• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ವಚನ ಸಾಹಿತ್ಯಬಿಟ್ಟರೆ ಉಳಿದ ಕನ್ನಡಸಾಹಿತ್ಯವೆಲ್ಲ ಬೂಸಾ -ದೇಜಗೌ

By Staff
|

ವಚನ ಸಾಹಿತ್ಯಬಿಟ್ಟರೆ ಉಳಿದ ಕನ್ನಡಸಾಹಿತ್ಯವೆಲ್ಲ ಬೂಸಾ -ದೇಜಗೌ

ಜವರೇಗೌಡರಿಗೆ ಬುದ್ಧ- ಬಸವ-ಅಂಬೇಡ್ಕರ್‌ ವೇದಿಕೆಯಿಂದ ಸನ್ಮಾನ

ಮೈಸೂರು: ಅಂಬೇಡ್ಕರ್‌ ಜೀವನ ಚರಿತ್ರೆಯನ್ನು ರಚಿಸಿದ್ದಕ್ಕಾಗಿ ಹಿರಿಯ ಸಾಹಿತಿ ಪ್ರೊ. ದೇ. ಜವರೇಗೌಡರನ್ನು ಮಾನಸ ಗಂಗೋತ್ರಿಯ ಕನ್ನಡ ಅಧ್ಯಯನ ಸಭಾಂಗಣದಲ್ಲಿ ಮಂಗಳವಾರ ಸನ್ಮಾನಿಸಲಾಯಿತು.

ಬುದ್ಧ, ಬಸವ-ಅಂಬೇಡ್ಕರ್‌ ವೇದಿಕೆ ಈ ಸನ್ಮಾನ ಸಮಾರಂಭವನ್ನು ಆಯೋಜಿಸಿತ್ತು. ಸನ್ಮಾನ ಸ್ವೀಕರಿಸಿ ಮಾತನಾಡಿದ ಜವರೇಗೌಡರು ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ವಚನ ಸಾಹಿತ್ಯವನ್ನು ಹೊರತು ಪಡಿಸಿದರೆ ಉಳಿದೆಲ್ಲಾ ಸಾಹಿತ್ಯವೂ ಬೂಸಾ ಎಂದು ಅಭಿಪ್ರಾಯಪಟ್ಟರು.

Prof. De. Javaregowdaಈ ಹಿಂದೆ ಬಿ.ಬಸವಲಿಂಗಪ್ಪ ಅವರು ಕನ್ನಡ ಸಾಹಿತ್ಯವೇ ಒಂದು ಬೂಸಾ ಎಂದು ಹೇಳಿದ್ದನ್ನು ಸಮರ್ಥಿಸಿದ ಜವರೇ ಗೌಡರು, ಬಸವಲಿಂಗಪ್ಪನವರು ಹಾಗಂದಿದ್ದರಲ್ಲಿ ತಪ್ಪೇನೂ ಇಲ್ಲ. ವಚನ ಸಾಹಿತ್ಯ ಹೊರತು ಪಡಿಸಿದರೆ ಕನ್ನಡ ಸಾಹಿತ್ಯದಲ್ಲಿರುವ ಎಲ್ಲ ಸಾಹಿತ್ಯವೂ ನೂರಕ್ಕೆ ನೂರರಷ್ಟು ಬೂಸಾ ಎಂದು ಪುನರುಚ್ಚರಿಸಿದರು.

ಅಂಬೇಡ್ಕರ್‌ ಜೀವನದ ಕುರಿತು ಮಾತನಾಡಿದ ಗೌಡರು, ಅಂಬೇಡ್ಕರ್‌ ಇಸ್ಲಾಂ ಮತಕ್ಕೆ ಮತಾಂತರ ಹೊಂದದೇ ಹಿಂದೂ ಧರ್ಮದ ರಕ್ಷಣೆ ಮಾಡಿದ್ದಾರೆ. ನಮ್ಮ ರಾಷ್ಟ್ರದಲ್ಲಿ ದೊಡ್ಡ ನಾಗರಿಕ ಯುದ್ಧವೇ ನಡೆಯಬೇಕಾಗಿದೆ. ಅಸ್ಪೃಶ್ಯತೆ ಹಾಗೂ ಅಸಮಾನತೆ ಇರುವ ಧರ್ಮವನ್ನು ಧರ್ಮವೆಂದು ಕರೆಯುವುದೇ ತಪ್ಪು. ಹಿಂದೂ ಧರ್ಮವನ್ನು ಮೈಗೆಲ್ಲಾ ಅಂಟಿಸಿಕೊಂಡು ಕುಣಿದಾಡುವವರು ಈ ವಿಷಯವನ್ನು ಮೊದಲು ಅರ್ಥ ಮಾಡಿಕೊಳ್ಳಬೇಕು ಎಂದು ಕಿವಿ ಮಾತು ಹೇಳಿದರು.

(ಇನ್ಫೋ ವಾರ್ತೆ)

ಕನ್ನಡ ಸಾಹಿತ್ಯವೆಲ್ಲ ಬೂಸಾ ; ದೇಜಗೌ ಹೇಳಿಕೆಗೆ ನಿಮ್ಮ ಪ್ರತಿಕ್ರಿಯೆ ?

ಮುಖಪುಟ / ವಾರ್ತೆಗಳು

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more