ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಹಾರಾಜಾ ಸಂಜೆ ಕಾಲೇಜಲ್ಲಿ ಹಾಡು-ಹಸೆ, ಮಾತು-ಮಂಥನ

By Staff
|
Google Oneindia Kannada News

ಮಹಾರಾಜಾ ಸಂಜೆ ಕಾಲೇಜಲ್ಲಿ ಹಾಡು-ಹಸೆ, ಮಾತು-ಮಂಥನ
ಸೆ.12ನೇ ತಾರೀಕು ಶಿಕಾರಿಪುರ ಹರಿಹರೇಶ್ವರರಿಂದ ಪಠ್ಯೇತರ ಚಟುವಟಿಕೆಗಳ ಉದ್ಘಾಟನೆ

ಮೈಸೂರು : ಇಲ್ಲಿನ ಮಹಾರಾಜಾ ಸಂಜೆ ಕಾಲೇಜಲ್ಲಿ ಪ್ರಸಕ್ತ ಶೈಕ್ಷಣಿಕ ವರ್ಷದ ಪಾಠ ಶುರುವಾಗಿ ತಿಂಗಳುಗಳು ಕಳೆದಿರುವುದರಿಂದ, ಈಗ ಹಾಡು- ಹಸೆ- ಆಟ- ಮಾತು ಮಂಥನದ ಸಮಯ. ಸೆಪ್ಟೆಂಬರ್‌ 12 ನೇ ತಾರೀಕಿನಿಂದ ಇಲ್ಲಿನ ಪಠ್ಯೇತರ ಚಟುವಟಿಕೆಗಳು ಅಧಿಕೃತವಾಗಿ ಪ್ರಾರಂಭವಾಗಲಿವೆ.

ಮೈಸೂರು ವಿಶ್ವವಿದ್ಯಾಲಯದ ವ್ಯಾಪ್ತಿಯ ಮಹಾರಾಜಾ ಸಂಜೆ ಕಾಲೇಜು ಸೆ.12 ಸಂಜೆ 5.30 ಗಂಟೆಗೆ ಪಠ್ಯೇತರ ಚಟುವಟಿಕೆಗಳನ್ನು ಉದ್ಘಾಟಿಸಲು ಸಮಾರಂಭವೊಂದನ್ನು ಆಯೋಜಿಸಿದೆ. ಜೂನಿಯರ್‌ ‘ಬಿ’ ಕಾಲೇಜಲ್ಲಿ ಸಮಾರಂಭ ಏರ್ಪಾಟಾಗಿದೆ. ಅಮೆರಿಕೆಯಲ್ಲಿ ಬರಹಗಾರರ ಬಳಗದ ಬೆನ್ನು ತಟ್ಟಿ ಬಂದು ಈಗ ಕರ್ನಾಟಕದಲ್ಲಿ ಸಾಹಿತ್ಯ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುತ್ತಿರುವ ಶಿಕಾರಿಪುರ ಹರಿಹರೇಶ್ವರ ಪಠ್ಯೇತರ ಚಟುವಟಿಕೆಗಳನ್ನು ಉದ್ಘಾಟಿಸುವರು.

ಕವಿ, ವಿಮರ್ಶಕ ಹಾಗೂ ಪ್ರಾಧ್ಯಾಪಕ ಸಿ.ನಾಗಣ್ಣ, ಸಾಹಿತಿ ಪ್ರೊ.ಕೆ.ಭೈರವಮೂರ್ತಿ ಸಮಾರಂಭದ ಮುಖ್ಯ ಅತಿಥಿಗಳು. ಖ್ಯಾತ ಅರ್ಥಶಾಸ್ತ್ರಜ್ಞರೂ ಆಗಿರುವ ಕಾಲೇಜಿನ ಪ್ರಾಂಶುಪಾಲ ಪ್ರೊ.ಆರ್‌.ಕೇಶವ ಸಮಾರಂಭದ ಅಧ್ಯಕ್ಷತೆ ವಹಿಸಲಿದ್ದಾರೆ. ಸುಗಂಧ ಜಯಪ್ಪ ಹಾಗೂ ಶಾಂತಾ ಜಗದೀಶ್‌ ಅವರ ಗಾಯನ ಸಮಾರಂಭದ ಸೆಳಕುಗಳಲ್ಲೊಂದು. ಕಾರ್ಯಕ್ರಮಕ್ಕೆ ಬಂದು, ವಿದ್ಯಾರ್ಥಿಗಳ ಹುಮ್ಮಸ್ಸನ್ನು ಹೆಚ್ಚಿಸಿ ಎನ್ನುವುದು ಕಾಲೇಜಿನ ಮುಕ್ತ ಆಮಂತ್ರಣ. ಹೆಚ್ಚಿನ ವಿವರಗಳಿಗೆ ಫೋನ್‌ ಮಾಡಿ- (0821) 2410 035.

(ಇನ್ಫೋ ವಾರ್ತೆ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X