• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ರೈತರ ಸಾವಿನ ನಡುವೆ ‘ಅಂತರರಾಷ್ಟ್ರೀಯ ಆತ್ಮಹತ್ಯೆ ತಡೆ ದಿನ’

By Staff
|

ರೈತರ ಸಾವಿನ ನಡುವೆ ‘ಅಂತರರಾಷ್ಟ್ರೀಯ ಆತ್ಮಹತ್ಯೆ ತಡೆ ದಿನ’

ರಾಜ್ಯಾದ್ಯಂತ ಬರದಿಂದ ಬೇಸತ್ತು ರೈತರು ಆತ್ಮಹತ್ಯೆಗೆ ಗುರಿಯಾಗುತ್ತಿರುವ ಕಹಿ ನೆನಪಿನಲ್ಲೇ ‘ಅಂತರರಾಷ್ಟ್ರೀಯ ಆತ್ಮಹತ್ಯೆ ತಡೆ ದಿನ’ವನ್ನು ಬುಧವಾರ (ಸೆ.10) ಆಚರಿಸಲಾಗುತ್ತಿದೆ. ಈ ಸಂದರ್ಭದಲ್ಲಿ ಆತ್ಮಹತ್ಯೆಗಳ ಬಗೆಗೊಂದು ಅವಲೋಕನ.

ಬೆಂಗಳೂರು : ಉದ್ಯಾನ ನಗರಿ, ಸಿಲಿಕಾನ್‌ ವ್ಯಾಲಿ ಎಂದೇ ಬಿರುದಾಂಕಿತವಾಗಿರುವ ಬೆಂಗಳೂರು ನಗರಕ್ಕೆ ‘ಆತ್ಯಹತ್ಯೆಗಳ ರಾಜಧಾನಿ’ ಎಂತಲೂ ಕರೆಯುತ್ತಾರೆ. ಏಕೆಂದರೆ ಇಲ್ಲಿ ಆತ್ಮಹತ್ಯೆಗಳ ಸಂಖ್ಯೆ ಹೆಚ್ಚು .

ಅಂಕಿ ಅಂಶಗಳ ಪ್ರಕಾರ ಭಾರತದಲ್ಲಿ ಅತಿ ಹೆಚ್ಚು ಆತ್ಮಹತ್ಯೆಗಳಾಗುವ ನಗರ ಬೆಂಗಳೂರು. ರಾಜ್ಯಗಳಲ್ಲಿ ಕರ್ನಾಟಕ ಎರಡನೇ ಸ್ಥಾನ ಗಳಿಸಿದೆ. ಮೊದಲ ಸ್ಥಾನ ಕೇರಳದ್ದು ಎಂಬುದು ಇತ್ತೀಚೆಗೆ ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ) ಹೊರ ತಂದಿರುವ ವರದಿಯಿಂದ ತಿಳಿದುಬಂದಿದೆ.

Bangalore is Suicide Cityಬೆಂಗಳೂರು ಶೇ.17ರಷ್ಟು ಆತ್ಮಹತ್ಯೆಗಳಿಂದ ಮುಂದಿದ್ದರೆ, ಮುಂಬಯಿ (ಶೇ.14), ಚೆನ್ನೈ (ಶೇ.11), ದೆಹಲಿ (ಶೆ.7.5) ನಂತರದ ಸ್ಥಾನಗಳಲ್ಲಿವೆ. ಈ ನಗರಗಳು ದೇಶದಲ್ಲಿ ಸಂಭವಿಸುವ ಆತ್ಮಹತ್ಯೆಗಳಲ್ಲಿ ಶೇ.50ರಷ್ಟು ಪಾಲನ್ನು ಹೊಂದಿವೆ.

ಆತ್ಮಹತ್ಯೆ ತಡೆ : ಅಜ್ಞಾನ ನಿವಾರಣೆ (ಸೂಸೈಡ್‌ ಪ್ರಿವೆನ್ಷನ್‌ : ಎಮರ್ಜಿಂಗ್‌ ಫ್ರಂ ಡಾರ್ಕ್‌ನೆಸ್‌) ಎಂಬ ಶೀರ್ಷಿಕೆಯಡಿ ಆಗ್ನೇಯ ಏಷ್ಯಾ ವಲಯದ ವಿಶ್ವ ಆರೋಗ್ಯ ಸಂಸ್ಥೆ ಪ್ರಕಟಿಸಿರುವ ವರದಿಯಲ್ಲಿ ಈ ವಿಷಯ ಬೆಳಕಿಗೆ ಬಂದಿದೆ. ಬೆಂಗಳೂರಿನಲ್ಲಿ ವರ್ಷಕ್ಕೆ ಶೇ.30ರಷ್ಟು ಆತ್ಮಹತ್ಯೆಗಳು ಹೆಚ್ಚಾಗುತ್ತಿವೆ. ಜತೆಗೆ ಶೇ.15ರಷ್ಟು ಜನಸಂಖ್ಯೆ ಏರುತ್ತಿದೆ. ಆತ್ಮಹತ್ಯೆಗೆ ನಡೆಸುವ ಯತ್ನಗಳ ಸಂಖ್ಯೆ 20-30 ಎಂದು ನಿಮ್ಹಾನ್ಸ್‌ನ ಡಾ.ಗುರುರಾಜ್‌ ವಿವರಿಸುತ್ತಾರೆ.

