ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹಾವೇರಿ ಆಕಾಶದಲ್ಲಿ ಮಳೆ ಗರ್ಭ ಧರಿಸಬಲ್ಲ ಮೋಡಗಳಿಲ್ಲವೇ ?

By Staff
|
Google Oneindia Kannada News

ಹಾವೇರಿ ಆಕಾಶದಲ್ಲಿ ಮಳೆ ಗರ್ಭ ಧರಿಸಬಲ್ಲ ಮೋಡಗಳಿಲ್ಲವೇ ?
ಹಾವೇರಿಯಲ್ಲಿ ಸೋತು ಹೋದ ಸರ್ಕಾರೀ ಮಳೆ

ಹಾವೇರಿ: ಜಿಲ್ಲೆಯಲ್ಲಿ ಮಳೆಯಿಲ್ಲ. ಜಿಲ್ಲೆಯ ಏಳೂ ತಾಲ್ಲೂಕುಗಳನ್ನು ಬರಪೀಡಿತ ತಾಲ್ಲೂಕುಗಳೆಂದು ಸರಕಾರ ಘೋಷಿಸಿದೆ. ್ಫಬರದ ದೆಸೆಯಿಂದಾಗಿ ಜಿಲ್ಲೆಯ ರೈತರ ಮಳೆಯ ಕುರಿತ ಕನಸುಗಳು ಹಾಗೂ ನಿರೀಕ್ಷೆಗಳೆಲ್ಲವೂ ಒಣಗಿ ಹೋಗಿದ್ದವು. ಆ ಸಂದರ್ಭದಲ್ಲಿ ಮೋಡ ಬಿತ್ತನೆಯ ಮೂಲಕ ಮಳೆ ತರಿಸುವ ಹೊಸ ಆಶೆಯನ್ನು ಸರಕಾರ ರೈತರ ಮುಂದಿಟ್ಟಿತು.

ಸೆ. 10ರಂದು ಮೋಡ ಬಿತ್ತನೆ ಮಾಡುವ ವಿಮಾನಗಳು, ಬಿತ್ತನೆ ಸಾಮಾನುಗಳನ್ನು ತೆಗೆದುಕೊಂಡು ಹಾವೇರಿಗೆ ಹೋದವು. ರೇಡಾರ್‌ ಮೂಲಕ ಮೋಡಗಳನ್ನು ಪತ್ತೆ ಮಾಡಿ ಬಿತ್ತನೆ ಮಾಡಲಾಯಿತು. ಆದರೆ ನಿರೀಕ್ಷಿತ ಮಳೆ ಬರಲಿಲ್ಲ. ‘ಪಾಪಿ ಹೋದಲ್ಲಿ ಮೊಣಕಾಲು ನೀರು’ ಎಂದು ತಮ್ಮನ್ನು ತಾವು ಶಪಿಸುತ್ತಾ ರೈತರು ಮತ್ತೊಮ್ಮೆ ಕೈ ಚೆಲ್ಲಿ ಕುಳಿತರು. ಮಳೆಯ ಗರ್ಭ ಧರಿಸುವಷ್ಟು ಸಾಮರ್ಥ್ಯವಿರುವ ಮೋಡಗಳು ಹಾವೇರಿಯ ಆಕಾಶದಲ್ಲಿ ಇಲ್ಲ ಎಂಬ ಕಾರಣವನ್ನು ಕೊಟ್ಟು ಮೋಡ ಬಿತ್ತನೆ ವಿಫಲವಾದುದನ್ನು ಅಧಿಕಾರಿಗಳು ಸಮರ್ಥಿಸಿಕೊಂಡರು.

ಆದರೆ ಸೆ. 11ರ ಗುರುವಾರ ಹಾವೇರಿಯಲ್ಲಿ ಅಚಾನಕ್‌ ಎಂಬಂತೆ ಧಾರಾಕಾರ ಮಳೆ ಸುರಿಯಿತು. ಐದರಿಂದ ಹತ್ತು ನಿಮಿಷಗಳ ಕಾಲ ಸುರಿದ ಮಳೆಯಿಂದಾಗಿ ಹಾವೇರಿ ರೈತರ ಕಣ್ಣುಗಳು ತಂಪಾದವು. ‘ಇದು ಸರ್ಕಾರೀ ಮಳೆಯಲ್ಲಪ್ಪಾ...ದೇವರು ಕೊಟ್ಟ ಮಳೆ’ ಅಂತ ಜಿಲ್ಲೆಯ ರೈತರು ಖುಷಿಪಟ್ಟರು. ಹಾವೇರಿ ಆಕಾಶದಲ್ಲಿಯೂ ಮಳೆ ತರಬಲ್ಲ ಮೋಡಗಳಿವೆ ಎಂಬುದು ಅಲ್ಲಿನ ನಿವಾಸಿಗಳಿಗೆ ಮತ್ತಷ್ಟು ಸಂತಸ ತಂದಿದೆ.

ಆದರೆ ಮೋಡ ಬಿತ್ತನೆಯ ಅಧಿಕಾರಿಗಳು ತಮ್ಮ ಪ್ರಯತ್ನವನ್ನು ಕೈ ಬಿಟ್ಟಿಲ್ಲ. ಇನ್ನೂ ನಾಲ್ಕು - ಐದು ದಿನಗಳ ಕಾಲ ಮೋಡ ಬಿತ್ತನೆಗೆ ಪ್ರಯತ್ನಿಸಲಾಗುವುದು ಎಂದು ಈ ಯೋಜನೆಯ ಕ್ಯಾಪ್ಟನ್‌ ಅರವಿಂದ್‌ ಶರ್ಮಾ ಹೇಳಿದ್ದಾರೆ. ಎನ್‌234ಕೆ ಏರ್‌ಕ್ರಾಫ್ಟ್‌ ಹಾವೇರಿಯಲ್ಲಿ ಮೋಡ ಬಿತ್ತನೆಗೆ ಸಜ್ಜುಗೊಂಡು ನಿಂತಿದೆ.

ಸರ್ಕಾರಿ ಮಳೆಯಾದರೂ ಸರಿ, ವರುಣ ಕೃಪೆಯಾದರೂ ಸರಿ. ಹಾವೇರಿಯಲ್ಲಿ ಗಂಗಾವತರಣವಾಗಲಿ. ಬೆಂದ ಮನಸ್ಸುಗಳಲ್ಲಿ ಕನಸುಗಳು ಮೊಳೆಯಲಿ.

(ಇನ್ಫೋ ವಾರ್ತೆ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X