ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಸ್ತೆ ರಿಪೇರಿಗೆ ಹಣ : ಸರ್ಕಾರದ ಮನವಿಗೆ ಸೊಪ್ಪು ಹಾಕದ ವಿಪ್ರೋ

By Staff
|
Google Oneindia Kannada News

ರಸ್ತೆ ರಿಪೇರಿಗೆ ಹಣ : ಸರ್ಕಾರದ ಮನವಿಗೆ ಸೊಪ್ಪು ಹಾಕದ ವಿಪ್ರೋ
ಸುಧಾರಿತ ತೆರಿಗೆ ನೀತಿಯಡಿ ಹೆಚ್ಚು ಹಣ ಖರ್ಚು ಮಾಡಲು ವಿಪ್ರೋ ಒತ್ತಾಯ

ಬೆಂಗಳೂರು: ನಗರದ ಸರ್ಜಾಪುರ ರಸ್ತೆ ರಿಪೇರಿ ಕಾರ್ಯದಲ್ಲಿ ಸಾಫ್ಟ್‌ವೇರ್‌ ದಿಗ್ಗಜ ವಿಪ್ರೋ ಕಂಪೆನಿಯೂ ಆರ್ಥಿಕವಾಗಿ ಕೈ ಜೋಡಿಸಬೇಕು ಎಂದು ಸರ್ಕಾರ ಬಯಸಿದ್ದು , ಸರಕಾರದ ಈ ಮನವಿಯನ್ನು ವಿಪ್ರೋ ತಳ್ಳಿಹಾಕಿದೆ.

13 ಕೋಟಿ ರೂಪಾಯಿ ವೆಚ್ಚದ ರಸ್ತೆ ನಿರ್ಮಾಣ ಯೋಜನೆಗೆ 8 ಅಥವಾ 10 ಕೋಟಿ ರೂಪಾಯಿ ನೆರವು ನೀಡಬೇಕೆಂದು ಲೋಕೋಪಯೋಗಿ ಇಲಾಖೆ ವಿಪ್ರೋಗೆ ಪತ್ರ ಬರೆದು ಮನವಿ ಮಾಡಿಕೊಂಡಿತ್ತು. ನಗರದ ಹೊರವಲಯದ ರಿಂಗ್‌ ರೋಡನ್ನು ಸಂಪರ್ಕಿಸುವ ಸುಮಾರು ಐದು ಕಿಲೋಮೀಟರ್‌ ಉದ್ದದ ಲಿಂಕ್‌ ರೋಡು ನಿರ್ಮಾಣವಾಗಬೇಕಾಗಿದೆ. ರಸ್ತೆ ಅಭಿವೃದ್ಧಿ ಆಗಬೇಕಿದೆ. ಇದಕ್ಕಾಗಿ ವಿಪ್ರೋ ನೆರವು ನೀಡಬೇಕು ಎಂದು ಸರ್ಕಾರ ಬಯಸಿತ್ತು . ಆದರೆ ಸರಕಾರದ ಪ್ರಸ್ತಾವನೆಯನ್ನು ವಿಪ್ರೋ ತಳ್ಳಿ ಹಾಕಿದೆ.

ಲೋಕೋಪಯೋಗಿ ಇಲಾಖೆಗೆ ವಿಪ್ರೋ ಪತ್ರ ಬರೆದಿದ್ದು - ವಿಪ್ರೋದಂತಹ ಸಂಸ್ಥೆಗಳು ನಿರ್ದಿಷ್ಟ ನಿಯಮಾವಳಿಗಳ ಅಡಿಯಲ್ಲಿ ಕೆಲಸ ಮಾಡುತ್ತಿದ್ದು, ಸರಕಾರಕ್ಕೆ ನೀಡುವ ದೇಣಿಗೆಯಿಂದ ಇತರ ತೊಂದರೆಗಳು ಉದ್ಭವಿಸುತ್ತದೆ. ಆದ್ದರಿಂದ ನೆರವು ನೀಡುವ ಪ್ರಸ್ತಾವನೆಯನ್ನು ವಿಪ್ರೋ ಒಪ್ಪಿಕೊಳ್ಳುತ್ತಿಲ್ಲ. ಅಲ್ಲದೆ ಸರಕಾರವು ಸುಧಾರಿತ ತೆರಿಗೆ ನೀತಿಯಿಂದಾಗಿ ಮೂಲಭೂತ ಸೌಕರ್ಯಗಳಿಗೆ ಸಾಕಷ್ಟು ಹಣ ಖರ್ಚು ಮಾಡಬೇಕು ಎಂದು ಹೇಳಿದೆ.

(ಇನ್ಫೋ ವಾರ್ತೆ)

ಮುಖಪುಟ / ಐಟಿ - ಬಿಟಿ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X