ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿಪ್ರೋ ಕಂಪನಿಗೆ 9 ಸಾವಿರ ಐಟಿ ವೃತ್ತಿಪರರು ಕೆಲಸಕ್ಕೆ ಬೇಕಾಗಿದ್ದಾರೆ

By Staff
|
Google Oneindia Kannada News

ವಿಪ್ರೋ ಕಂಪನಿಗೆ 9 ಸಾವಿರ ಐಟಿ ವೃತ್ತಿಪರರು ಕೆಲಸಕ್ಕೆ ಬೇಕಾಗಿದ್ದಾರೆ
ಇನ್ನೆರಡು ವರ್ಷದೊಳಗೆ ಚೀನಾದಲ್ಲಿ ಕಚೇರಿ ತೆರೆಯುವುದು ಅಜೀಂ ಗುರಿ

ಮುಂಬಯಿ : ಕಂಪ್ಯೂಟರ್‌ ಸಾಪ್ಟ್‌ವೇರ್‌ ಹಾಗೂ ಬಿಪಿಓ (ಉದ್ದಿಮೆ ಅಗತ್ಯ ಎರವಲು ಸೇವೆ) ಕ್ಷೇತ್ರಗಳ ಅಗತ್ಯ ಪೂರೈಸಲು ವಿಪ್ರೋ ಟೆಕ್ನಾಲಜಿ ಈ ವರ್ಷ 9 ಸಾವಿರ ಮಾಹಿತಿ ತಂತ್ರಜ್ಞಾನ ವೃತ್ತಿಪರರಿಗೆ ಕೆಲಸ ಕೊಡಲಿದೆ.

ಭಾರತೀಯ ವಾಣಿಜ್ಯ ಸಂಸ್ಥೆ ಮತ್ತು ಉದ್ದಿಮೆಗಳ ಒಕ್ಕೂಟ (ಎಫ್‌ಐಸಿಸಿಐ) ಹಾಗೂ ಮೆಕಿನ್ಸೆ ಇತ್ತೀಚೆಗೆ ಮುಂಬಯಿಯಲ್ಲಿ ಆಯೋಜಿಸಿದ್ದ ‘ಜಾಗತಿಕ ಸ್ಪರ್ಧೆ’ ಎಂಬ ವಿಚಾರ ಸಂಕಿರಣದಲ್ಲಿ ವಿಪ್ರೋ ಅಧ್ಯಕ್ಷ ಅಜೀಂ ಪ್ರೇಂಜಿ ಈ ವಿಷಯ ತಿಳಿಸಿದರು. ಸದ್ಯಕ್ಕೆ ವಿಪ್ರೋ ಕಂಪನಿಯಲ್ಲಿ ಒಟ್ಟು 24 ಸಾವಿರ ನೌಕಕರಿದ್ದಾರೆ. ಈ ಪೈಕಿ ಐಟಿ ಸೇವೆಗಳನ್ನು ಒದಗಿಸಲು 15 ಸಾವಿರ ನೌಕರರು ಕೆಲಸ ಮಾಡುತ್ತಿದ್ದು, 7 ಸಾವಿರ ನೌಕರರು ಐಟಿ ಆಧಾರಿತ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದಾರೆ ಎಂದು ಪ್ರೇಂಜಿ ಹೇಳಿದರು.

ಪ್ರಸ್ತುತ ಚೀನಾ ಬಹಳ ಮುಖ್ಯವಾದ ಐಟಿ ಮಾರುಕಟ್ಟೆಯಾಗಿದೆ. ಇನ್ನೆರಡು ವರ್ಷದಲ್ಲಿ ಅಲ್ಲಿ ಅಂಗಡಿ ತೆರೆಯುವುದು ನಮ್ಮ ಉದ್ದೇಶ ಎಂದು ಪ್ರೇಂಜಿ ತಿಳಿಸಿದರು.

(ಇನ್ಫೋ ವಾರ್ತೆ)

ಮುಖಪುಟ / ಐಟಿ - ಬಿಟಿ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X