• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ರೈತರಆತ್ಮಹತ್ಯೆ: ಗಾಬೆಲ್‌ ಸಂತತಿಯ ವಿಪಕ್ಷಗಳಿಂದ ಸುಳ್ಳುಬಿತ್ತನೆ-ಖರ್ಗೆ

By Staff
|

ರೈತರಆತ್ಮಹತ್ಯೆ: ಗಾಬೆಲ್‌ ಸಂತತಿಯ ವಿಪಕ್ಷಗಳಿಂದ ಸುಳ್ಳುಬಿತ್ತನೆ-ಖರ್ಗೆ

‘ಕರ್ನಾಟಕದಲ್ಲಿ ಆತ್ಮಹತ್ಯೆ ಹೆಚ್ಚಾಗಿಲ್ಲ, ವಿರೋಧ ಪಕ್ಷಗಳು ಹೆಚ್ಚಾಗಿಸಿದ್ದಾರೆ’

ಬೆಂಗಳೂರು : ಸರ್ವಾಧಿಕಾರಿ ಹಿಟ್ಲರ್‌ನ ಬೆಂಬಲಿಸಿ ಗಾಬೆಲ್‌ ಆಗ ಜರ್ಮನ್‌ ಜನರಲ್ಲಿ ಸುಳ್ಳಿನ ಬೀಜ ಬಿತ್ತಿದ್ದ. ಈಗ ವಿರೋಧ ಪಕ್ಷದವರು ರೈತರ ಆತ್ಮಹತ್ಯೆ ವಿಷಯದಲ್ಲಿ ಆ ಕೆಲಸ ಮಾಡುತ್ತಿದ್ದಾರೆ ಎಂದು ಗೃಹ ಸಚಿವ ಮಲ್ಲಿಕಾರ್ಜುನ ಖರ್ಗೆ ತರಾಟೆಗೆ ತೆಗೆದುಕೊಂಡರು.

ಮಂಗಳವಾರ (ಸೆ.09) ಸುದ್ದಿಗಾರರ ಜೊತೆ ಮಾತನಾಡುತ್ತಿದ್ದ ಖರ್ಗೆ, ರೈತರ ಆತ್ಮಹತ್ಯೆಯನ್ನು ಬರಲಿರುವ ಲೋಕಸಭಾ ಚುನಾವಣೆಯ ಪ್ರಚಾರ ತಂತ್ರವನ್ನಾಗಿ ವಿರೋಧ ಪಕ್ಷಗಳು ಬಣ್ಣಹಚ್ಚಿ ಬಳಸಿಕೊಳ್ಳುತ್ತಿದ್ದಾರೆ ಎಂದು ನೇರವಾಗಿ ದೂರಿದರು. ಬರ ಪರಿಶೀಲನಾ ಸಮಿತಿಯ ಸಚಿವ ಸಂಪುಟ ಉಪ ಸಮಿತಿಯ ನಾಯಕರೂ ಆಗಿರುವ ಖರ್ಗೆ, ರಾಜ್ಯದಲ್ಲಿ ಆತ್ಮಹತ್ಯೆ ಪ್ರಕರಣಗಳ ಅಂಕಿ- ಅಂಶ ಇಟ್ಟಿದ್ದು ಹೀಗೆ-

1998ರಲ್ಲಿ 6139, 99ರಲ್ಲಿ 6513, 2000ನೇ ಇಸವಿಯಲ್ಲಿ 6607, 2001ರಲ್ಲಿ 7095 ಹಾಗೂ ಈ ವರ್ಷ ಇಲ್ಲಿಯವರೆಗೆ 6, 607 ಮಂದಿ ರಾಜ್ಯದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅಂದಮೇಲೆ, ಆತ್ಮಹತ್ಯೆ ಮಾಡಿಕೊಳ್ಳುತ್ತಿರುವವರ ಸಂಖ್ಯೆ ಸ್ಥಿರವಾಗಿಯೇ ಇದೆ. ಹಾಗಿದ್ದೂ ವಿರೋಧ ಪಕ್ಷಗಳು ಸುಮ್ಮನೆ ಇಲ್ಲ ಸಲ್ಲದ ಹುಯಿಲೆಬ್ಬಿಸುತ್ತ ಕೃಷ್ಣ ಸರ್ಕಾರದ ವಿರುದ್ಧ ಅಪ ಪ್ರಚಾರ ಮಾಡತೊಡಗಿದ್ದಾರೆ ಎಂದು ಖರ್ಗೆ ಕಿಡಿ ಕಾರಿದರು.

ರೈತರಷ್ಟೇ ಅಲ್ಲದೆ ಕೂಲಿಕರ್ಮಿಗಳು ಹಾಗೂ ಹೆಂಗಸರ ಹೆಣಗಳನ್ನೂ ವಿರೋಧ ಪಕ್ಷಗಳು ತೋರಿಸಿ, ಅದಕ್ಕೆ ಸರ್ಕಾರವನ್ನು ಹೊಣೆಯಾಗಿಸುತ್ತಿವೆ. ರಾಜ್ಯ ಸರ್ಕಾರ ಮೂರು ವರ್ಷಗಳಿಂದ ಇರುವ ಬರಗಾಲವನ್ನು ಎದುರಿಸಲು ಕ್ರಮ ಕೈಗೊಂಡಿದೆ. ಜನತೆಗೆ ಯಾರು ಗಟ್ಟಿ, ಯಾರು ಜೊಳ್ಳು ಎಂಬುದು ಗೊತ್ತಾಗುತ್ತದೆ ಎಂದರು.

ಆತ್ಮಹತ್ಯೆ ಮಾಡಿಕೊಳ್ಳುವ ಪ್ರಸಂಗ ಕರ್ನಾಟಕವೂ ಸೇರಿದಂತೆ ದೇಶದ ಯಾವ ರಾಜ್ಯಕ್ಕೂ ಹೊಸದಲ್ಲ. ಅದಕ್ಕೆ ನಿಜವಾದ ಕಾರಣವೇನು ಅನ್ನುವುದನ್ನು ಯೋಚಿಸದೆ, ಈಗ ವಿರೋಧ ಪಕ್ಷಗಳು ಅದನ್ನೇ ಹುಯಿಲೆಬ್ಬಿಸುತ್ತಿರುವುದು ಅಕ್ಷರಶಃ ರಾಜಕೀಯ ತಂತ್ರ ಎಂದು ಆರೋಪಿಸಿದರು.

(ಪಿಟಿಐ)

ಮುಖಪುಟ / ವಾರ್ತೆಗಳು

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more