ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಮೆರಿಕಕ್ಕೆ ಹಾರಲು ಬೆಂಗಳೂರು ಮೇಯರ್‌ ನಾಗರಾಜ್‌ ಮತ್ತೆ ರೆಡಿ

By Staff
|
Google Oneindia Kannada News

ಅಮೆರಿಕಕ್ಕೆ ಹಾರಲು ಬೆಂಗಳೂರು ಮೇಯರ್‌ ನಾಗರಾಜ್‌ ಮತ್ತೆ ರೆಡಿ
ಸೆ.30ರಂದು ಅಮೆರಿಕದ ರಿನೋ ಸಿಟಿಗೆ ಪ್ರಯಾಣ

ಬೆಂಗಳೂರು : ಕುಟುಂಬದೊಂದಿಗೆ ಹದಿನೈದು ದಿನಗಳ ವಿದೇಶಿ ಪ್ರವಾಸ ಮುಗಿಸಿ ಮೊನ್ನೆ ತಾನೆ ನಗರಕ್ಕೆ ವಾಪಸ್ಸಾಗಿರುವ ಮೇಯರ್‌ ಸಿ.ಎಂ.ನಾಗರಾಜ್‌, ಇನ್ನೊಂದು ವಿದೇಶ ಪ್ರವಾಸಕ್ಕೆ ತೆರಳುವ ಸಿದ್ಧತೆ ನಡೆಸಿದ್ದಾರೆ.

ಸಿ.ಎಂ.ನಾಗರಾಜ್‌ ಹಾಗೂ ಆಯುಕ್ತ ಎಂ.ಆರ್‌.ಶ್ರೀನಿವಾಸಮೂರ್ತಿ ಅವರನ್ನೊಳಗೊಂಡ ಮಹಾನಗರ ಪಾಲಿಕೆ ಅಧಿಕಾರಿಗಳ ತಂಡ ಅಮೆರಿಕದ ರಿನೋ ಸಿಟಿಗೆ ಸೆ.30ರಂದು ಪ್ರಯಾಣ ಬೆಳೆಸಲಿದೆ ಎಂಬುದು ತಿಳಿದುಬಂದಿದೆ.

ಸಿ.ಎಂ.ನಾಗರಾಜ್‌ ಮತ್ತೊಮ್ಮೆ ವಿದೇಶ ಪ್ರವಾಸಕ್ಕೆ ತೆರಳುವ ಸುದ್ದಿಯಿಂದ ಉಪ ಮೇಯರ್‌ ಎಲ್‌.ಎ.ಜಯಲಕ್ಷ್ಮಿ ಇನ್ನಷ್ಟು ಖುಷಿಯಾಗಿದ್ದಾರೆ. ಯಾಕೆಂದರೆ ಮೇಯರ್‌ ಉಸ್ತುವಾರಿಕೆಯ ಮೇಲೆ ಕೆಲವು ದಿನಗಳು ಮಹಾನಗರದ ಆಡಳಿತ ನಡೆಸುವ ಭಾಗ್ಯ ಮತ್ತೊಮ್ಮೆ ಅವರಿಗೆ ದೊರೆಯಲಿದೆ. ನಾಗರಾಜ್‌ ಅವರು ದೀರ್ಘಕಾಲ ರಜೆ ಮೇಲೆ ಖಾಸಗಿಯಾಗಿ ವಿದೇಶ ಪ್ರವಾಸ ಕೈಗೊಳ್ಳುವ ಮುನ್ನ ಉಪ ಮೇಯರ್‌ಗೆ ಉಸ್ತುವಾರಿ ವಹಿಸಿ ಹೋಗಿದ್ದರು.

ನೆವಡಾದ ರಿನೋ ಸಿಟಿ ಪುಟ್ಟದಾದರೂ, ತನ್ನ ಬಾಹ್ಯ ಸೌಂದರ್ಯ ಹಾಗೂ ಆಧುನಿಕ ತಂತ್ರಜ್ಞಾನದಲ್ಲಿ ಹೆಚ್ಚು ಶ್ರೀಮಂತಿಕೆ ಹೊಂದಿರುವ ನಗರ ಎಂಬ ಹೆಗ್ಗಳಿಕೆ ಗಳಿಸಿದೆ. ಅದು ನಾಗರಿಕ ಮೂಲಭೂತ ಸಮಸ್ಯೆಗಳೇ ಇಲ್ಲದ ಹೈಟೆಕ್‌ ಸಿಟಿ. ಸಿಂಗಪೂರ್‌ಗಿಂತಲೂ ಮುಂದುವರಿದ ನಗರ. ಅಲ್ಲಿನ ನಗರಾಡಳಿತದ ಐವರು ಅಧಿಕಾರಿಗಳ ತಂಡ ಬೆಂಗಳೂರಿಗೆ ಭೇಟಿ ನೀಡಿ, ವ್ಯವಸ್ಥೆಯ ಬಗ್ಗೆ ಅಧ್ಯಯನ ನಡೆಸಿ ವಾಪಸಾಗಿತ್ತು .

ಮಹಾನಗರ ಪಾಲಿಕೆ ಅಧಿಕಾರಿಗಳನ್ನು ರಿನೋ ಸಿಟಿಗೆ ಬರುವಂತೆ ಆಹ್ವಾನ ನೀಡಿತ್ತು . ಇದರ ಮೇರೆಗೆ ಮೇಯರ್‌ ತಂಡ ಪ್ರವಾಸಕ್ಕೆ ತೆರಳಲಿದೆ ಎಂದು ತಿಳಿದು ಬಂದಿದೆ.

ಇದು, ಮೇಯರ್‌ ಆದ ಬಳಿಕ ನಾಗರಾಜ್‌ ಅವರ ಎರಡನೇ ಅಧಿಕೃತ ವಿದೇಶ ಪ್ರವಾಸವಾಗಲಿದೆ. ಈ ಮೊದಲು ಪ್ರತಿಪಕ್ಷ ನಾಯಕರ ಜತೆಗೆ ಶ್ರೀಲಂಕಾಗೆ ನಾಲ್ಕು ದಿನಗಳ ಪ್ರವಾಸ ಕೈಗೊಂಡಿದ್ದರು.

(ಸ್ನೇಹಸೇತು- ವಿಜಯ ಕರ್ನಾಟಕ)

ಮುಖಪುಟ / ಬೆಂಗಳೂರು ಡೈರಿ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X