ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸೆಪ್ಟೆಂಬರ್‌ 15ರಿಂದ ದೇಶಾದ್ಯಂತ ಜಾನುವಾರು ಗಣತಿ ಪ್ರಾರಂಭ

By Staff
|
Google Oneindia Kannada News

ಸೆಪ್ಟೆಂಬರ್‌ 15ರಿಂದ ದೇಶಾದ್ಯಂತ ಜಾನುವಾರು ಗಣತಿ ಪ್ರಾರಂಭ
ಪಶುಸಂಗೋಪನಾ ಇಲಾಖೆಯಿಂದ ರಾಜ್ಯದಲ್ಲಿ ಜಾನುವಾರು ಗಣತಿ

ಬೆಂಗಳೂರು: ಸೆಪ್ಟೆಂಬರ್‌ 15ರಿಂದ ಒಂದು ತಿಂಗಳ ಕಾಲ ದೇಶಾದ್ಯಂತ ಜಾನುವಾರು ಗಣತಿ ನಡೆಯಲಿದೆ. ಈ ಜಾನುವಾರು ಗಣತಿಯ ಮೂಲಕ ದೇಶದಲ್ಲಿರುವ ಜಾನುವಾರುಗಳ ಲೆಕ್ಕವಿಡುವುದು ಮಾತ್ರವಲ್ಲದೇ ಸಾವಯವ ಕೃಷಿ ಹಾಗೂ ಹಾಲು ಉತ್ಪಾದನೆಯ ಬಗ್ಗೆಯೂ ಸರಕಾರ ಮಾಹಿತಿ ಕಲೆ ಹಾಕಲಿದೆ.

ಕರ್ನಾಟಕದಲ್ಲಿ ಪಶುಸಂಗೋಪನಾ ಇಲಾಖೆಯು ಜಾನುವಾರು ಗಣತಿ ಕಾರ್ಯವನ್ನು ಕೈಗೆತ್ತಿಕೊಳ್ಳಲಿದೆ. ದನ, ಕೋಣ, ಆಡು, ಕುರಿ, ಹಂದಿ, ನಾಯಿ, ಕುದುರೆ, ಕತ್ತೆ, ಒಂಟೆ, ಮೊಲ, ಕೋಳಿ, ಬಾತುಕೋಳಿ,ಟರ್ಕಿ ಕೋಳಿಗಳ ಸಂಖ್ಯೆಯೂ ಈ ಜಾನುವಾರು ಗಣತಿಯಲ್ಲಿ ಸೇರಿಕೊಳ್ಳಲಿವೆ. ಅಲ್ಲದೆ ಮೀನುಗಾರಿಕೆಯಲ್ಲಿ ತೊಡಗಿರುವ ಹಾಗೂ ಮೀನುಗಾರಿಕೆಯನ್ನೇ ಅವಲಂಬಿಸಿರುವ ಕುಟುಂಬಗಳ ಪ್ರತ್ಯೇಕ ಗಣತಿಯೂ ಈ ಸಂದರ್ಭದಲ್ಲಿ ನಡೆಯಲಿದೆ.

ಪಶುಸಂಗೋಪನಾ ಸಚಿವ ಎಂ. ಮಹದೇವ್‌ ಗುರುವಾರ (ಸೆ.11) ಸುದ್ದಿಗೋಷ್ಠಿಯಲ್ಲಿ ಜಾನುವಾರು ಗಣತಿಯ ಬಗ್ಗೆ ತಿಳಿಸಿದ್ದು, ರಾಜ್ಯದಲ್ಲಿ ಜಾನುವಾರು ಗಣತಿಗಾಗಿ ಸುಮಾರು 2 ಕೋಟಿ ರೂಪಾಯಿ ಖರ್ಚಾಗಲಿದೆ ಎಂದರು. ಇದು ಬರೇ ಪಶುಗಳ ಲೆಕ್ಕವಿಡುವುದಕ್ಕಾಗಿ ಹಮ್ಮಿಕೊಳ್ಳುವ ಗಣತಿಯಲ್ಲ. ಬದಲಾಗಿ ಪಶುಸಂಗೋಪನೆಯಲ್ಲಿ ತೊಡಗಿರುವ ಕುಟುಂಬಗಳ ಬಗ್ಗೆ ಮಾಹಿತಿ ಸಂಗ್ರಹಿಸುವುದೂ ಆಗಿದೆ. ಐದು ವರ್ಷಗಳಿಗೊಮ್ಮೆ ಈ ಗಣತಿ ನಡೆಯುತ್ತದೆ. ಕಳೆದ ಬಾರಿ ರಾಜ್ಯದಲ್ಲಿ ನಡೆದ ಗಣತಿಯ ಪ್ರಕಾರ 3.06 ಕೋಟಿ ಪಶುಗಳು ಹಾಗೂ 2. 06 ಕೋಟಿ ಕೋಳಿ ಮುಂತಾದ ಪಕ್ಷಿಗಳಿದ್ದವು ಎಂದು ಸಚಿವ ಮಹದೇವ್‌ ಹೇಳಿದರು.

(ಇನ್ಫೋ ವಾರ್ತೆ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X