ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇನ್ಫೋಸಿಸ್‌ಗೆ ಬುಟ್ಟಿಗೆ ಟೆಲ್‌ಸ್ಟ್ರಾದ 50 ದಶಲಕ್ಷ ಡಾಲರ್‌ ಗುತ್ತಿಗೆ

By Staff
|
Google Oneindia Kannada News

ಇನ್ಫೋಸಿಸ್‌ಗೆ ಬುಟ್ಟಿಗೆ ಟೆಲ್‌ಸ್ಟ್ರಾದ 50 ದಶಲಕ್ಷ ಡಾಲರ್‌ ಗುತ್ತಿಗೆ
ಆಸ್ಟ್ರೇಲಿಯಾದ ಅತಿದೊಡ್ಡ ಟೆಲಿಕಾಂ ಕಂಪನಿ ಇನ್ಫೋಸಿಸ್‌ಗೆ ಒಲಿದಿದೆ

ಬೆಂಗಳೂರು : ಸಾಫ್ಟ್‌ವೇರ್‌ ದಿಗ್ಗಜ ಇನ್ಫೋಸಿಸ್‌ಗೆ ಆಸ್ಟ್ರೇಲಿಯಾದ ದೂರಸಂಪರ್ಕ ಕಂಪನಿ ಟೆಲ್‌ಸ್ಟ್ರಾದ 50 ದಶಲಕ್ಷ ಅಮೆರಿಕನ್‌ ಡಾಲರ್‌ ಗುತ್ತಿಗೆ ಲಭಿಸಿದೆ.

ಐದು ವರ್ಷಗಳ ಅವಧಿಯ ಈ ಗುತ್ತಿಗೆಯಲ್ಲಿ ಸಾಫ್ಟ್‌ವೇರ್‌ ಅಭಿವೃದ್ಧಿ ಹಾಗೂ ನಿರ್ವಹಣೆಯ ಹೊಣೆ ಇನ್ಫೋಸಿಸ್‌ಗೆ ಸಿಕ್ಕಿದ್ದು, ಇದಕ್ಕೆ 75 ದಶಲಕ್ಷ ಆಸ್ಟ್ರೇಲಿಯನ್‌ ಡಾಲರ್‌ ಹಣ ಸಿಗಲಿದೆ.

ಆಸ್ಟ್ರೇಲಿಯಾದಲ್ಲಿ ಅತಿ ದೊಡ್ಡ ದೂರಸಂಪರ್ಕ ಸಂಸ್ಥೆಯೆನಿಸಿರುವ ಟೆಲ್‌ಸ್ಟ್ರಾ 2002- 03ರಲ್ಲಿ 21.7 ಶತಕೋಟಿ ಆದಾಯ ಗಳಿಸಿತ್ತು. ಇನ್ಫೋಸಿಸ್‌ ಕಂಪನಿಯ ವಕ್ತಾರ ಮಂಗಳವಾರ (ಸೆ.09) ಸುದ್ದಿಗಾರರಿಗೆ ಈ ವಿಷಯ ತಿಳಿಸಿದರು.

(ಪಿಟಿಐ)

ಮುಖಪುಟ / ಐಟಿ - ಬಿಟಿ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X