ಅನಾರೋಗ್ಯ, ಕುಟುಂಬ, ಹಣಕಾಸು ಸಮಸ್ಯೆ, ಮದ್ಯಪಾನ, ನಿರುದ್ಯೋಗ ಮತ್ತು ಹತಾಶೆಗಳು ಆತ್ಮಹತ್ಯೆಗೆ ಪ್ರಮುಖ ಕಾರಣ ಎಂಬುದು ನಿಮ್ಹಾನ್ಸ್‌ ನಡೆಸಿದ ಸಮೀಕ್ಷೆ ಪ್ರಕಾರ ತಿಳಿದು ಬಂದಿದೆ.

ಶಾಲಾ ಕಾಲೇಜುಗಳ ಫಲಿತಾಂಶ ಹೊರಬೀಳುವ ಮಾರ್ಚ್‌ ಮತ್ತು ಜುಲೈ ತಿಂಗಳ ಸಂದರ್ಭದಲ್ಲಿ ನಗರದಲ್ಲಿ ಅತಿ ಹೆಚ್ಚು ಆತ್ಮಹತ್ಯೆಗಳು ಸಂಭವಿಸುತ್ತವೆ ಎನ್ನಲಾಗಿದೆ.

ಹತ್ತರಿಂದ 24 ವರ್ಷದೊಳಗಿನ ಮಹಿಳೆಯರು ಆತ್ಮಹತ್ಯೆಗೆ ಹೆಚ್ಚು ಪ್ರಯತ್ನಿಸುತ್ತಾರೆ. ತಮ್ಮನ್ನು ಸುಟ್ಟುಕೊಂಡು ಆತ್ಮಹತ್ಯೆ ಮಾಡಿಕೊಳ್ಳುವುದು ಮಹಿಳೆಯರಲ್ಲಿ ಸಾಮಾನ್ಯವಾಗಿದೆ. ಪುರುಷರು ವಿಷ, ಡ್ರಗ್‌ ತೆಗೆದುಕೊಂಡು ಆತ್ಮಹತ್ಯೆಗೆ ಈಡಾಗುತ್ತಿದ್ದಾರೆ. ಕಡಿಮೆ ಆದಾಯದ ಕುಟುಂಬಗಳನ್ನು ಹೊಂದಿರುವ ಸುಬ್ರಹ್ಮಣ್ಯಪುರ, ಹನುಮಂತನಗರ, ಬಸವೇಶ್ವರನಗರ ಮತ್ತು ಮಡಿವಾಳದಲ್ಲಿ ಅತಿ ಹೆಚ್ಚು ಆತ್ಮಹತ್ಯೆ ಪ್ರಕರಣಗಳು ದಾಖಲಾಗಿವೆ.

ಆತ್ಮಹತ್ಯೆ ಕಾನೂನು : ಭಾರತೀಯ ದಂಡ ಸಂಹಿತೆಯ (ಸೆಕ್ಷನ್‌ 309) ಪ್ರಕಾರ ಯಾವುದೇ ವ್ಯಕ್ತಿ ಆತ್ಮಹತ್ಯೆಗೆ ಪ್ರಯತ್ನಿಸಿದರೆ ಅದು ಕಾನೂನನ್ನು ಉಲ್ಲಂಘಿಸಿದಂತೆ. ಈತನಿಗೆ 1 ವರ್ಷ ಸಜೆ ಅಥವಾ ದಂಡ ವಿಧಿಸಬಹುದು. 1860ರಲ್ಲಿ ಜಾರಿಗೆ ಬಂದ ಈ ಕಾನೂನು ಈಗಲೂ ಹಾಗೆಯೇ ಮುಂದುವರಿದಿದೆ.

(ಸ್ನೇಹಸೇತು : ವಿಜಯ ಕರ್ನಾಟಕ)

Post your views

ಪೂರಕ ಓದಿಗೆ-

ಲಕ್ಷ ರೂಪಾಯಿ : ಪರಿಹಾರವೋ ಪ್ರಲೋಭನೆಯಾ?

ರೈತರ ಆತ್ಮಹತ್ಯೆ: ‘ಗಾಬೆಲ್‌ ಸಂತತಿಯ ವಿಪಕ್ಷಗಳಿಂದ ಸುಳ್ಳುಬಿತ್ತನೆ’

ಮುಖಪುಟ / ವಾಟ್ಸ್‌ ಹಾಟ್‌

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more