ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೈಸೂರು ದಸರಾದಲ್ಲಿ ಮಸ್ತ್‌ ಮಜಾ? ಗ್ರೀನ್‌ ಕಾರ್ಡ್‌ ಕೊಳ್ಳಿ

By Staff
|
Google Oneindia Kannada News

ಮೈಸೂರು ದಸರಾದಲ್ಲಿ ಮಸ್ತ್‌ ಮಜಾ? ಗ್ರೀನ್‌ ಕಾರ್ಡ್‌ ಕೊಳ್ಳಿ
ನಾಲ್ವರಿಗೆ 10 ಸಾವಿರ ರುಪಾಯಿ. ಆಮೇಲೆ ಹೋದಲ್ಲೆಲ್ಲ ಪುಕ್ಕಟೆ ಪ್ರವೇಶ

ಮೈಸೂರು : 10 ಸಾವಿರ ರುಪಾಯಿ ಕೊಡಿ. ಗ್ರೀನ್‌ ಕಾರ್ಡ್‌ ಪಡೆಯಿರಿ. ಜಂಬೂ ಸವಾರಿ, ಅರಮನೆಯ ಸಂಗೀತೋತ್ಸವ, ಬನ್ನಿಮಂಟಪದ ಪಂಜಿನ ಕವಾಯತು, ಫ್ಯಾಂಟಸಿ ಪಾರ್ಕ್‌, ಕೆಆರ್‌ಎಸ್‌ನ ಜಲಲ ಕಾರಂಜಿ, ರಂಗನತಿಟ್ಟಿನ ಗೂಡುಹಕ್ಕಿ, ಮೃಗಾಲಯದ ಮೂಕ ಪ್ರಾಣಿಗಳು, ಜಗನ್ಮೋಹನ ಅರಮನೆ- ಇನ್ನೂ ಏನೆಲ್ಲವನ್ನೂ ಉಚಿತವಾಗಿ ನೋಡಿ. ನಿಮ್ಮ ಗ್ರೀನ್‌ ಕಾರ್ಡಿನ ಆಯಸ್ಸು 15 ದಿನ ಮಾತ್ರ.

ದಂಪತಿ ಹಾಗೂ ಇಬ್ಬರು ಮಕ್ಕಳು ಅಥವಾ ಕುಟುಂಬದ ಇತರೆ ಯಾರಾದರೂ ಇಬ್ಬರು ಸೇರಿದಂತೆ ನಾಲ್ವರು ಒಂದು ಗ್ರೀನ್‌ ಕಾರ್ಡಿನ ಸೌಲಭ್ಯ ಪಡೆದು ದಸರಾದಲ್ಲಿ ಮಜಾ ಮಾಡಬಹುದು. ಸಚಿವರಾದ ಎಚ್‌.ವಿಶ್ವನಾಥ್‌ ಹಾಗೂ ರಾಣಿ ಸತೀಶ್‌ ಶುಕ್ರವಾರ (ಸೆ.05) ನಡೆದ ದಸರಾ ಪೂರ್ವ ಸಿದ್ಧತಾ ಸಭೆಯಲ್ಲಿ ಈ ಬಾರಿಯ ದಸರಾ ಪ್ರಯುಕ್ತ ಗ್ರೀನ್‌ಕಾರ್ಡ್‌ ಆಫರಿನ ವಿಷಯ ತಿಳಿಸಿದರು.

ಲಕ್ಷಾಂತರ ಮಂದಿ ಉಚಿತವಾಗಿ ದಸರಾ ಉತ್ಸವವನ್ನು ನೋಡುತ್ತಾರೆ. ಕೆಲವರಾದರೂ ಹಣ ಕೊಡುವ ಮೂಲಕ ಕಾರ್ಯಕ್ರಮಕ್ಕೆ ಪ್ರೋತ್ಸಾಹ ಕೊಡಲಿ ಎಂಬುದು ಸರ್ಕಾರದ ಉದ್ದೇಶ ಎಂದು ವಿಶ್ವನಾಥ್‌ ಎಂದಿನ ತಮ್ಮ ತೀರಾ ಮೆಲುದನಿಯಲ್ಲಿ ಹೇಳಿದರು.

ಸೋಮವಾರದೊಳಗೆ (ಸೆ.8) ದಸರಾ ಉತ್ಸವದ ಎಲ್ಲಾ ಕಾರ್ಯಕ್ರಮಗಳ ಅಂತಿಮ ಪಟ್ಟಿ ತಯಾರಿಸಬೇಕು ಎಂದು ಸಮಿತಿ ಸದಸ್ಯರಿಗೆ ಸಭೆಯಲ್ಲಿ ಸೂಚಿಸಲಾಯಿತು. ದಸರಾ ಮುಗಿದ ವಾರದೊಳಗೆ ಖರ್ಚು ಹಾಗೂ ಉಳಿದ ಹಣದ ಲೆಕ್ಕ ಕೊಡಬೇಕೆಂದು ವಿವಿಧ ಇಲಾಖೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಕುಮಾರನಾಯಕ್‌ ತಾಕೀತು ಮಾಡಿದರು. ದಸರಾ ಉತ್ಸವದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಪ್ರಾಯೋಜಿಸಲು ಈ ಬಾರಿ ಅನೇಕರು ಮುಂದೆ ಬಂದಿದ್ದು, ದಸರಾ ರಂಗೇರಲಿದೆ ಎಂದು ಸಚಿವರು ಹೇಳಿದರು.

(ಇನ್ಫೋ ವಾರ್ತೆ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X