• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಶಿರಸಿಯಲ್ಲಿ ಹಿಂಸೆಗೆ ತಿರುಗಿದ ಪ್ರತಿಭಟನೆ ; 75 ಮಂದಿಗೆ ಗಾಯ

By Staff
|

ಶಿರಸಿಯಲ್ಲಿ ಹಿಂಸೆಗೆ ತಿರುಗಿದ ಪ್ರತಿಭಟನೆ ; 75 ಮಂದಿಗೆ ಗಾಯ

ಮೂರು ದಿನಗಳ ಕಾಲ ನಗರಿಯಲ್ಲಿ ನಿಷೇಧಾಜ್ಞೆ ಜಾರಿ

ಶಿರಸಿ : ಸುವರ್ಣ ಕ್ರೆಡಿಟ್‌ ಕೋ- ಆಪರೇಟಿವ್‌ ಸೊಸೈಟಿ ವ್ಯವಸ್ಥಾಪಕರ ಮೇಲೆ ಸೋಮವಾರ (ಸೆ.15) ನಡೆದ ಹಲ್ಲೆ ಖಂಡಿಸಿ ಮಂಗಳವಾರ ನಡೆದ ಬಿಜೆಪಿ ಸುವರ್ಣಕಾರರ ಸಂಘ ಹಾಗೂ ದೈವಜ್ಞ ಸಮಾಜದ ಪ್ರತಿಭಟನಾ ಮೆರವಣಿಗೆ ಹಿಂಸೆಗೆ ತಿರುಗಿತು. ಕಲ್ಲು ತೂರಾಟ ಹಾಗೂ ಪೊಲೀಸರ ಲಾಠಿ ಪ್ರಹಾರದಿಂದ ಸುಮಾರು 75 ಜನರಿಗೆ ಗಾಯಗಳಾಗಿವೆ. ಕೆಲವು ಪೊಲೀಸರು ಆಸ್ಪತ್ರೆ ಸೇರುವಂತಾಗಿದೆ.

ಪ್ರಕರಣದ ವಿವರ

ಅತೀಸಮುಲ್ಲಾ ಅಮಾನುಲ್ಲಾ ಖಾವ ಎಂಬುವರು ಭದ್ರತೆಗಾಗಿ ಸುವರ್ಣ ಕ್ರೆಡಿಟ್‌ ಕೋ- ಆಪರೇಟಿವ್‌ ಸೊಸೈಟಿಯಲ್ಲಿ ಬಂಗಾರದ ಆಭರಣ ಇಟ್ಟಿದ್ದರು. ಸೋಮವಾರ ಇದ್ದಕ್ಕಿದ್ದಂತೆ ಅಮಾನುಲ್ಲಾ ಅವರಿಗೆ ಸಂಬಂಧಿಸಿದ ಗುಂಪೊಂದು ನುಗ್ಗಿ, ಬಂಗಾರಗಳನ್ನು ವಾಪಸ್‌ ಕೊಡುವಂತೆ ಸೊಸೈಟಿ ವ್ಯವಸ್ಥಾಪಕ ವಿಜಯಕುಮಾರ್‌ ಅವರನ್ನು ಒತ್ತಾಯಿಸಿತು. ವಿಜಯಕುಮಾರ್‌ ಜಗ್ಗಲಿಲ್ಲ. ಆಗ ಗುಂಪು ಕೊಲೆ ಬೆದರಿಕೆ ಹಾಕಿ, ಅವರನ್ನು ಹಲ್ಲೆಗೊಳಿಸಿತು.

ಇದನ್ನು ಪ್ರತಿಭಟಿಸಿ ಮಂಗಳವಾರ ಮೆರವಣಿಗೆ ನಡೆಸಿ, ಆರೋಪಿಗಳನ್ನು ಕೂಡಲೇ ಬಂಧಿಸುವಂತೆ ಒತ್ತಾಯಿಸಲಾಯಿತು. ಇದ್ದಕ್ಕಿದ್ದಂತೆ ಮೆರವಣಿಗೆಯಲ್ಲಿದ್ದ ಮಂದಿ ಕಲ್ಲು ತೂರಾಟ ನಡೆಸಲು ಶುರುವಿಟ್ಟರು. ಕಲ್ಲುತೂರಾಟದಲ್ಲಿ 25 ಪೊಲೀಸರು ಹಾಗೂ 50 ನಾಗರಿಕರಿಗೆ ಗಾಯಗಳಾಗಿವೆ. ಅತೀಸಮುಲ್ಲಾ ಅಮಾನುಲ್ಲಾ ಕಾಂಗ್ರೆಸ್‌ ಮುಖಂಡನ ಪುತ್ರನಾಗಿರುವುದರಿಂದ ಇಡೀ ಘಟನೆ ರಾಜಕೀಯದೊಟ್ಟಿಗೆ ತಳಕು ಹಾಕಿಕೊಂಡಿದೆ ಎಂದಿರುವ ಪೊಲೀಸರು, 100 ಮಂದಿಯನ್ನು ಬಂಧಿಸಿದ್ದಾರೆ.

ಶಾಂತಿ ಮತ್ತು ಸುವ್ಯವಸ್ಥೆ ಕಾಪಾಡುವ ಸಲುವಾಗಿ ಶಿರಸಿಯಲ್ಲಿ ಮೂರು ದಿನಗಳ ಕಾಲ 144ನೇ ಕಾಲಂ ಅನ್ವಯ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.

(ಇನ್ಫೋ ವಾರ್ತೆ)

ಮುಖಪುಟ / ವಾರ್ತೆಗಳು

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more