• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಕೊಂಡು ಓದುವ ಜಾಣರಿಗಾಗಿ ಬೆಂಗಳೂರು ಪುಸ್ತಕೋತ್ಸವ- 2003

By Staff
|

ಕೊಂಡು ಓದುವ ಜಾಣರಿಗಾಗಿ ಬೆಂಗಳೂರು ಪುಸ್ತಕೋತ್ಸವ- 2003

ಸೆಪ್ಟೆಂಬರ್‌ 21ರವರೆಗೆ ನಗರದ ಅರಮನೆ ಆವರಣದಲ್ಲಿ ಪುಸ್ತಕ ಹಬ್ಬ

*ಚೇತನ್‌ ನಾಡಿಗೇರ್‌

ಪುಸ್ತಕ ಪ್ರೀತಿ ಸಾರ್ವಜನಿಕರಲ್ಲಿ ಕಡಿಮೆಯಾಗುತ್ತಿರುವ ಈ ದಿನಗಳಲ್ಲಿ ಪುಸ್ತಕ ಪ್ರೀತಿ ಹೆಚ್ಚಿಸಲು ಮತ್ತು ಪುಸ್ತಕದ ಜ್ಞಾನ ಹಂಚುವ ಸಲುವಾಗಿ ಬೆಂಗಳೂರು ಪುಸ್ತಕ ಮಾರಾಟಗಾರರು ಮತ್ತು ಪ್ರಕಾಶಕರ ಸಂಘ ಬೆಂಗಳೂರಿನ ಅರಮನೆ ಆವರಣದಲ್ಲಿ ಬಹು ದೊಡ್ಡ ಪುಸ್ತಕ ಪ್ರದರ್ಶನ ಮತ್ತು ಮಾರಾಟ ಮೇಳ- ‘ಬೆಂಗಳೂರು ಪುಸ್ತಕೋತ್ಸವ 2003’ನ್ನು ಆಯೋಜಿಸಿದೆ. ಈ ಪುಸ್ತಕೋತ್ಸವ ಸೆಪ್ಟಂಬರ್‌ 21 ರವರೆಗೆ ನಡೆಯಲಿದೆ.

ದೇಶ ವಿದೇಶಗಳ 50 ಪ್ರಸಿದ್ಧ ಪುಸ್ತಕ ಮಾರಾಟಗಾರರು ಮತ್ತು 60 ಆಧ್ಯಾತ್ಮಿಕ, ಸಾಮಾಜಿಕ ಮತ್ತು ಸ್ಥಳೀಯ ಪ್ರಕಾಶನ ಸಂಸ್ಥೆಗಳು ಪಾಲ್ಗೊಂಡಿರುವ ಈ ಮೇಳದಲ್ಲಿ , 8 ಭಾಷೆಗಳ ಸುಮಾರು 10 ಲಕ್ಷ ಪುಸ್ತಕಗಳನ್ನು ಪ್ರದರ್ಶನ ಮತ್ತು ಮಾರಾಟಕ್ಕಿಡಲಾಗಿದೆ. ಅರಮನೆ ಆವರಣದ್ಲಲಿರುವ 235 ಮಳಿಗೆಗಳ ತುಂಬಾ ತರತರದ ಪುಸ್ತಕಗಳು !

ಐಟಿ ರಾಜಧಾನಿ ಎಂದೇ ಪ್ರಸಿದ್ಧವಾಗಿರುವ ಬೆಂಗಳೂರಿನಲ್ಲಿ ಇದೇ ಮೊದಲ ಬಾರಿಗೆ ಇಂತಹ ಬೃಹತ್‌ ಪುಸ್ತಕ ಮೇಳ ನಡೆಯುತ್ತಿದೆ. ಮುಂದಿನ ವರ್ಷದಿಂದ ಇದು ಪ್ರತಿವರ್ಷ ನಡೆಯಲಿದೆ.

ಸಾಮಾನ್ಯ ಜ್ಞಾನ, ವಿಜ್ಞಾನ, ತಂತ್ರಜ್ಞಾನ, ಕ್ರೀಡೆ, ಕಂಪ್ಯೂಟರ್‌, ಅಡುಗೆ, ಆತ್ಮಕಥೆ ಮುಂತಾದ ವಿಷಯಗಳ ಎಲ್ಲಾ ರೀತಿಯ ಪುಸ್ತಕಗಳ ಮೇಲೆ, ಬಹುತೇಕ ಮಳಿಗೆಗಳಲ್ಲಿ ಶೇ. 10ರಷ್ಟು ಡಿಸ್ಕೌಂಟ್‌ ನೀಡಲಾಗುತ್ತಿದೆ. ಇದಲ್ಲದೆ ಪ್ರಾಣಿಕ್‌ ಹೀಲಿಂಗ್‌, ಫ್ಯಾಶನ್‌ ಡಿಸೈನಿಂಗ್‌ ಮುಂತಾದ ವಿಷಯಗಳ ಕುರಿತು ಸ್ಥಳದಲ್ಲೇ ಪ್ರಾತ್ಯಕ್ಷಿಕೆ ನೀಡುವ ವ್ಯವಸ್ಥೆ ಕೂಡ ಇದೆ.

