ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೈಸೂರು ದಸರೆ ಆಕರ್ಷಣೆ: ಆಗಸದಲ್ಲಿ ವಿಮಾನ ಚಿತ್ತಾರ, ಪುಷ್ಪವೃಷ್ಟಿ

By Staff
|
Google Oneindia Kannada News

ಮೈಸೂರು ದಸರೆ ಆಕರ್ಷಣೆ: ಆಗಸದಲ್ಲಿ ವಿಮಾನ ಚಿತ್ತಾರ, ಪುಷ್ಪವೃಷ್ಟಿ
ಚಾಮುಂಡೇಶ್ವರಿ ಮೆರವಣಿಗೆಯ ಮೇಲೆ ಹೂಮಳೆಯ ಸಂಭ್ರಮ

ಬೆಂಗಳೂರು: ಈ ಬಾರಿಯ ಮೈಸೂರು ದಸರಾ ಉತ್ಸವದಲ್ಲಿ ರಕ್ಷಣಾ ಸಚಿವಾಲಯದ ವಿಮಾನಗಳು ಆಕಾಶ ಮಾರ್ಗದಲ್ಲಿ ಚಿತ್ತಾರ ಬಿಡಿಸುವ ಮೂಲಕ ದಸರಾ ಹಬ್ಬಕ್ಕೆ ಹೊಸ ಸಂಭ್ರಮ ತಂದುಕೊಡಲಿವೆ.

ಮೈಸೂರು ದಸರಾ ಇತಿಹಾಸದಲ್ಲಿಯೇ ಈ ರೀತಿ ಆಕಾಶದಲ್ಲಿ ವಿಮಾನ ಚಿತ್ತಾರ (ಸ್ಕೈ ಡೈವಿಂಗ್‌ ಏರ್‌ ಡಿಸ್‌ಪ್ಲೇ) ಕಾರ್ಯಕ್ರಮವನ್ನು ಮೊತ್ತ ಮೊದಲ ಬಾರಿಗೆ ಆಯೋಜಿಸಲಾಗಿದ್ದು, ಕೇಂದ್ರ ರಕ್ಷಣಾ ಸಚಿವಾಲಯ ಇದಕ್ಕೆ ಈಗಾಗಲೇ ಒಪ್ಪಿಗೆ ಸೂಚಿಸಿದೆ. ದಕ್ಷಿಣ ಕಮಾಂಡ್‌ನ ಏರ್‌ ಮಾರ್ಷಲ್‌ ಪಿ. ಕೆ. ಪಾಂಡೆ ಈ ಕಾರ್ಯಕ್ರಮದ ಉಸ್ತುವಾರಿ ನೋಡಿಕೊಳ್ಳಲಿದ್ದಾರೆ.

ಅಕ್ಟೋಬರ್‌ 5ರಂದು ನಡೆಯುವ ವೈಭವದ ದಸರಾ ಮೆರವಣಿಗೆಯ ಸಂದರ್ಭದಲ್ಲಿ ಆಕಾಶ ಬಯಲಲ್ಲಿ ವಿಮಾನಗಳು ಚಿತ್ತಾರ ಬಿಡಿಸುತ್ತಾ ಹಾರಾಡಲಿವೆ. ಚಾಮುಂಡೇಶ್ವರಿ ದೇವಿಯ ಮೆರವಣಿಗೆಯ ಮೇಲೆ ಹೆಲಿಕಾಪ್ಟರ್‌ಗಳು ಪುಷ್ಪ ವೃಷ್ಟಿ ಸುರಿಯಲಿವೆ ಎಂದು ಸಹಕಾರ ಸಚಿವ ಹಾಗೂ ದಸರಾ ಉತ್ಸವ ಸಮಿತಿಯ ಅಧ್ಯಕ್ಷ ಎಚ್‌. ವಿಶ್ವನಾಥ್‌ ಶುಕ್ರವಾರ( ಸೆ. 12) ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

(ಪಿಟಿಐ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X