ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸದ್ಯದಲ್ಲೇ ಭಾರತದ ಅಂಗಡಿಗೆ ಬರಲಿವೆ ಹೆಂಗಸರ ಕಾಂಡೊಮ್‌ಗಳು

By Staff
|
Google Oneindia Kannada News

ಸದ್ಯದಲ್ಲೇ ಭಾರತದ ಅಂಗಡಿಗೆ ಬರಲಿವೆ ಹೆಂಗಸರ ಕಾಂಡೊಮ್‌ಗಳು
ಹಿಂದೂಸ್ತಾನ್‌ ಲ್ಯಾಟೆಕ್ಸ್‌ ಜೊತೆ ಫೀಮೇಲ್‌ ಹೆಲ್ತ್‌ ಕಂಪನಿ ಒಪ್ಪಂದ

ಶಿಕಾಗೋ : ವಿಶ್ವದಲ್ಲಿ ಹೆಂಗಸರ ಕಾಂಡೊಮ್‌ ಉತ್ಪಾದಿಸುವ ಏಕೈಕ ಕಂಪನಿಯಾದ ‘ಫೀಮೇಲ್‌ ಹೆಲ್ತ್‌ ಕಂಪನಿ’ ಭಾರತದ ಸಂಸ್ಥೆಯಾಟ್ಟಿಗೆ ಡೀಲ್‌ ಕುದುರಿಸಿದೆ. ಸದ್ಯದಲ್ಲೇ ಭಾರತಕ್ಕೂ ಹೆಂಗಸರ ಕಾಂಡೊಮ್‌ ಕಾಲಿರಿಸಲಿದೆ.

ಹಿಂದೂಸ್ತಾನ್‌ ಲ್ಯಾಟೆಕ್ಸ್‌ ಲಿಮಿಟೆಡ್‌ ಜೊತೆ ಅಮೆರಿಕೆಯ ಕಂಪನಿ ತನ್ನ ಕಾಂಡೊಮ್‌ ವಿತರಣೆ ಒಡಂಬಡಿಕೆಗೆ ಸಹಿ ಮಾಡಿದೆ. 2001 ರಿಂದಲೇ ಹಿಂದೂಸ್ತಾನ್‌ ಲ್ಯಾಟಿಕ್ಸ್‌ ಹಾಗೂ ಫೀಮೇಲ್‌ ಹೆಲ್ತ್‌ ಕಂಪನಿ ಪೈಲಟ್‌ ಯೋಜನೆಯ ಒಪ್ಪಂದ ಮಾಡಿಕೊಂಡಿದ್ದವು. ಆ ಕಾರಣ ಕೇರಳ, ಆಂಧ್ರಪ್ರದೇಶ ಮತ್ತು ಮಹಾರಾಷ್ಟ್ರದ ಕ್ಲಿನಿಕ್‌ಗಳಲ್ಲಿ ಈವರೆಗೆ ಉಚಿತವಾಗಿ ಹೆಂಗಸರ ಕಾಂಡೊಮ್‌ಗಳನ್ನು ವಿತರಿಸಲಾಗುತ್ತಿತ್ತು.

ಪೈಲಟ್‌ ಯೋಜನೆಯನ್ವಯ ಈ ಕಾಂಡೊಮ್‌ಗಳು ಸಾಕಷ್ಟು ಬೇಡಿಕೆ ಗಿಟ್ಟಿಸಿಕೊಂಡಿವೆ. ಹೀಗಾಗಿ ಈಗ ಭಾರತದ ಮಾರುಕಟ್ಟೆಗೆ ನೇರವಾಗಿ ಪ್ರವೇಶಿಸಲು ತೀರ್ಮಾನಿಸಿದ್ದೇವೆ. ಮೊದಲಿಗೆ ಹತ್ತು ಲಕ್ಷ ಅಂಗಡಿಗಳಿಗೆ ಕಾಂಡೊಮ್‌ ಮಾರುವುದು ನಮ್ಮ ಗುರಿ ಎನ್ನುತ್ತಾರೆ ಶಿಕಾಗೋ ಮೂಲದ ಕಂಪನಿಯ ಅಧ್ಯಕ್ಷೆ ಮೇರಿ ಆ್ಯನ್‌ ಲೀಪರ್‌.

ಭಾರತಕ್ಕೆಯಾಕೆ ಬೇಕು ಹೆಂಗಸರ ಕಾಂಡೊಮ್‌?
ಲೀಪರ್‌ ಪ್ರಕಾರ ಭಾರತದಲ್ಲಿ ಲೈಂಗಿಕ ಕಾರ್ಯಕರ್ತೆಯರ ಸಂಖ್ಯೆ ದಿನೇದಿನೇ ಏರುತ್ತಿದೆ. ಈಗಾಗಲೇ 50 ಲಕ್ಷ ಭಾರತೀಯರು ಏಡ್ಸ್‌ ಸೋಂಕಿನಿಂದ ಪೀಡಿತರಾಗಿದ್ದಾರೆ. ಹೆಂಗಸರ ಆರೋಗ್ಯ ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಇವು ಅನಿವಾರ್ಯ. ಬೇಡದ ಬಸುರನ್ನು ಹೊರುವ ಸಮಸ್ಯೆ ಸಾಕಷ್ಟು ಭಾರತೀಯ ಹೆಣ್ಣು ಮಕ್ಕಳು ಅನುಭವಿಸುತ್ತಿದ್ದಾರೆ. ಇವೆಲ್ಲದರ ನಿವಾರಣೆಗೆ ಹೆಂಗಸರ ಕಾಂಡೊಮ್‌ ಅಗತ್ಯ.

ಸಾಕಷ್ಟು ಪರೀಕ್ಷೆಗಳ ನಂತರ ಹೆಂಗಸರ ಕಾಂಡೊಮ್‌ ತಯಾರಿಸಿದ್ದು, ಅದನ್ನು ಕೊಳ್ಳಲು ಹೆಂಗಸರೂ ಬಯಸುತ್ತಿದ್ದಾರೆ. ಲೈಂಗಿಕ ಜ್ಞಾನದ ವಿಷಯದಲ್ಲಿ ತೀರಾ ಹಿಂದಿರುವ ಭಾರತದಲ್ಲಿ ಈ ಕಾಂಡೊಮ್‌ಗಳ ಬಳಕೆ ಬಗ್ಗೆ ಆರೋಗ್ಯ ಸಂಸ್ಥೆಗಳು ಜಾಗೃತಿ ಮೂಡಿಸಬೇಕು. ಕಾಂಡೊಮ್‌ಗಳನ್ನು ಆರೋಗ್ಯ ಸಂಸ್ಥೆಗಳ ಮೂಲಕವೇ ಮಾರುಕಟ್ಟೆಗೆ ಬಿಡುತ್ತೇವೆ ಎಂದು ಲೀಪರ್‌ ಹೇಳಿದರು.

(ಏಜೆನ್ಸೀಸ್‌)

Post your views

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X