ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸುಭಾಷ್‌ಚಂದ್ರ ಭೋಸ್‌ರ ಯೋಧೆ ಈಗ ಮನೆ ಕೆಲಸದ ಸೇವಕಿ

By Staff
|
Google Oneindia Kannada News

ಸುಭಾಷ್‌ಚಂದ್ರ ಭೋಸ್‌ರ ಯೋಧೆ ಈಗ ಮನೆ ಕೆಲಸದ ಸೇವಕಿ
ಯಾರಿಗೆ ಬಂತು ಎಲ್ಲಿಗೆ ಬಂತು ನಲವತ್ತೇಳರ ಸ್ವಾತಂತ್ರ್ಯ? - ಈ ಹಾಡಿಗೆ ಕೊನೆಯೆಂದು ?

ಈಕೆಯ ಹೆಸರು ಲಕ್ಷ್ಮಿ ಇಂದಿರಾ ಪಂಡ. ಒಂದು ಕಾಲದಲ್ಲಿ ನೇತಾಜಿ ಸುಭಾಷ್‌ಚಂದ್ರ ಭೋಸ್‌ ಅವರೊಂದಿಗೆ ಕೆಲಸ ಮಾಡಿದ ಹೆಣ್ಣು ಮಗಳು. ಸುಭಾಷ್‌ ನೇತೃತ್ವದ ಭಾರತೀಯ ರಾಷ್ಟ್ರೀಯ ಪಡೆ (Indian National Army)ಯ ಸಕ್ರಿಯ ಸದಸ್ಯೆಯಾಗಿದ್ದ ಗಟ್ಟಿಗಿತ್ತಿ . ಈಕೆ ಇದೀಗ ಎರಡು ಹೊತ್ತಿನ ಊಟಕ್ಕಾಗಿ ಹೆಣಗುತ್ತಿದ್ದಾಳೆ.

ಲಕ್ಷ್ಮಿ ಇಂದಿರಾಗೀಗ 76 ವರ್ಷ. ಊಟಕ್ಕೂ ಪರದಾಡುವ ಸ್ಥಿತಿಯಲ್ಲಿರುವ ಲಕ್ಷ್ಮಿ ಒರಿಸ್ಸಾದ ಜೇಪುರ (Jeypore) ದಲ್ಲಿ ಮನೆ ಕೆಲಸ ಮಾಡಿಕೊಂಡಿದ್ದಾರೆ. ಒರಿಸ್ಸಾದಲ್ಲೀಗ ಲಕ್ಷ್ಮಿಯ ದುರಂತಗಾಥೆಯದೇ ಮಾತು. ಇಷ್ಟು ದಿನ ಅನಾಮಿಕಳಾಗಿದ್ದ ಲಕ್ಷ್ಮಿ ಇಂದಿರಾ ದುರಂತ ಬದುಕಿನ ಕುರಿತು ಮೊನ್ನೆ ಮೊನ್ನೆ ಒರಿಸ್ಸಾದ ಪ್ರಾದೇಶಿಕ ದೈನಿಕವೊಂದು ವರದಿ ಪ್ರಕಟಿಸಿದೆ.

ಮಯನ್ಮಾರ್‌ದ ವಲಸಿಗ ಬಡ ಕುಟುಂಬವೊಂದರಲ್ಲಿ ಹುಟ್ಟಿದ ಲಕ್ಷ್ಮಿ ಸಣ್ಣ ವಯಸ್ಸಿನಲ್ಲಿಯೇ ಹೆತ್ತವರನ್ನು ಕಳಕೊಂಡ ನತದೃಷ್ಟೆ . ಬ್ರಿಟೀಷರು ನಡೆಸಿದ ಬಾಂಬ್‌ ದಾಳಿಯಲ್ಲಿ ಪೋಷಕರ ಕಳಕೊಂಡ ಲಕ್ಷ್ಮಿ- ಆನಂತರ ಸುಭಾಷ್‌ರ ಭಾರತೀಯ ರಾಷ್ಟ್ರೀಯ ಪಡೆಯ ರಾಣಿ ಝಾನ್ಸಿ ವಿಂಗ್‌ಗೆ ಸೇರ್ಪಡೆಯಾದಳು. 16 ಕೆಡೆಟ್‌ಗಳೊಂದಿಗೆ ಲಕ್ಷ್ಮಿ ತರಬೇತಿಯನ್ನೂ ಪಡೆದಿದ್ದಳು.

