ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೆಂಗಳೂರಿನ ಸಾಲು ಮರಗಳನ್ನು ಕಾಪಾಡ್ರಪ್ಪೋ ಕಾಪಾಡಿ

By Staff
|
Google Oneindia Kannada News

ಬೆಂಗಳೂರಿನ ಸಾಲು ಮರಗಳನ್ನು ಕಾಪಾಡ್ರಪ್ಪೋ ಕಾಪಾಡಿ
ಮರಗಣತಿ ನಡೆಸಲು ಯಲ್ಲಪ್ಪ ರೆಡ್ಡಿ ಸಲಹೆ

ಬೆಂಗಳೂರು : ನಗರದಲ್ಲಿ ಅಭಿವೃದ್ಧಿ ಕಾರ್ಯಗಳಿಗೋಸ್ಕರ ಮರಗಳನ್ನು ಕಡಿಯುವ ಕಾರ್ಯ ಒಂದೆಡೆ ಮುಂದುವರೆದಿದ್ದರೆ ಮತ್ತೊಂದು ಕಡೆ ಸುರಿವ ಮಳೆಗೆ ಭಾರಗೊಂಡು ಉರುಳುತ್ತಿವೆ. ತೀರಾ ವೇಗವಾಗಿ ನಡೆಯುತ್ತಿರುವ ಅವ್ಯವಸ್ಥಿತ ರಸ್ತೆ ಅಗಲೀಕರಣ ಕಾರ್ಯದಿಂದಾಗಿ ಹಲವು ಬೃಹತ್‌ ಗಾತ್ರದ ಮರಗಳನ್ನು ಉರುಳಿಸಲಾಗುತ್ತಿದೆ.

ನಗರದಲ್ಲಿ ಹೀಗೆ ಮರಗಳು ಖಾಲಿಯಾಗುತ್ತಿರುವುದಕ್ಕೆ ಕಾರ್ಪೊರೇಷನ್‌ ಮತ್ತು ಕರ್ನಾಟಕ ವಿದ್ಯುತ್‌ ಪ್ರಸರಣ ನಿಗಮವೇ ಕಾರಣ ಎಂದು ಮಾಜಿ ಐಎಫ್‌ಎಸ್‌ ಅಧಿಕಾರಿ ಎಸ್‌. ಜಿ. ನೇಗಿನಹಾಳ್‌ ಆರೋಪಿಸುತ್ತಾರೆ. ಮರಗಳನ್ನು ಕಡಿಯಬಾರದು ಎಂಬ ಕಾರಣಕ್ಕಾಗಿ ಅದರ ಟೊಂಗೆಗಳನ್ನು ಸಿಕ್ಕ ಸಿಕ್ಕ ಹಾಗೆ ಕಡಿಯುವುದರಿಂದ ಮರ ತನ್ನ ಸಮತೋಲನ ಕಳೆದುಕೊಂಡು ಮಳೆಗೆ ಬಲಿಯಾಗುತ್ತದೆ. ರಸ್ತೆ ಅಗೆತವೂ ಮರದ ಬುಡಗಳನ್ನು ಸಡಿಲಗೊಳಿಸುತ್ತದೆ.

ಮರದ ಬೇರುಗಳ ಮೇಲೆ ಟಾರು ಬಳಿಯುವುದರಿಂದ ಬೇರುಗಳು ಅಧಿಕ ಉಷ್ಣತೆಯನ್ನು ಸಹಿಸಿಕೊಳ್ಳಬೇಕಾಗುತ್ತದೆ. ಇದರಿಂದ ಬೇರು ಕೊಳೆತು ಮರಗಳು ಬುಡ ಸಮೇತ ಉರುಳುತ್ತವೆ ಎಂದು ಪರಿಸರವಾದಿ ಲಿಯೋ ಸಲ್ಡಾನಾ ಹೇಳುತ್ತಾರೆ. ಪರಿಸರವಾದಿ ಎನ್‌. ಯಲ್ಲಪ್ಪ ರೆಡ್ಡಿ ಕೂಡ ಸಾಲು ಮರಗಳ ಬಗ್ಗೆ ಕಾಳಜಿಯ ಮಾತಾಡುತ್ತಾರೆ. ಅವರ ಪ್ರಕಾರ ಜನಗಣತಿಯಂತೆಯೇ ಮರಗಣತಿಯನ್ನೂ ಸರಕಾರ ಹಮ್ಮಿಕೊಳ್ಳಬೇಕು. ಇದರಿಂದ ನಗರ ಆರೋಗ್ಯವಂತವಾಗಿ ಉಳಿದುಕೊಳ್ಳುತ್ತದೆ. ತುಂಬಾ ಹಳೆಯ ಮರಗಳು, ಎಳೆಯ ಮರಗಳು ಹಾಗೂ ವಿವಿಧ ಜಾತಿಯ ಮರಗಳ ಬಗ್ಗೆ ಮರಗಣತಿ ನಡೆಸಿ ಲೆಕ್ಕವಿಟ್ಟುಕೊಳ್ಳಬೇಕು. ಅಲ್ಲದೆ ಮರಗಳನ್ನು ನೋಡಿಕೊಳ್ಳುವ ಉಸ್ತುವಾರಿಯನ್ನೂ ಆಯಾ ಪ್ರದೇಶದ ಜನರಿಗೆ ಒಪ್ಪಿಸಬೇಕು ಎಂದು ಯಲ್ಲಪ್ಪ ರೆಡ್ಡಿ ಸಲಹೆ ಮಾಡುತ್ತಾರೆ.

ಹೊಸ ಗಿಡಗಳ ನೆಡುವ ಮಾತು ಹಾಗಿರಲಿ. ಇರುವ ಸಾಲು ಮರಗಳ ಉಳಿಸಿಕೊಳ್ಳುವುದೇ ಇಂದಿನ ಜರೂರತ್ತು ಅಲ್ಲವೇ ?

(ಇನ್ಫೋ ವಾರ್ತೆ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X