ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚಾಮುಂಡೇಶ್ವರಿ ದೇವಿಗೆ ಅಡ್ಡಬಿದ್ದ ತಮಿಳು ಮುಖ್ಯಮಂತ್ರಿ ಜಯಾ

By Staff
|
Google Oneindia Kannada News

ಚಾಮುಂಡೇಶ್ವರಿ ದೇವಿಗೆ ಅಡ್ಡಬಿದ್ದ ತಮಿಳು ಮುಖ್ಯಮಂತ್ರಿ ಜಯಾ
ಮೈಸೂರಿಗೆ ಜಯಲಲಿತಾ ಅನಿರೀಕ್ಷಿತ ಹಾಗೂ ಖಾಸಗಿ ಭೇಟಿ

ಮೈಸೂರು : ನಗರದ ಚಾಮುಂಡಿ ಬೆಟ್ಟದಲ್ಲಿನ ಶ್ರೀ ಚಾಮುಂಡೇಶ್ವರಿ ದೇವಿಗೆ ತಮಿಳುನಾಡು ಮುಖ್ಯಮಂತ್ರಿ ಜೆ.ಜಯಲಲಿತಾ ಶುಕ್ರವಾರ ಪೂಜೆ ಸಲ್ಲಿಸಿದರು.

ಗೆಳತಿ ಶಶಿಕಲಾ ನಟರಾಜನ್‌ ಅವರೊಂದಿಗೆ ಶುಕ್ರವಾರ (ಸೆ.12) ಚಾಮುಂಡೇಶ್ವರಿ ದರ್ಶನಕ್ಕೆ ಆಗಮಿಸಿದ ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಅವರನ್ನು ದೇವಸ್ಥಾನದ ಸಕಲ ಗೌರವಗಳೊಂದಿಗೆ ಸ್ವಾಗತಿಸಲಾಯಿತು. ಹೆಚ್ಚೂ ಕಡಿಮೆ ಅರ್ಧ ತಾಸು ಕಾಲ ಇಷ್ಟ ದೇವತೆ ಚಾಮುಂಡೇಶ್ವರಿ ದೇವಿ ಸನ್ನಿಧಿಯಲ್ಲಿ ಜಯಲಲಿತಾ ಕಾಲ ಕಳೆದರು.

ಮಾಧ್ಯಮದ ಪ್ರತಿನಿಧಿಗಳೊಂದಿಗೆ ಯಾವುದೇ ವಿಷಯದ ಬಗ್ಗೆ ಮಾತನಾಡಲು ನಿರಾಕರಿಸಿದ ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ- ತಮ್ಮ ಮೈಸೂರು ಭೇಟಿಯನ್ನು ಖಾಸಗಿ ಕಾರ್ಯಕ್ರಮ ಎಂದರು.

ಕಷ್ಟ ಬಂದಾಗಲೆಲ್ಲ ಮೈಸೂರಿನ ಶಕ್ತಿ ದೇವತೆ ಚಾಮುಂಡೇಶ್ವರಿಯನ್ನು ಜಯಲಲಿತಾ ನೆನಪಿಸಿಕೊಳ್ಳುತ್ತಾರೆ. ಈ ಬಾರಿ ಯಾವ ಪ್ರಾರ್ಥನೆ ಹೊತ್ತು ಬಂದಿದ್ದರೊ ?

(ಪಿಟಿಐ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X