ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವೇದಶಾಲೆ ನೆರವಿಗೆ ಕೊಲೋನಿಯಲ್‌ ಕಸಿನ್ಸ್‌ ಖ್ಯಾತಿಯ ಹರಿಹರನ್‌

By Staff
|
Google Oneindia Kannada News

ವೇದಶಾಲೆ ನೆರವಿಗೆ ಕೊಲೋನಿಯಲ್‌ ಕಸಿನ್ಸ್‌ ಖ್ಯಾತಿಯ ಹರಿಹರನ್‌
ಸೆ.20ರಂದು ಚೌಡಯ್ಯ ಹಾಲ್‌ನಲ್ಲಿ ಹರಿಹರನ್‌ ಸಂಗೀತ ಕಚೇರಿ

ಬೆಂಗಳೂರು: ಕೊಲೋನಿಯಲ್‌ ಕಸಿನ್ಸ್‌ ಖ್ಯಾತಿಯ ಹರಿಹರನ್‌ ಸೆಪ್ಟೆಂಬರ್‌ 20ರಂದು ಬೆಂಗಳೂರಿನಲ್ಲಿ ವೇದ ಶಾಲೆಯಾಂದರ ಸಹಾಯಾರ್ಥ ಗಝಲ್‌ ಹಾಗೂ ಸಿನಿಮಾ ಹಾಡುಗಳನ್ನು ಹಾಡಲಿದ್ದಾರೆ.

ವ್ಯಾಸ ವೇದ ಪೀಠವು ಹರಿಹರನ್‌ ಸಂಗೀತ ಕಾರ್ಯಕ್ರಮವನ್ನು ಆಯೋಜಿಸಿದೆ. ಪೂಜ್ಯ ಗುರುಮಠ ಅಮ್ಮ ಅವರ ನೇತೃತ್ವದಲ್ಲಿರುವ ಜೀವನ ಧರ್ಮ ಯೋಗ ಟ್ರಸ್ಟ್‌ ನಿರ್ಮಿಸುತ್ತಿರುವ ವ್ಯಾಸ ವೇದ ಪೀಠ ಕಳೆದ ಜುಲೈ ತಿಂಗಳಲ್ಲಿ ಶಾಲೆಯಾಂದರ ನಿರ್ಮಾಣ ಕಾರ್ಯವನ್ನು ಆರಂಭಿಸಿದೆ. ಎಂಟು ಮಿಲಿಯನ್‌ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಈ ಶಾಲೆಗೋಸ್ಕರ ವಿವಿಧ ಸರಣಿ ಸಂಗೀತ ಕಾರ್ಯಕ್ರಮಗಳ ಮೂಲಕವೇ ನಿಧಿ ಸಂಗ್ರಹಿಸಲಾಗುತ್ತಿದೆ.

ವ್ಯಾಸ ವೇದ ಪೀಠವು ವೇದ ಶಿಕ್ಷಣ, ಯೋಗ ಜ್ಞಾನ, ಆರೋಗ್ಯ ಮತ್ತು ಆಹಾರ, ಹಳೆಯ ವೇದಿಕ್‌ ಸ್ಕಿೃಪ್ಟ್‌ಗಳಿಂದ ಜ್ಞಾನ ಸಂಗ್ರಹಣೆ, ಪುರಾತನ ಚಿಕಿತ್ಸಾ ರೂಪಗಳು, ಪಂಚ ಕರ್ಮ ಚಿಕಿತ್ಸೆಯ ಕುರಿತು ಶಿಕ್ಷಣ ಒದಗಿಸಲಿದೆ. ವೇದ ಅಧ್ಯಯನಕಾರರಿಗೆ ಈ ಶಾಲೆಯು ಧ್ಯಾನ ಕೇಂದ್ರವಾಗಿಯೂ ನೆರವಾಗಲಿದೆ.

ಬೆಂಗಳೂರು- ಮೈಸೂರು ಹೈವೇಯಲ್ಲಿ ನಿರ್ಮಾಣವಾಗುತ್ತಿರುವ ಈ ಶಾಲೆ ನಗರದಿಂದ ಸುಮಾರು 15 ಕಿಲೋಮೀಟರ್‌ ದೂರದಲ್ಲಿದೆ. ಆದರೆ ನಿಧಿ ಸಂಗ್ರಹಕ್ಕಾಗಿ ನಡೆಯುತ್ತಿರುವ ಹರಿಹರನ್‌ ಸಂಗೀತ ಕಾರ್ಯಕ್ರಮವು ನಗರದ ಹೃದಯ ಭಾಗದಲ್ಲಿರುವ ಚೌಡಯ್ಯ ಸ್ಮಾರಕ ಭವನದಲ್ಲಿ ಸೆ. 20ರ ಶನಿವಾರ ಸಂಜೆ ಏಳು ಗಂಟೆಗೆ ನಡೆಯಲಿದೆ.

ಜಯನಗರದ ಕ್ಯಾಲಿಪ್ಸೋ, ಮಲ್ಲೇಶ್ವರಂನ ಆಶಾ ಸ್ವೀಟ್‌ ಸೆಂಟರ್‌, ಬ್ರಿಗೇಡ್‌ ರಸ್ತೆಯ ಮ್ಯೂಸಿಕ್‌ ವರ್ಲ್ಡ್‌ನಲ್ಲಿ ಕಾರ್ಯಕ್ರಮದ ಟಿಕೇಟುಗಳು ಲಭ್ಯವಾಗಲಿವೆ.

(ಇನ್ಫೋ ವಾರ್ತೆ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X