ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜೀವನಾಡಿ ಕಬ್ಬನ್‌ಪಾರ್ಕ್‌ಗೆ ಉಸಿರು ತುಂಬಲು 10.4 ಕೋಟಿ ರು.

By Staff
|
Google Oneindia Kannada News

ಜೀವನಾಡಿ ಕಬ್ಬನ್‌ಪಾರ್ಕ್‌ಗೆ ಉಸಿರು ತುಂಬಲು 10.4 ಕೋಟಿ ರು.
ಉದ್ಯಾನದಲ್ಲಿ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಲು ಸಂಕಲ್ಪ

ಬೆಂಗಳೂರು : ನಗರದ ಜೀವನಾಡಿಗಳಲ್ಲಿ ಒಂದಾದ ಕಬ್ಬನ್‌ ಪಾರ್ಕ್‌ ಉದ್ಯಾನವನ್ನು 10.4 ಕೋಟಿ ರುಪಾಯಿ ವೆಚ್ಚದಲ್ಲಿ ಅಭಿವೃದ್ಧಿಪಡಿಸಲು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಯೋಜನೆಯಾಂದನ್ನು ರೂಪಿಸಿದೆ.

ಸುಂದರ ಕಾಲುದಾರಿಗಳು, ಸೌರ್ವಜನಿಕ ಶೌಚಾಲಯಗಳು, ಕುಡಿಯುವ ನೀರು, ವಿದ್ಯುತ್‌ ಅಲಂಕಾರ ಮುಂತಾದ ಕಾರ್ಯಕ್ರಮಗಳು ಕಬ್ಬನ್‌ ಉದ್ಯಾನದ ಅಭಿವೃದ್ಧಿ ಯೋಜನೆಯಲ್ಲಿ ಸೇರಿವೆ ಎಂದು ಪ್ರಾಧಿಕಾರದ ಪ್ರಕಟಣೆ ತಿಳಿಸಿದೆ.

ಕಬ್ಬನ್‌ ಪಾರ್ಕ್‌ನಲ್ಲಿ ನೀರಿನ ಕೊರತೆಯನ್ನು ನೀಗಲು ಕ್ರಮ ಕೈಗೊಳ್ಳಲಾಗುವುದು. 1.5 ಎಂಎಲ್‌ಡಿ ಸಾಮರ್ಥ್ಯದ ಕೊಳಚೆ ನೀರಿನ ನೈರ್ಮಲ್ಯೀಕರಣ ಸ್ಥಾವರವನ್ನು ಕಸ್ತೂರಿ ಬಾ ರಸ್ತೆಯ ಸಮೀಪ ಸ್ಥಾಪಿಸಲಾಗುವುದು. ಈ ಸ್ಥಾವರದಿಂದ ಕಬ್ಬನ್‌ ಉದ್ಯಾನದಲ್ಲಿನ 150 ಎಕರೆ ಪ್ರದೇಶದ ಗಿಡಮರಗಳಿಗೆ ನೀರುಣಿಸಲಾಗುವುದು. ನೀರಿನ ಕೊಳಗಳಿಗೆ ಕೂಡ ನೀರೊದಗಿಸಲಾಗುವುದು ಎಂದು ಪ್ರಕಟಣೆ ತಿಳಿಸಿದೆ.

(ಇನ್ಫೋ ವಾರ್ತೆ)

ಮುಖಪುಟ / ಬೆಂಗಳೂರು ಡೈರಿ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X