ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪರಿಸರ ಮಿತ್ರ ಪೆಟ್ರೋಲು- ಇದು ಎಸ್ಸೆಂ ಕೃಷ್ಣ ‘ಹಸಿರು’ ಉಡುಗೊರೆ

By Staff
|
Google Oneindia Kannada News

ಪರಿಸರ ಮಿತ್ರ ಪೆಟ್ರೋಲು- ಇದು ಎಸ್ಸೆಂ ಕೃಷ್ಣ ‘ಹಸಿರು’ ಉಡುಗೊರೆ
ಸೆಪ್ಟೆಂಬರ್‌ನಿಂದ 5% ಇಥೆನಾಲ್‌ ಉಳ್ಳ ಪೆಟ್ರೋಲು ನಿಮ್ಮ ಗಾಡಿಗೆ

ಬೆಂಗಳೂರು : ಐದು ಪ್ರತಿಶತ ಇಥೆನಾಲ್‌ ಹಾಗೂ ಪೆಟ್ರೋಲ್‌ನ ಮಿಶ್ರಣ ಸೆಪ್ಟೆಂಬರ್‌ ತಿಂಗಳ ಕೊನೆ ಹೊತ್ತಿಗೆ ಬೆಂಗಳೂರಿಗರಿಗೆ ಲಭ್ಯವಾಗಲಿದೆ. ಇದು ಪರಿಸರ ಮಿತ್ರ ಪೆಟ್ರೋಲು.

ಖಾದ್ಯೇತರ ತೈಲಗಳ ಉತ್ಪಾದನೆಗೆ ವೈಜ್ಞಾನಿಕ ಕಾರ್ಯತಂತ್ರ ಎಂಬ ವಿಷಯ ಕುರಿತು ನಗರದಲ್ಲಿ ಭಾನುವಾರದವರೆಗೆ (ಸೆ.07) ನಡೆದ ಎರಡು ದಿನಗಳ ಕಮ್ಮಟದಲ್ಲಿ ಮುಖ್ಯಮಂತ್ರಿ ಎಸ್ಸೆಂ ಕೃಷ್ಣ ಅವರ ಭಾಷಣವನ್ನು ಪರಿಸರ ಮತ್ತು ಜೀವಿಶಾಸ್ತ್ರ ಖಾತೆ ಸಚಿವ ಅಲ್ಲಂ ವೀರಭದ್ರಪ್ಪ ಓದಿದರು. ಆ ಭಾಷಣದಲ್ಲಿ ಕೃಷ್ಣ ಹೊಸ ಪೆಟ್ರೋಲ್‌ ವಿಷಯ ಪ್ರಸ್ತಾಪಿಸಿದ್ದರು.

ರಾಜ್ಯದಲ್ಲಿ ಜೈವಿಕ ಇಂಧನ ಅಭಿವೃದ್ಧಿ ಪಡಿಸುವ ಕೆಲಸ ಆಗಬೇಕಿದ್ದು, ಇದಕ್ಕಾಗಿ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಹಾಗೂ ಅಭಿವೃದ್ಧಿ ಆಯುಕ್ತರ ನಾಯಕತ್ವದಲ್ಲಿ ಒಂದು ಸಮಿತಿಯನ್ನು ರಚಿಸಿರುವುದಾಗಿ ಭಾಷಣದಲ್ಲಿ ಬರೆದಿದ್ದ ಕೃಷ್ಣ, ಇಂಧನದ ವಿಷಯದಲ್ಲಿ ರಾಜ್ಯ ಸ್ವಾಯತ್ತವಾಗುವ ಹಾದಿಯಲ್ಲಿ ಕೆಲಸ ಮಾಡಿರೆಂದು ಕರೆ ಕೊಟ್ಟಿದ್ದರು. ಇಥೆನಾಲ್‌ ಮೇಲಿನ ಸುಂಕದಲ್ಲಿ 50 ಪೈಸೆ ಕಡಿತ ಮಾಡುವುದಾಗಿಯೂ ಅವರು ಹೇಳಿದ್ದರು.

ಐದು ಪ್ರತಿಶತ ಇಥೆನಾಲ್‌ ಉಳ್ಳ ಪೆಟ್ರೋಲನ್ನು ಬೆಂಗಳೂರು ಸೇರಿದಂತೆ ರಾಜ್ಯದ 7 ಜಿಲ್ಲೆಗಳಲ್ಲಿ ಸದ್ಯದಲ್ಲೇ ಬಳಕೆಗೆ ತರಲಾಗುವುದು. ಇದು ವಾಹನಗಳು ಉಗುಳುವ ಹೊಗೆಯ ಪ್ರಮಾಣವನ್ನು ಸಾಕಷ್ಟು ತಗ್ಗಿಸಲಿದೆ ಎಂದು ಕೃಷ್ಣ ತಮ್ಮ ಭಾಷಣದಲ್ಲಿ ತಿಳಿಸಿದ್ದರು.

(ಇನ್ಫೋ ವಾರ್ತೆ)

ಮುಖಪುಟ / ಕೃಷ್ಣಗಾರುಡಿ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X