• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಬಿ. ಎ. ಪ್ರಭಾಕರ ರೈ ‘ಮದಪ್ಪಂದಿ ನೆಂಪು’: ಪ್ರಥಮ ತುಳು ಆತ್ಮಕತೆ

By Staff
|

ಬಿ. ಎ. ಪ್ರಭಾಕರ ರೈ ‘ಮದಪ್ಪಂದಿ ನೆಂಪು’: ಪ್ರಥಮ ತುಳು ಆತ್ಮಕತೆ

ಹೊಸ ಕವಲುಗಳ ಸಂಭ್ರಮದಲ್ಲಿ ಪಲ್ಲವಿಸುತ್ತಿರುವ ತುಳು ಸಾಹಿತ್ಯ

ಮಂಗಳೂರು: :ಬಿ. ಎ. ಪ್ರಭಾಕರ ರೈ ಅವರ ಆತ್ಮಕತೆ ‘ಮದಪ್ಪಂದಿ ನೆಂಪು’ ಸೆಪ್ಟೆಂಬರ್‌ 10ರಂದು ಬಿಡುಗಡೆಯಾಗಲಿದ್ದು ತುಳು ಸಾಹಿತ್ಯ ಲೋಕದ ಪ್ರಪ್ರಥಮ ಆತ್ಮಕಥೆ ಎಂಬ ಅಗ್ಗಳಿಕೆಗೆ ಪಾತ್ರವಾಗಿದೆ.

ರೈಯವರ ವೃತ್ತಿ ಬದುಕಿನ ಅನುಭವಗಳನ್ನು ಈ ಆತ್ಮಕತೆ ಬಿಂಬಿಸುತ್ತದೆ. ತಮ್ಮ 18ನೇ ವಯಸ್ಸಿನಲ್ಲಿಯೇ ವಿಜಯಾ ಬ್ಯಾಂಕ್‌ಗೆ ಸೇರಿ ವೃತ್ತಿ ಬದುಕು ಆರಂಭಿಸಿದ ರೈ ಅವರದು ಬ್ಯಾಂಕಿಂಗ್‌ ಕ್ಷೇತ್ರಗಳಲ್ಲಿ 42 ವರ್ಷಗಳ ಕಾಲ ದುಡಿದ ಅನುಭವ.

ವೃತ್ತಿಯಲ್ಲಿ ಅನುಭವಿಸಿದ ಮಾನಸಿಕ ಕ್ಲೇಶಗಳು, ಕಾರ್ಯಕ್ಷೇತ್ರದಲ್ಲಿ ಕಂಡು ಬರುವ ಅಸೂಯೆಯ ಬಗ್ಗೆ ಪುಸ್ತಕದಲ್ಲಿ ರೈ ಬರೆದಿದ್ದಾರೆ. ರೈಯವರು ಸಮಾಜ ಸೇವಾ ಕಾರ್ಯಗಳಲ್ಲೂ ತಮ್ಮನ್ನು ತೊಡಗಿಸಿಕೊಂಡಿದ್ದವರು. ರಾಜ್ಯ ಸರಕಾರ ಹಾಗೂ ಧರ್ಮಸ್ಥಳದ ವೀರೇಂದ್ರ ಹೆಗ್ಗಡೆ ಹಾಗೂ ಇತರ ಸಂಘ ಸಂಸ್ಥೆಗಳು ಅವರನ್ನು ಪುರಸ್ಕರಿಸಿವೆ.

ನಿವೃತ್ತಿಯ ನಂತರ ಸಾಹಿತ್ಯದತ್ತ ಹೊರಳಿದ ರೈ, ಆರು ಕನ್ನಡ ಹಾಗೂ ನಾಲ್ಕು ತುಳು ಪುಸ್ತಕಗಳನ್ನು ಬರೆದಿದ್ದಾರೆ. ಪ್ರಸ್ತುತ ‘ಅವಾಂತರ’ ಎಂಬ ತುಳು ಕಾದಂಬರಿ ಮುದ್ರಣಕ್ಕೆ ಸಿದ್ಧವಾಗುತ್ತಿದೆ. ‘ಪರಿವರ್ತನೆ’ ಎಂಬ ಸಣ್ಣ ಕಥಾ ಸಂಕಲನಕ್ಕೆ 2002ರಲ್ಲಿ ತುಳು ಸಾಹಿತ್ಯ ಅಕಾಡೆಮಿಯ ಪ್ರಶಸ್ತಿ ಸಂದಿದೆ.

ಮಾಜಿ ಮುಖ್ಯಮಂತ್ರಿ ಎಂ. ವೀರಪ್ಪ ಮೊಯಿಲಿ ರೈಯವರ ಆತ್ಮಕತೆಯನ್ನು ಅನಾವರಣಗೊಳಿಸಲಿದ್ದಾರೆ. ಸಮಾರಂಭದಲ್ಲಿ ಮಂಗಳೂರು ವಿಶ್ವ ವಿದ್ಯಾಲಯದ ಕನ್ನಡ ಉಪನ್ಯಾಸಕ ಡಾ. ಕೆ. ಚಿನ್ನಪ್ಪ ಗೌಡ ಪುಸ್ತಕವನ್ನು ಪರಿಚಯಿಸಲಿದ್ದಾರೆ. ತುಳು ಸಾಹಿತಿ ಅಮೃತ ಸೋಮೇಶ್ವರ ಹಾಗೂ ತುಳು ಅಕಾಡೆಮಿ ಅಧ್ಯಕ್ಷ ವಾಮನ ನಂದಾವರ ಅವರು ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುವರು.

(ಇನ್ಫೋ ವಾರ್ತೆ)

ಮುಖಪುಟ / ವಾರ್ತೆಗಳು

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more