ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪಾಕ್‌ ಜೊತೆ ಆಡುವ ನಿರ್ಧಾರ ನಮ್ಮ ಕೈಲಿಲ್ಲ-ಕುಂಬ್ಳೆ, ದ್ರಾವಿಡ್‌

By Staff
|
Google Oneindia Kannada News

ಪಾಕ್‌ ಜೊತೆ ಆಡುವ ನಿರ್ಧಾರ ನಮ್ಮ ಕೈಲಿಲ್ಲ-ಕುಂಬ್ಳೆ, ದ್ರಾವಿಡ್‌
ಪ್ರತಿಷ್ಠಿತ ಟೂರ್ನಿಗಳಲ್ಲಿ ಪಾಕಿಸ್ತಾನದ ಜೊತೆ ಆಡಲು ಸರ್ಕಾರ ಒಪ್ಪಿದೆ

ಬೆಂಗಳೂರು : ‘ಸರ್ಕಾರ ಮಾಡೋ ಕೆಲಸ ಅದು ಮಾಡುತ್ತೆ. ನಾವು ಏನನ್ನ ಕಂಟ್ರೋಲ್‌ ಮಾಡಬಹುದೋ ಅದನ್ನ ನಾವು ಮಾಡ್ತೀವಿ...’
‘ಪಾಕಿಸ್ತಾನದ ಜೊತೆ ಭಾರತ ಕ್ರಿಕೆಟ್‌ ಆಡಲೇಬೇಕು ಅಂತ ನೀವ್ಯಾಕೆ ರಚ್ಚೆ ಹಿಡಿಯಬಾರದು’ ಎಂಬ ಸುದ್ದಿಗಾರರೊಬ್ಬರ ಕೀಟಲೆ ಪ್ರಶ್ನೆಗೆ ರಾಹುಲ್‌ ದ್ರಾವಿಡ್‌ ಹಾಗೂ ಅನಿಲ್‌ ಕುಂಬ್ಳೆ ಕೊಟ್ಟ ಉತ್ತರ ಮೇಲಿನಂತಿತ್ತು. ಮೊದಲು ಸವಾಲು ಬಿದ್ದದ್ದು ಸ್ಪಿನ್‌ ಮಾಂತ್ರಿಕ ಕುಂಬ್ಳೆಯತ್ತ. ಈ ಪ್ರಶ್ನೆಯಿಂದ ನುಣುಚಿಕೊಳ್ಳುವಂತೆಯೇ ಮಾತುಗಾರಂಭಿಸಿದ ಕುಂಬ್ಳೆ, ಪಾಕಿಸ್ತಾನದ ಜೊತೆ ನಾವು ಕ್ರಿಕೆಟ್‌ ಆಡಬೇಕು ಅನ್ನೋದನ್ನ ಸರ್ಕಾರ ತೀರ್ಮಾನ ಮಾಡುತ್ತೆ ಅಂದರು. ಆಮೇಲೆ ಪ್ರಶ್ನೆ ದ್ರಾವಿಡ್‌ಗೆ ವರ್ಗಾವಣೆಯಾಯಿತು.

‘ಪಾಕಿಸ್ತಾನದ ಜೊತೆ ಕ್ರಿಕೆಟ್‌ ಆಡಬೇಕು ಅಂತ ತೀರ್ಮಾನಿಸುವುದು ನಮ್ಮ ಕೈಲಿಲ್ಲ. ಅದು ನಮ್ಮ ಕೆಲಸವಲ್ಲ. ನಾವು ಏನನ್ನ ಕಂಟ್ರೋಲ್‌ ಮಾಡಬಹುದೋ ಅದನ್ನು ಮಾಡ್ತೀವಿ’ ಅಂತ ದ್ರಾವಿಡ್‌ ಸ್ವಲ್ಪ ಖಾರವಾಗಿಯೇ ಮಾತಾಡಿದರು.

‘ನೀವು ಹಟ ಮಾಡಿದರೆ ಸರ್ಕಾರ ಒಪ್ಪೇ ಒಪ್ಪುತ್ತೆ , ಅಲ್ವಾ’ ಅಂತ ಮತ್ತೊಬ್ಬ ಸುದ್ದಿಗಾರರು ಅದೇ ಪ್ರಶ್ನೆಯನ್ನು ತಿರುಚಿ ಕೇಳಿದಾಗ, ಕುಂಬ್ಳೆ ಮತ್ತು ದ್ರಾವಿಡ್‌ ‘ಸಾರಿ’ ಎಂದು ಮಾತು ನಿಲ್ಲಿಸಿದರು.

ಪ್ರತಿಷ್ಠಿತ ಟೂರ್ನಿಗಳಲ್ಲಿ ಪಾಕಿಸ್ತಾನದ ಜೊತೆಯೂ ಆಡಲು ಭಾರತ ಕ್ರಿಕೆಟ್‌ ತಂಡಕ್ಕೆ ಅನುಮತಿ ಕೊಡಬೇಕೆಂದು ಭಾರತ ಕ್ರಿಕೆಟ್‌ ನಿಯಂತ್ರಣ ಮಂಡಳಿ (ಬಿಸಿಸಿಐ) ಸಲ್ಲಿಸಿದ್ದ ಪ್ರಸ್ತಾವನೆಗೆ ಕೇಂದ್ರ ಸರ್ಕಾರ ಸೋಮವಾರ (ಸೆ.08) ಒಪ್ಪಿಗೆ ಸೂಚಿಸಿದೆ.

(ಪಿಟಿಐ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X