• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಮಲ್ಯ ಚುಕ್ಕಾಣಿಯ ಜನತಾ ಪಕ್ಷಕ್ಕೆ ಬಿ.ಟಿ.ಲಲಿತಾನಾಯಕ್‌ ಪಕ್ಷಾಂತರ

By Staff
|

ಮಲ್ಯ ಚುಕ್ಕಾಣಿಯ ಜನತಾ ಪಕ್ಷಕ್ಕೆ ಬಿ.ಟಿ.ಲಲಿತಾನಾಯಕ್‌ ಪಕ್ಷಾಂತರ

ಜನತಾದಳ (ಜಾ) ದ ಮಹಿಳಾ ಘಟಕದ ಉಪಾಧ್ಯಕ್ಷೆ ಗಿರಿಜಮ್ಮ ಕೂಡ ಮಲ್ಯ ಪಕ್ಷ ಸೇರಿದರು

ಬೆಂಗಳೂರು : ಮಾಜಿ ಸಚಿವೆ ಹಾಗೂ ಜಾತ್ಯತೀತ ಜನತಾದಳದ ಕರ್ನಾಟಕ ಘಟಕದ ನಾಯಕಿ ಬಿ.ಟಿ.ಲಲಿತಾನಾಯಕ್‌ ಸೋಮವಾರ (ಸೆ.15) ಜನತಾ ಪಕ್ಷ ಸೇರಿದರು.

ಜನತಾ ಪಕ್ಷದ ಕಾರ್ಯಾಧ್ಯಕ್ಷ ವಿಜಯ್‌ ಮಲ್ಯ ಅವರ ಮುಂದೆ ತಮ್ಮ ಪಕ್ಷಾಂತರದ ವಿಷಯವನ್ನು ಲಲಿತಾನಾಯಕ್‌ ಪ್ರಕಟಿಸಿದರು. ಜಾತ್ಯತೀತ ಜನತಾ ದಳದಲ್ಲಿ ತಮ್ಮನ್ನು ತಿರಸ್ಕಾರದಿಂದ ನೋಡಲಾಗುತ್ತಿತ್ತು ಹಾಗೂ ಪಕ್ಷದಲ್ಲಿ ಶಿಸ್ತು ಇಲ್ಲ ಎಂಬ ಕಾರಣಕ್ಕೆ ಬೇಸತ್ತಿರುವುದಾಗಿ ಅವರು ಹೇಳಿದರು.

ಲಲಿತಾನಾಯಕ್‌ ಅವರನ್ನು ತಮ್ಮ ಪಕ್ಷಕ್ಕೆ ಬರಮಾಡಿಕೊಂಡ ಜನತಾ ಪಕ್ಷದ ಕಾರ್ಯಾಧ್ಯಕ್ಷ ವಿಜಯ್‌ ಮಲ್ಯ, ಸದ್ಯದಲ್ಲೇ ರಾಮಕೃಷ್ಣ ಹೆಗಡೆ ಅವರ ಜೊತೆ ಮುಂಬರುವ ಲೋಕಸಭಾ ಚುನಾವಣೆಯ ಸೀಟು ಹಂಚಿಕೆ ಕುರಿತು ಮಾತಾಡುವುದಾಗಿ ಹೇಳಿದರು. ಸೆ.26ರಂದು ನಡೆಯಲಿರುವ ಹುನಗುಂದ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಅಖಿಲ ಭಾರತ ಪ್ರಗತಿಪರ ಜನತಾದಳಕ್ಕೆ ಈಗಾಗಲೇ ಬೆಂಬಲ ಕೊಟ್ಟಿದ್ದೇವೆ ಎಂದರು.

ಲಲಿತಾ ನಾಯಕ್‌ ಜೊತೆಯಲ್ಲಿ ಜಾತ್ಯತೀತ ಜನತಾದಳದ ಮಹಿಳಾ ಘಟಕದ ಉಪಾಧ್ಯಕ್ಷೆ ಗಿರಿಜಮ್ಮ ಕೂಡ ಮಲ್ಯ ನೇತೃತ್ವದ ಜನತಾ ಪಕ್ಷ ಸೇರಿದರು.

(ಪಿಟಿಐ)

ಮುಖಪುಟ / ವಾರ್ತೆಗಳು

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more