ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿಟ್ಸ್‌-2003ಗೆ ಭರದ ಸಿದ್ಧತೆ: ಬೆಂಗಳೂರಲ್ಲಿ ಮಹಿಳಾ ಉದ್ಯಮಿಗಳು

By Staff
|
Google Oneindia Kannada News

ವಿಟ್ಸ್‌-2003ಗೆ ಭರದ ಸಿದ್ಧತೆ: ಬೆಂಗಳೂರಲ್ಲಿ ಮಹಿಳಾ ಉದ್ಯಮಿಗಳು
ಸೆಪ್ಟಂಬರ್‌ 19ರಿಂದ ಮಹಿಳಾ ಉದ್ಯಮಿಗಳ ಪ್ರಥಮ ರಾಷ್ಟ್ರೀಯ ಸಮ್ಮೇಳನ

ಬೆಂಗಳೂರು : ಮಹಿಳಾ ಉದ್ಯಮಿಗಳ ಪ್ರಪ್ರಥಮ ರಾಷ್ಟ್ರೀಯ ಸಮಾವೇಶ ‘ವಿಟ್ಸ್‌- 2003’ ಬೆಂಗಳೂರಿನಲ್ಲಿ ಸೆಪ್ಟೆಂಬರ್‌ 19 ಮತ್ತು 20ರಂದು ನಡೆಯಲಿದೆ.

ದೇಶದ ವಿವಿಧ ಭಾಗಗಳಿಂದ ಸುಮಾರು 200ಕ್ಕೂ ಹೆಚ್ಚು ಮಂದಿ ಮಹಿಳಾ ಉದ್ಯಮಿಗಳು ಈ ಸಮಾವೇಶಕ್ಕೆ ಆಗಮಿಸಲಿದ್ದಾರೆ ಎಂದು ಸಮಾವೇಶದ ಆಯೋಜಕರಾದ ಎಫ್‌ಕೆಸಿಸಿಐನ ಅಧ್ಯಕ್ಷ ಕೆ. ಎನ್‌. ಜಯಲಿಂಗಪ್ಪ ತಿಳಿಸಿದ್ದಾರೆ.

ರಾಜ್ಯಪಾಲ ಟಿ. ಎನ್‌. ಚತುರ್ವೇದಿ ಸಮಾವೇಶವನ್ನು ಉದ್ಘಾಟಿಸುವರು. ಭಾರೀ ಮತ್ತು ಮಧ್ಯಮ ಕೈಗಾರಿಕೆ ಸಚಿವ ಆರ್‌. ವಿ. ದೇಶಪಾಂಡೆ, ಮಹಿಳಾ ಮತ್ತು ಮಕ್ಕಳ ಸಚಿವೆ ಮೋಟಮ್ಮ ಸಮಾವೇಶದಲ್ಲಿ ಅತಿಥಿಗಳಾಗಿ ಭಾಗವಹಿಸುವರು.

ಅನುಭವಿ ಉದ್ಯಮಿಗಳು, ಹೊಸದಾಗಿ ಉದ್ಯಮ ಆರಂಭಿಸಿದವರು ಮತ್ತು ಹೊಸ ಉದ್ಯಮ ಆರಂಭಿಸಲು ಉದ್ದೇಶಿಸಿರುವವರನ್ನು ಒಂದೇ ವೇದಿಕೆಯಡಿ ಸೇರಿಸಿ ವಿಚಾರ ವಿನಿಮಯಕ್ಕೆ ಅವಕಾಶ ಕಲ್ಪಿಸಿಕೊಡುವುದು ಈ ಸಮಾವೇಶದ ಉದ್ದೇಶ.

(ಇನ್ಫೋ ವಾರ್ತೆ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X