ಈ ಮೇಳದಲ್ಲಿ ಬರಿಯ ಪ್ರದರ್ಶನ ಮತ್ತು ಮಾರಾಟವಲ್ಲದೆ ಪ್ರತಿದಿನ ಅನೇಕ ಸಾಂಸ್ಕೃತಿಕ ಚಟುವಟಿಕೆಗಳನ್ನು ಆಯೋಜಿಸಲಾಗಿದೆ. ಈ ಎಲ್ಲಾ ಕಾರ್ಯಕ್ರಮಗಳನ್ನು ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯ, ಪ್ರಕಾಶಕರು ಮತ್ತು ಶಾಲೆಗಳು ಜಂಟಿಯಾಗಿ ಪ್ರಾಯೋಜಿಸುತ್ತಿದೆ.

10 ದಿನಗಳ ಕಾಲ ನಡೆವ ಈ ಪುಸ್ತಕೋತ್ಸವದಲ್ಲಿ ಕನ್ನಡದ ಖ್ಯಾತ ಪುಸ್ತಕ ಪ್ರಕಾಶಕರಾದ ಸಪ್ನ, ಗಂಗಾರಾಮ್ಸ್‌, ಇಂಡಿಯನ್‌ ಬುಕ್‌ ಹೌಸ್‌, ನವಕರ್ನಾಟಕ, ಕನ್ನಡ ಪುಸ್ತಕ ಪ್ರಾಧಿಕಾರ ಮುಂತಾದ ಪುಸ್ತಕ ಮಾರಾಟಗಾರರ ಮಳಿಗೆಗಳಿವೆ. ಇದಲ್ಲದೆ ರಾಮಕೃಷ್ಣ ಆಶ್ರಮ ಮತ್ತು ಇಸ್ಕಾನ್‌ನಂತಹ ಧಾರ್ಮಿಕ ಮತ್ತು ಆಧ್ಯಾತ್ಮಿಕ ಪ್ರಕಾಶನ ಸಂಸ್ಥೆಗಳು ಕೂಡ ಆಧ್ಯಾತ್ಮ ಹಾಗೂ ವೇದಾಂತ ಸಾಹಿತ್ಯವನ್ನು ಓದುಗರ ಖರೀದಿಗೆ ತೆರೆದಿಟ್ಟಿವೆ.

ಈ ಬೃಹತ್‌ ಪುಸ್ತಕ ಪ್ರದರ್ಶನವನ್ನು ನೋಡುವುದೇ ಒಂದು ಕುತೂಹಲಕರ ಸಂಗತಿ. ಪ್ರದರ್ಶನವನ್ನು ನೋಡಲು ಬೆಂಗಳೂರಿನ ಹಲವು ಶಾಲೆಗಳ ಮಕ್ಕಳು ಸಾಲುಗಟ್ಟಿ ಬರುತ್ತಿದ್ದಾರೆ. ಮಕ್ಕಳನ್ನು ಆಕರ್ಷಿಸಲೆಂದೇ ಅನೇಕ ಸಾಂಸ್ಕೃತಿಕ ಮತ್ತು ಶೈಕ್ಷಣಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಇದಲ್ಲದೆ ಈ ಉತ್ಸವದಲ್ಲಿ ಪ್ರತಿದಿನ ಪ್ರಸಿದ್ಧ ಸಾಹಿತಿಗಳನ್ನು ಸನ್ಮಾನಿಸಲಾಗುತ್ತದೆ.

ಬೆಂಗಳೂರು ಪುಸ್ತಕ ಮಾರಾಟಗಾರರ ಮತ್ತು ಪ್ರಕಾಶಕರ ಸಂಘದ ಅಧ್ಯಕ್ಷ ಬಲರಾಮ್‌ ಸಾಧ್ವಾನಿ, ಈ ಪುಸ್ತಕೋತ್ಸವವನ್ನು ಜರ್ಮನಿಯಲ್ಲಿ ನಡೆವ ಫ್ರಾಂಕ್‌ಫರ್ಟ್‌ ಪುಸ್ತಕ ಪ್ರದರ್ಶನಕ್ಕೆ ಹೋಲಿಸುತ್ತಾರೆ. ಅವರ ಪ್ರಕಾರ ಇದು ಪುಸ್ತಕದ ಹಬ್ಬ. ಭಾರತೀಯರಿಗೆ ಹಬ್ಬಗಳ ಸಮಯವಾದ ಸೆಪ್ಟಂಬರ್‌ ತಿಂಗಳನ್ನು ಗಮನದಲ್ಲಿಟ್ಟುಕೊಂಡು ಈ ಪುಸ್ತಕೋತ್ಸವವನ್ನು ಆಯೋಜಿಸಲಾಗಿದೆ. ಓದುಗರ ಮುಂದೆ ಜ್ಞಾನ ಭಂಡಾರವನ್ನು ತೆರೆದಿಡಲಾಗಿದೆ. ಪುಸ್ತಕ ಕೊಂಡು ಓದಿ ಎಂಬುದು ಸಾಧ್ವಾನಿ ಸಂದೇಶ.

ಮುಖಪುಟ / ವಾರ್ತೆಗಳು

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more