ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಮೃತಾನಂದಮಯಿ ಮಠದಿಂದ ಬಡವರಿಗೆ ಕಾನೂನು ನೆರವು

By Staff
|
Google Oneindia Kannada News

ಅಮೃತಾನಂದಮಯಿ ಮಠದಿಂದ ಬಡವರಿಗೆ ಕಾನೂನು ನೆರವು
ಸೆಪ್ಟೆಂಬರ್‌ 23ರಂದು ಕಾನೂನು ನೆರವು ಯೋಜನೆಗೆ ಚಾಲನೆ

ಕೊಚ್ಚಿ: ಬಡವರಿಗೆ ಉಚಿತ ಕಾನೂನು ನೆರವನ್ನು ಒದಗಿಸಲು ಮಾತಾ ಅಮೃತಾನಂದಮಯೀ ಮಠ ವಿಶೇಷ ಯೋಜನೆಯಾಂದನ್ನು ರೂಪಿಸಿದೆ.

ರಾಷ್ಟ್ರ ಮಟ್ಟದ ಈ ಯೋಜನೆಯಿಂದಾಗಿ ದೇಶದ ಬಡವರಿಗೆ ಅನುಕೂಲವಾಗಲಿದೆ. ದೇಶಾದ್ಯಂತ ಒಟ್ಟು 1008 ವಕೀಲರು ಈ ಉಚಿತ ಕಾನೂನು ಸೇವೆ ಯೋಜನೆಯಲ್ಲಿ ಕೈ ಜೋಡಿಸುವರು. ಈ ವಕೀಲರ ಗುಂಪಿಗೆ ಅಮೃತಾ ಕೃಪಾ ನೀತಿ ಪ್ರತಿಷ್ಠಾನ ಎಂದು ಹೆಸರಿಡಲಾಗಿದೆ.

ಮಾನವ ಹಕ್ಕುಗಳಿಂದ ವಂಚಿತರಾದವರಿಗೆ, ಬುಡಕಟ್ಟು ಕಾನೂನು ಉಲ್ಲಂಘನೆಯಿಂದ ಸಂತ್ರಸ್ತರಾದವರಿಗೆ, ಪರಿಸರನಾಶದಿಂದ ಆಗುವ ಹಾನಿ ನಿವಾರಣೆಗೆ, ಅಂಗವೈಕಲ್ಯ ಹಾಗೂ ಬುದ್ಧಿ ಭ್ರಮಣೆ ಹೊಂದಿದವರಿಗೂ ಈ ವೇದಿಕೆ ಬೆಂಬಲ-ನೆರವು ನೀಡಲಿದೆ.

ಅಮೃತಾ ಕೃಪಾ ನೀತಿ ಪ್ರತಿಷ್ಠಾನವು ಸೆಪ್ಟೆಂಬರ್‌ 23ರಂದು ಕೊಚ್ಚಿಯ ಅಂತರರಾಷ್ಟ್ರೀಯ ಕ್ರೀಡಾಂಗಣದಲ್ಲಿ ಉದ್ಘಾಟನೆಗೊಳ್ಳಲಿದೆ. ಅಂದು ನಡೆಯುವ ‘ಯುವ ಅಮೃತ ವರ್ಷಂ ಉತ್ಸವ’ದ ಸಂದರ್ಭದಲ್ಲಿ ಈ ಯೋಜನೆಗೆ ಚಾಲನೆ ದೊರೆಯಲಿದ್ದು , ಉಪರಾಷ್ಟ್ರಪತಿ ಭೈರೋನ್‌ ಸಿಂಗ್‌ ಶೇಖಾವತ್‌ ಸಮಾರಂಭದಲ್ಲಿ ಭಾಗವಹಿಸುವರು.

(ಏಜೆನ್ಸೀಸ್‌)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X