ಸುಭಾಷ್‌ರ ಪಡೆಯಲ್ಲಿ ಲಕ್ಷ್ಮಿ ಇಂದಿರಾ ಸುಮಾರು ಮೂರು ವರ್ಷ ಕಾಲ ಕರ್ತವ್ಯ ನಿರ್ವಹಿಸಿದ್ದಳು. 1945ರವರೆಗೂ, ಪಡೆಯ ಬಾಗಿಲು ಮುಚ್ಚುವವರೆಗೂ ಆಕೆ ಸದಸ್ಯಳಾಗಿದ್ದಳು. ಬರ್ಮಾ, ಸಿಂಗಾಪುರ, ಮಲೇಷಿಯಾಗಳಲ್ಲಿ ಓಡಾಟ ನಡೆಸಿರುವ ಈಕೆ- ಸ್ವಾತಂತ್ರ್ಯ ಸಂಗ್ರಾಮದಲ್ಲಿ ಸಕ್ರಿಯ ಪಾತ್ರ ವಹಿಸಿದ್ದಳು.

ಭಾರತಕ್ಕೆ ಸ್ವಾತಂತ್ರ್ಯವೇನೊ ಬಂತು. ಲಕ್ಷ್ಮಿ ಇಂದಿರಾ ಒರಿಸ್ಸಾಗೆ ಹಿಂದಿರುಗಿದಳು. ಆದರೆ, ಆಕೆಯ ಕಷ್ಟದ ದಿನಗಳು ಮುಗಿದಿರಲಿಲ್ಲ . 1951 ರಲ್ಲಿ ಆಕೆಯ ಗಂಡ ಮೃತನಾದ. ಸ್ವಾತಂತ್ರ್ಯ ಹೋರಾಟಗಾರರಿಗೆ ಸರ್ಕಾರ ನೀಡುವ ಪಿಂಚಣಿಯನ್ನು ಪಡೆಯಲು ಲಕ್ಷ್ಮಿ ಇಂದಿರಾ ಇನ್ನೊಂದು ಹೋರಾಟವನ್ನೇ ನಡೆಸಬೇಕಾಯಿತು.

ಮೂರು ದಶಕಗಳ ಕಾಲ ಎಲ್ಲರ ಮನೆಯ ಬಾಗಿಲು ತಟ್ಟಿದೆ. ಫಲಕಾರಿಯಾಗಲಿಲ್ಲ . ರಾಜಕಾರಣಿಗಳು ಮತ್ತು ಅಧಿಕಾರಿಗಳು ನಮ್ಮ ಹೋರಾಟದ ಫಲ ಉಣ್ಣುತ್ತಿದ್ದರು. ಆದರೆ, ನನ್ನ ಹಾಗೂ ನನ್ನ ಕುಟುಂಬದ ಎರಡು ಹೊತ್ತಿನ ಊಟಕ್ಕಾಗಿ ನಾನು ಕಂಬ ಸುತ್ತುತ್ತಿದ್ದೆ . ಸುಭಾಷ್‌ರ ಐಎನ್‌ಎಯಲ್ಲಿ ಸೇವೆ ಸಲ್ಲಿಸಿದ್ದೆ ಎನ್ನುವುದನ್ನು ಮರೆಯಲು ಪ್ರಯತ್ನಿಸುತ್ತಿದ್ದೇನೆ ಎಂದು ಇಂದಿರಾ ವ್ಯಥೆಯಿಂದ ನುಡಿಯುತ್ತಾರೆ.

ಲಕ್ಷ್ಮಿ ಇಂದಿರಾ ಅವರಿಗೆ ಸ್ವಾತಂತ್ರ್ಯ ಹೋರಾಟಗಾರರಿಗೆ ದೊರೆಯುವ ಪಿಂಚಣಿ 700 ರುಪಾಯಿ ದೊರೆಯುತ್ತದೆ. ಆದರೆ, ಕೈಗೆ ಬರುವುದು 400 ರುಪಾಯಿ ಮಾತ್ರ. ಉಳಿದುದು ಸಾಲಕ್ಕೆ ಚುಕ್ತಾ . ಮನೆ ಕೆಲಸದ ಮೂಲಕ 300 ರುಪಾಯಿ ಸಂಪಾದಿಸುತ್ತಾರೆ.

ಅಂದು- ಲಕ್ಷ್ಮಿ ಇಂದಿರಾ ಪಂಡಾ ಸ್ವಾತಂತ್ರ್ಯಕ್ಕಾಗಿ ಹೋರಾಟ ನಡೆಸಿದ್ದರು. ಈಗ ಉಳಿವಿಗಾಗಿ ಹೋರಾಟ ನಡೆಸುತ್ತಿದ್ದಾರೆ !

ಮೇರಾ ಭಾರತ್‌ ಮಹಾನ್‌ !! ಏನಂತೀರಿ ?

(ಏಜೆನ್ಸೀಸ್‌)

ಮುಖಪುಟ / ವಾಟ್ಸ್‌ ಹಾಟ್‌

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X