ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜ್ಯೋತಿನಿವಾಸ್‌ ಕಾಲೇಜಿನ ವಿದ್ಯಾರ್ಥಿನಿ ವಿನೀತಾ ಜುಥಾನಿ ರಷ್ಯಾಕ್ಕೆ

By Staff
|
Google Oneindia Kannada News

ಜ್ಯೋತಿನಿವಾಸ್‌ ಕಾಲೇಜಿನ ವಿದ್ಯಾರ್ಥಿನಿ ವಿನೀತಾ ಜುಥಾನಿ ರಷ್ಯಾಕ್ಕೆ
ಯುವ ವಿನಿಮಯ ಕಾರ್ಯಕ್ರಮದಡಿ ರಷ್ಯಾಕ್ಕೆ ಭಾರತೀಯ ವಿದ್ಯಾರ್ಥಿಗಳ ತಂಡ

ಬೆಂಗಳೂರು : ಯುವ ವಿನಿಮಯ ಕಾರ್ಯಕ್ರಮದಡಿ ರಷ್ಯಾಕ್ಕೆ ತೆರಳಲಿರುವ ಭಾರತೀಯ ತಂಡಕ್ಕೆ ರಾಜ್ಯದ ಬಾಲಕಿ ವಿನೀತಾ ಹರ್ಷದ್‌ ಜುಥಾನಿ ಆಯ್ಕೆಯಾಗಿದ್ದಾಳೆ.

ಎನ್‌.ಸಿ.ಸಿ.ಯ ರಾಜ್ಯ ಘಟಕದ ಬಾಲಕಿಯರ ವಿಭಾಗದ ಬೆಟಾಲಿಯನ್‌ ಸೀನಿಯರ್‌ ಅಂಡರ್‌ ಆಫೀಸರ್‌ ಆಗಿರುವ ವಿನೀತಾ, ಬೆಂಗಳೂರಿನ ಜ್ಯೋತಿ ನಿವಾಸ್‌ ಕಾಲೇಜಿನ ವಿದ್ಯಾರ್ಥಿನಿ. ಗಣರಾಜ್ಯೋತ್ಸವ ಸಂದರ್ಭದಲ್ಲಿ ನಡೆದ ಶಿಬಿರದಲ್ಲಿ ವಿನೀತಾ ರಾಷ್ಟ್ರೀಯ ಮಟ್ಟದಲ್ಲಿ ಅತ್ಯುತ್ತಮ ಕೆಡೆಟ್‌ ಪ್ರಶಸ್ತಿ ಪಡೆದಿದ್ದಳು.

ವಿನೀತಾ ಒಳಗೊಂಡ ಭಾರತೀಯ ತಂಡ ಸೆಪ್ಟಂಬರ್‌ 20ರಂದು ರಷ್ಯಾಕ್ಕೆ ತೆರಳಲಿದೆ. ಬೆಂಗಳೂರಿನ ಎನ್‌.ಸಿ.ಸಿ.- ಎ ಕೇಂದ್ರದ ಕಮಾಂಡರ್‌ ಕರ್ನಲ್‌ ಜೋಸೆಫ್‌ ಫಿಲಿಪ್‌ ಭಾರತೀಯ ತಂಡದ ನೇತೃತ್ವ ವಹಿಸಿದ್ದಾರೆ.

(ಇನ್ಫೋ ವಾರ್ತೆ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X