಕೆಫೆ, ಥಿಯೇಟರ್‌ಗಳಿಗೋಸ್ಕರ ನಿರ್ಮಿಸಲಾಗುವ ಕಟ್ಟಡಗಳನ್ನು ಸ್ಮಾರಕಗಳ ಶೈಲಿಯಲ್ಲಿ ನಿರ್ಮಿಸುವ ಯೋಚನೆಯನ್ನು ಆರ್ಕಿಟೆಕ್ಟ್‌ಗಳ ಮುಂದೆ ಇಡಲಾಗಿದೆ ಎಂದು ಬೆಂಗಳೂರು ಕಾರ್ಯನಿರತ ಪಡೆಯ ಸದಸ್ಯ ಕಲ್ಪನಾಕರ್‌ ತಿಳಿಸಿದ್ದಾರೆ.

(ಇನ್ಫೋ ವಾರ್ತೆ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X